ಸಾಮಗ್ರಿಗಳು:
ಪಾಲಕ್ ಸೊಪ್ಪು : 1 ಕಟ್ಟು (ಮಧ್ಯಮ ಗಾತ್ರದ ಕಟ್ಟು)
ಬಿಡಿಸಿದ ಹಸಿ ಬಟಾಣಿ (ಮಟರ್) : 2 ಕಪ್
ಸಣ್ಣ ಹೆಚ್ಚಿದ ಟೊಮೇಟೊ : 1.5 ಕಪ್
ಸಣ್ಣ ಹೆಚ್ಚಿದ ಈರುಳ್ಳಿ : 1 ಕಪ್
ಶುಂಠಿ : 1/4 ಇಂಚು
ಬೆಳ್ಳುಳ್ಳಿ : 3-4 ಎಸಳು
ಶುಂಠಿ ಬೆಳ್ಳುಳ್ಳಿ ಪೇಸ್ಟ್ : 1 ಚಮಚ
ಹಸಿಮೆಣಸಿನಕಾಯಿ : 1
ಅಚ್ಚ ಖಾರದ ಪುಡಿ : 1 ಚಮಚ
ಧನಿಯಾ ಪುಡಿ : 1/2 ಚಮಚ
ಗರಂ ಮಸಾಲಾ ಪುಡಿ : 1/2 ಚಮಚ
ಕಸೂರಿ ಮೇಥಿ : 1/2 ಚಮಚ
ಸಕ್ಕರೆ : 1/2 ಚಮಚ
ಜೀರಿಗೆ : 1/2 ಚಮಚ
ಎಣ್ಣೆ ಮತ್ತು ಬೆಣ್ಣೆ : ತಲಾ 1 ಚಮಚ
ಉಪ್ಪು: ರುಚಿಗೆ
ವಿಧಾನ :
ಚೆನ್ನಾಗಿ ತೊಳೆದ ಪಾಲಕ್ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಎಸಳು, ಹಸಿ ಮೆಣಸು ಎಲ್ಲವನ್ನು ಕುದಿಯುತ್ತಿರುವ ನೀರಿಗೆ ಹಾಕಿ ಸ್ಟವ್ ಆರಿಸಿ 30 ಸೆಕೆಂಡ್ ಮುಚ್ಚಿಡಿ. ನಂತರ ನೀರನ್ನು ಒಂದು ಪಾತ್ರೆಯಲ್ಲಿ ಬಸಿದಿಟ್ಟು, ಪಾಲಕ್ ಮಿಶ್ರಣವನ್ನು ಪ್ಲೇಟ್ ಗೆ ಹಾಕಿ ಆರಲು ಬಿಡಿ. ಪಾನ್ ಒಲೆಯ ಮೇಲಿಟ್ಟು ಎಣ್ಣೆ, ಬೆಣ್ಣೆ ಹಾಕಿ ಕಾಯಿಸಿ ಜೀರಿಗೆ ಹಾಕಿ ಫ್ರೈ ಮಾಡಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಹೆಚ್ಚಿದ ಟೊಮೇಟೊ, ಸ್ವಲ್ಪ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಟೊಮೇಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ. ನಂತರ ಹಸಿ ಬಟಾಣಿ ಹಾಕಿ ಒಂದು ಕಪ್ ನೀರು (ಪಾಲಕ್ ಬೇಯಿಸಿ ಬಸಿದ ನೀರನ್ನೇ ಹಾಕಿ) ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ, ಇತ್ತ ತಣ್ಣಗಾದ ಪಾಲಕ್ ಮಿಶ್ರಣವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಬಟಾಣಿ ಬೆಂದ ಮೇಲೆ ಅದಕ್ಕೆ ಧನಿಯಾ ಪುಡಿ, ಅಚ್ಚ ಖಾರದಪುಡಿ, ಗರಂ ಮಸಾಲಾ ಪುಡಿ ಹಾಕಿ ಮಿಕ್ಸ್ ಮಾಡಿ, ಪಾಲಕ್ ಪೇಸ್ಟ್, ಉಪ್ಪು, ಸಕ್ಕರೆ ಹಾಕಿ, ಎಷ್ಟು ಬೇಕು ನೋಡಿಕೊಂಡು ಬಸಿದಿಟ್ಟ ನೀರು ಹಾಕಿ, ಕಸೂರಿ ಮೇಥಿ ಹಾಕಿ ಕುದಿಸಿ. ಪುಲ್ಕ, ರೋಟಿ, ಚಪಾತಿ, ಪೂರಿ ಜೊತೆ ಸವಿಯಲು ಪಾಲಕ್ ಮಟರ್ / green peas with spinach sabji ಸಿದ್ಧ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ