ಮಾಡುವ ವಿಧಾನ: ಬೆಂಡೆಕಾಯಿಯನ್ನು ತೊಳೆದು ನೀರು ಒರೆಸಿಕೊಂಡು ಸಿಗಿದು ಅರ್ಧ ಇಂಚು ಉದ್ದಕ್ಕೆ ಹೆಚ್ಚಿಕೊಳ್ಳಿ. ಚಿಕ್ಕ ಒಗ್ಗರಣೆ ಪಾತ್ರೆಗೆ 2 ಚಮಚ ಎಣ್ಣೆ ಹಾಕಿ ಕಾದ ನಂತರ ಜೀರಿಗೆ , ಕೊತ್ತಂಬರಿ ಹಾಗೂ ಕರಿಬೇವು ಹಾಕಿ ಹುರಿದುಕೊಳ್ಳಿ. ಮಿಕ್ಸರ್ ಗೆ ಅಚ್ಚ ಮೆಣಸಿನ ಪುಡಿ, ಶುಂಟಿ, ಬೆಳ್ಳುಳ್ಳಿ, ಹಸಿ ಮೆಣಸಿನ
ಕಾಯಿ ,
ತೆಂಗಿನ ತುರಿ, ಹುರಿದುಕೊಂಡ ಮಿಶ್ರಣ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಬಾಣೆಲೆಗೆ 4 ಚಮಚ ಎಣ್ಣೆ ಹಾಕಿ , ಕಾದ ನಂತರ ಹೆಚ್ಚಿದ ಬೆಂಡೆ ಕಾಯಿ, ಉಪ್ಪು, ವಾಟೆ
ಪುಡಿ ಅಥವಾ ಲಿಂಬೆ ರಸ ಹಾಕಿ ಲೋಳೆ ಬಿಡುವ ತನಕ ಚೆನ್ನಾಗಿ ಹುರಿಯಿರಿ. ನಂತರ ಅರಿಶಿನ ಪುಡಿ, ರುಬ್ಬಿದ ಮಿಶ್ರಣ,
ಉಪ್ಪು,
ಸ್ವಲ್ಪ ಬೆಲ್ಲ ಹಾಗೂ ನೀರು ಹಾಕಿ ಕುದಿಸಿ
(ಗಟ್ಟಿ ಸಾಂಬಾರ್ ಹದಕ್ಕೆ ನೀರು ಹಾಕಿದರೆ ಸಾಕು). ಬಿಸಿ ಬಿಸಿ ಅನ್ನದ ಜೊತೆ ಬೆಂಡೆ ಮಸಾಲಾ
ಸವಿದು ನೋಡಿ. ಚಪಾತಿ / ರೋಟಿ ಜೊತೆ ಕೂಡ ಚೆನ್ನಾಗಿರುತ್ತದೆ.
ಇದು ನಮ್ಮ ರುಚಿ.... ಅಮ್ಮ, ಅಜ್ಜಿ, ಗೆಳತಿಯರು, ಹೀಗೆ ಎಲ್ಲೋ ಕೇಳಿ, ಕಂಡು, ಮಾಡಿ ನೋಡಿ ನಮ್ಮ-ನಮ್ಮ ಪತಿಯಿಂದ ಮೆಚ್ಚುಗೆ ಪಡೆದಂತಹ ಅಡುಗೆಗಳನ್ನು ನಿಮಗೂ ತಿಳಿಸುವಂತಹ ನಿಮ್ಮ ಗೆಳತಿಯರ ಪಾಕಶಾಲೆ.... ಪತಿಗೆ ಮೆಚ್ಚಿನ ಸತಿಯಾಗಲು ಪಾಕಶಾಲೆಯ ಪದವಿಯ ಮುಂದೆ ಎಂತಹ ಪದವಿಯೂ ಶೂನ್ಯ - ಇದು ನಮ್ಮ ಅನುಭವ... ;) ನಮ್ಮ ಅಡುಗೆ ನೀವೂ ಟ್ರೈ ಮಾಡಿ ನೋಡಿ... :) :)
ಬುಧವಾರ, ಆಗಸ್ಟ್ 13, 2014
ಬೆಂಡೆ ಮಸಾಲಾ :
ಬುಧವಾರ, ಆಗಸ್ಟ್ 6, 2014
ತೆಂಗಿನ ಕಾಯಿ ಹಲ್ವ / ಕೊಬ್ಬರಿ ಮಿಠಾಯಿ :
ಸಾಮಗ್ರಿಗಳು :
ತೆಂಗಿನ ಕಾಯಿ : 2
ಸಕ್ಕರೆ : 1/2 ಕಿ ಗ್ರಾಂ
ಏಲಕ್ಕಿ ಪುಡಿ : 1/4 ಟೀ ಚಮಚ
ಉಪ್ಪು : 2 ಚಿಟಿಕೆ
ತುಪ್ಪ : 3-4 ಟೇಬಲ್ ಚಮಚ
ವಿಧಾನ :
ತೆಂಗಿನ ಕಾಯಿ ಒಡೆದು ತುರಿದುಕೊಂಡು ನೀರು ಹಾಕದೇ ತರಿ ತರಿಯಾಗಿ ರುಬ್ಬಿಕೊಳ್ಳಿ. ದಪ್ಪ ತಳದ ಪಾತ್ರೆ ಅಥವಾ ಬಾಣಲೆಗೆ ರುಬ್ಬಿದ ತೆಂಗಿನ ಕಾಯಿ, ಸಕ್ಕರೆ, ಏಲಕ್ಕಿ ಪುಡಿ, ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಕಲಕುತ್ತಿರಿ. ಸಕ್ಕರೆ ಕರಗಿದ ಮೇಲೆ 2-3 ಚಮಚ ತುಪ್ಪ ಹಾಕಿ ಸಣ್ಣ ಉರಿಯಲ್ಲೇ ಕಲಕುವುದನ್ನು ಮುಂದುವರೆಸಿ. ಬೇಗ ತಳ ಹಿಡಿಯುವುದರಿಂದ ಕೈ ಬಿಡದೇ ಕಲಕುತ್ತಲೇ ಇರಬೇಕು. ಸುಮಾರು ಅರ್ಧ - ಮುಕ್ಕಾಲು ಘಂಟೆಯ ನಂತರ ಮಿಶ್ರಣ ಗಟ್ಟಿಯಾಗುತ್ತದೆ. ಸೌಟಿಗೆ ಅಂಟಿಕೊಳ್ಳದೆ ಪೂರ್ತಿಯಾಗಿ ಬಿಟ್ಟುಕೊಳ್ಳುತ್ತದೆ.
ತಕ್ಷಣ ಒಂದು ತಟ್ಟೆ (ಪ್ಲೇಟ್) ಗೆ ತುಪ್ಪ ಸವರಿಕೊಂಡು ಬಿಸಿ ಮಿಶ್ರಣವನ್ನು ತಟ್ಟೆಗೆ ಹಾಕಿ ಸಮನಾಗಿ ಹರವಿಕೊಂಡು ಬಿಸಿ ಇರುವಾಗಲೇ ನಿಮಗೆ ಬೇಕಾದ ಆಕಾರ, ಅಳತೆಗೆ ಕತ್ತರಿಸಿ.
ತಣ್ಣಗಾದ ಮೇಲೆ ತಟ್ಟೆಯಿಂದ ಬಿಡಿಸಿ ಸರ್ವ್ ಮಾಡಿ.
ಮನೆ ಮದ್ದು : ಹೊಟ್ಟೆ ಕೆಟ್ಟು ಹಸಿವಾಗುತ್ತಿಲ್ಲವಾದಲ್ಲಿ ಒಂದು ಕಪ್ Black Tea ಗೆ ಒಂದು ಟೀ ಚಮಚ ತುಪ್ಪ ಹಾಕಿಕೊಂಡು ಬೆಳಿಗ್ಗೆ ಎದ್ದ ಕೂಡಲೇ ಕುಡಿಯಿರಿ ಮತ್ತು ಆಹಾರವನ್ನೂ ಅತಿಯಾಗಿ ಸೇವಿಸಬೇಡಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)



