ಸಾಮಗ್ರಿಗಳು :
ಅರ್ಧ ಇಂಚು ಉದ್ದ ಹೆಚ್ಚಿದ ಬೇಬಿ ಕಾರ್ನ್ : 3 ಕಪ್
ಉದ್ದ ಹೆಚ್ಚಿದ ಕ್ಯಾಪ್ಸಿಕಂ : 1 ಕಪ್
ಸಣ್ಣ ಹೆಚ್ಚಿದ ಸ್ಪ್ರಿಂಗ್ ಆನಿಯನ್ : 2 ಕಪ್ (ಅಥವಾ ಉದ್ದ ಹೆಚ್ಚಿದ ಈರುಳ್ಳಿ: 2 ಕಪ್)
ತುಂಬಾ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ : 1 ಟೇಬಲ್ ಚಮಚ
ತುಂಬಾ ಸಣ್ಣಗೆ ಹೆಚ್ಚಿದ ಶುಂಠಿ : 1/2 ಟೇಬಲ್ ಚಮಚ
ತುಂಬಾ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ : 1 ಟೇಬಲ್ ಚಮಚ
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು : 2 ಟೇಬಲ್ ಚಮಚ
ಮೈದಾ ಹಿಟ್ಟು : 1 ಕಪ್
ಕಾರ್ನ್ ಫ್ಲೋರ್ : 3/4 ಕಪ್
ಅಚ್ಚ ಮೆಣಸಿನ ಪುಡಿ : 1 ಚಮಚ
ಟೊಮೇಟೊ ಸಾಸ್ : 2 ಟೇಬಲ್ ಚಮಚ
ಸೋಯಾ ಸಾಸ್ : 1 ಟೇಬಲ್ ಚಮಚ
ಗ್ರೀನ್ ಚಿಲ್ಲಿ ಸಾಸ್ : 3 ಟೇಬಲ್ ಚಮಚ
ಸಕ್ಕರೆ : 1/4 ಚಮಚ
ಲಿಂಬು ರಸ : 1/2 ಚಮಚ (ಅಥವಾ ವಿನೆಗರ್ ಸ್ವಲ್ಪ)
ಉಪ್ಪು : ರುಚಿಗೆ
ಕರಿಯಲು ಮತ್ತು ಹುರಿಯಲು : ಎಣ್ಣೆ
ವಿಧಾನ :
ಒಂದು ಚಮಚ ಕಾರ್ನ್ ಫ್ಲೋರ್ ಅನ್ನು ಒಂದು ಕಪ್ ಗೆ ಹಾಕಿ ಕಾಲು ಕಪ್ ನೀರು ಹಾಕಿ ಕಲಕಿಡಿ. ಕರಿಯಲು ಎಣ್ಣೆ ಕಾಯಲು ಇಟ್ಟುಕೊಳ್ಳಿ. ಉಳಿದ ಕಾರ್ನ್ ಫ್ಲೋರ್ ಮತ್ತು ಮೈದಾ ಸೇರಿಸಿ ಅದಕ್ಕೆ ಉಪ್ಪು, ಮೆಣಸಿನ ಪುಡಿ, ನೀರು ಹಾಕಿ ಗಂಟಿಲ್ಲದಂತೆ ಕಲಸಿ. ಕಲಸಿದ ಹಿಟ್ಟು ಬಜ್ಜಿ ಹಿಟ್ಟಿನಕಿಂತ ತೆಳ್ಳಗಿರಲಿ. ಇದಕ್ಕೆ ಹೆಚ್ಚಿಟ್ಟ ಬೇಬಿ ಕಾರ್ನ್ ಹಾಕಿ ಕಲಸಿಕೊಂಡು ಕಾದ ಎಣ್ಣೆಯಲ್ಲಿ ಬಿಡಿ ಬಿಡಿಯಾಗುವಂತೆ ಬಿಟ್ಟು ಗರಿ ಗರಿಯಾಗಿ ಕರಿದುಕೊಳ್ಳಿ. ಅಗಲವಾದ ಪ್ಯಾನ್ ಗೆ 3-4 ಟೇಬಲ್ ಚಮಚ ಎಣ್ಣೆ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿಕೊಂಡ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ಇದಕ್ಕೆ ಹೆಚ್ಚಿಕೊಂಡ ಕ್ಯಾಪ್ಸಿಕಂ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ನಂತರ ಹೆಚ್ಚಿದ ಸ್ಪ್ರಿಂಗ್ ಆನಿಯನ್ ಅಲ್ಲಿ 2 ಚಮಚ ತೆಗೆದಿಟ್ಟು ಉಳಿದದ್ದನ್ನು ಹಾಕಿ ಒಮ್ಮೆ ಫ್ರೈ ಮಾಡಿ. ಇದಕ್ಕೆ ಸೋಯಾ ಸಾಸ್, ಟೊಮೇಟೊ ಸಾಸ್, ಗ್ರೀನ್ ಚಿಲ್ಲಿ ಸಾಸ್, ಸ್ವಲ್ಪ ಉಪ್ಪು, ಸಕ್ಕರೆ, ಲಿಂಬು ರಸ / ವಿನೆಗರ್ ಎಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಮೊದಲೇ ಕಲಕಿಟ್ಟ ಕಾರ್ನ್ ಫ್ಲೋರ್ ನೀರನ್ನು ಹಾಕಿ ಕೈ ಬಿಡದೆ ಕಲಕುತ್ತಿರಿ ಗ್ರೇವಿ ತುಂಬಾ ದಪ್ಪಗಾದರೆ ಇನ್ನು ಸ್ವಲ್ಪ ನೀರು ಹಾಕಿಕೊಂಡು ಒಂದೆರಡು ಕುದಿ ಬರುವವರೆಗೆ ಕಲಕುತ್ತಿರಿ. ನಂತರ ಕರಿದಿಟ್ಟುಕೊಂಡ ಬೇಬಿ ಕಾರ್ನ್ ಹಾಕಿ ಮಿಕ್ಸ್ ಮಾಡಿ ಉರಿ ಆರಿಸಿ. ಈಗ ಕೊತ್ತಂಬರಿ ಸೊಪ್ಪು ಮತ್ತು ಉಳಿದ ಸ್ಪ್ರಿಂಗ್ ಆನಿಯನ್ ಹಾಕಿ ಸರ್ವ್ ಮಾಡಿ.
ಸಲಹೆ : ಸ್ಪ್ರಿಂಗ್ ಆನಿಯನ್ ಇಲ್ಲದಿದ್ದಲ್ಲಿ ಈರುಳ್ಳಿ ಉದ್ದುದ್ದ ಹೆಚ್ಚಿ, ಬೆಳ್ಳುಳ್ಳಿ ಫ್ರೈ ಆದಮೇಲೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು.