ಕಲ್ಲಂಗಡಿ ಹಣ್ಣಿನ ಕೆಂಪು ಭಾಗವನ್ನು ಮಾತ್ರ ತಿಂದು ಅದರ ಸಿಪ್ಪೆಯ ಜೊತೆ ಇರುವ ಬಿಳಿಯ ಭಾಗವನ್ನು ಹಾಗೆಯೇ ಬಿಸಾಡುವುದು ರೂಢಿ.... ಅದರ ಬದಲು ಸಿಹಿಯಾದ ಕೆಂಪು ಭಾಗವನ್ನು ಕತ್ತರಿಸಿ ತಿಂದು, ಸಪ್ಪೆಯಾಗಿರುವ ಬಿಳಿಯ ಭಾಗವನ್ನು ಹಾಕಿ ಗರಿ ಗರಿ ದೋಸೆ ಮಾಡಿಕೊಳ್ಳಬಹುದು.... ಇಲ್ಲಿದೆ ಮಾಡುವ ವಿಧಾನ...
ಸಾಮಗ್ರಿಗಳು :
ಹೆಚ್ಚಿದ ಕಲ್ಲಂಗಡಿ ಸಿಪ್ಪೆ : 2 ಕಪ್ (ಸಿಪ್ಪೆಯ ಹಸಿರು ಭಾಗ ತೆಗೆದು ಒಳಗಿನ ಬಿಳಿಯ ಭಾಗವನ್ನು ಹೆಚ್ಚಿಕೊಳ್ಳಿ)
ಅಕ್ಕಿ : 2 ಕಪ್
ಅವಲಕ್ಕಿ : 1 ಟೇಬಲ್ ಚಮಚ
ಮೆಂತ್ಯ : 1/4 ಚಮಚ
ಉದ್ದಿನ ಬೇಳೆ : 1/2 ಚಮಚ
ಉಪ್ಪು : ರುಚಿಗೆ
ಎಣ್ಣೆ : ದೋಸೆ ತವಾಗೆ ಸವರಲು
ವಿಧಾನ :
ಅಕ್ಕಿ, ಅವಲಕ್ಕಿ, ಉದ್ದಿನ ಬೇಳೆ, ಮೆಂತ್ಯ ಕಾಳು ಎಲ್ಲವನ್ನೂ ತೊಳೆದು ಒಟ್ಟಿಗೆ ಸೇರಿಸಿ 4-5 ಘಂಟೆಗಳ ಕಾಲ ನೆನೆಸಿಡಿ.
ನಂತರ ನೀರು ಬಸಿದಿಟ್ಟುಕೊಂಡು ಹೆಚ್ಚಿದ ಕಲ್ಲಂಗಡಿ ಜೊತೆ ಸೇರಿಸಿ ರುಬ್ಬಿ. ಬೇಕಿದ್ದಲ್ಲಿ ಬಸಿದಿಟ್ಟುಕೊಂಡ ನೀರನ್ನೇ ಸ್ವಲ್ಪ ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟನ್ನು 7-8 ಘಂಟೆಗಳ ಕಾಲ ಹುದುಗಲು ಬಿಡಿ. ರಾತ್ರಿ ರುಬ್ಬಿಟ್ಟರೆ ಬೆಳಿಗ್ಗೆ ತಿಂಡಿಗೆ ಮಾಡಬಹುದು. ಇದಕ್ಕೆ ಉಪ್ಪು, ಬೇಕಿದ್ದಲ್ಲಿ ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ದೋಸೆ ತವಾಗೆ ಎಣ್ಣೆ ಸವರಿ ಚೆನ್ನಾಗಿ ಕಾಯಿಸಿ ತೆಳ್ಳಗೆ ದೋಸೆ ಮಾಡಿ ಮುಚ್ಚಿ ಬೇಯಿಸಿ.
ಗರಿಗರಿಯಾದ ಕಲ್ಲಂಗಡಿ ದೋಸೆಯನ್ನು ಕಾಯಿ ಚಟ್ನಿ ಜೊತೆ ಸವಿಯಿರಿ.

ಸಲಹೆಗಳು :
1) ಇದೇ ಹಿಟ್ಟಿನಿಂದ ದೋಸೆಯ ಬದಲು ತೆಳ್ಳೇವು ಕೂಡ ಮಾಡಬಹುದು.
2) ನಿಮಗೆ ಇಷ್ಟವಿದ್ದರೆ ದೋಸೆ ಮಾಡುವಾಗ ಎಣ್ಣೆ / ತುಪ್ಪ ಹಾಕಿಕೊಳ್ಳಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ