ಶುಕ್ರವಾರ, ಮೇ 23, 2014

ಕ್ಯಾಬೇಜ್ ರೋಲ್


ಬೇಕಾಗುವ ಸಾಮಾಗ್ರಿಗಳು : ಕ್ಯಾಬೇಜ್ ಎಲೆ 6-7ಬೇಯಿಸಿದ ಆಲೂಗಡ್ಡೆ 3ಚೆನ್ನಾಗಿ ಬೇಯಿಸಿದ ಬಟಾಣಿ ½ ಕಪ್ಈರುಳ್ಳಿ-1, ಚಾಟ್ ಮಸಾಲಾ ¾ ಸ್ಪೂನ್  ಮೆಣಸಿನ ಪುಡಿ 1 ಸ್ಪೂನ್ ಕಡಲೆಹಿಟ್ಟು ½ ಕಪ್ ಅಡುಗೆ ಸೋಡಾ ಚಿಟಿಕೆ,ಕರಿಯಲು ಎಣ್ಣೆರುಚಿಗೆ ತಕ್ಕಷ್ಟು ಉಪ್ಪು.

ಕರಿಯುವ ಮೊದಲು >



ಕರಿದ ನಂತರ >

ವಿಧಾನ: ಕುದಿಯುತ್ತಿರುವ ನೀರಿಗೆ ಸ್ವಲ್ಪ ಉಪ್ಪು ಬಿಡಿಸಿಟ್ಟ ಕ್ಯಾಬೇಜ್ ಎಲೆಗಳನ್ನು ಹಾಕಿನೀರಿನಿ೦ದ ಎಲೆಗಳನ್ನು ತೆಗೆದು ನೀರು ತೆಗೆಯುವ ಕಾಗದದಿ೦ದ (ಟಿಶ್ಯೂ ಪೇಪರ್) ಕ್ಯಾಬೇಜ್ ಎಲೆಗಳಮೇಲಿನ ನೀರಿನ ಅ೦ಶವನ್ನು ತೆಗೆಯಿರಿ. ಬೇಯಿಸಿಟ್ಟ ಆಲೂಗಡ್ಡೆ & ಬಟಾಣಿಯನ್ನು ಕಿವುಚಿಕೊಳ್ಳಿ (Mash)ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊ೦ಡು ಸ್ವಲ್ಪಎಣ್ಣೆಯಲ್ಲಿ ಅದನ್ನು ಬಾಡಿಸಿ ಕಿವುಚಿಟ್ಟ ಆಲೂ & ಬಟಾಣಿಯ ಜೊತೆ ಸೇರಿಸಿ ಮಿಶ್ರಣಕ್ಕೆ ಉಪ್ಪುಚಾಟ್ಮಸಾಲಾಸ್ವಲ್ಪ ಮೆಣಸಿನ ಪುಡಿ ಸೇರಿಸಿಕಡಲೆಹಿಟ್ಟಿಗೆ ಉಪ್ಪುಮೆಣಸಿನ ಪುಡಿಅಡುಗೆ ಸೋಡಾನೀರು ಸೇರಿಸಿ ಬೊ೦ಡಾ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.ಕ್ಯಾಬೇಜ್ ಎಲೆಯೊಳಗೆ ತಯಾರಿಸಿಟ್ಟ ಪಲ್ಯ (ಮಿಶ್ರಣವನ್ನು ಹಾಕಿ ಎಲೆಯನ್ನು ರೋಲ್ ಥರ ಮಡಿಸಿ ಕಡಲೇಹಿಟ್ಟಿನಲ್ಲಿ ಅದ್ದಿ ಹೊ೦ಬಣ್ಣ ಬರುವವರೆಗೆ ಕರಿಯಿರಿ. ಟೊಮ್ಯಾಟೋ ಚಿಲ್ಲಿ ಸಾಸ್ ಜೊತೆ ಅದ್ಭುತ ರುಚಿ ನೀಡುತ್ತದೆ.

ಸೂಚನೆ: ಪಲ್ಯಕ್ಕೆ ಉಪ್ಪು ಖಾರ ಹಾಕಿರುವುದರಿ೦ದ ಕಡಲೆಹಿಟ್ಟಿಗೆ ಉಪ್ಪುಖಾರ ಹಾಕುವಾಗ ನೋಡಿಕೊ೦ಡು ಹಾಕಿ. ಕ್ಯಾಬೇಜ್ ಎಲೆಗಳನ್ನು ೧೦ ನಿಮಿಷ ಬೇಯಿಸಿದರೆ ಸಾಕು. ಸ್ಟಫ್ ಮಾಡುವಾಗ ಎಲೆ ಹರಿದು ಹೋಗದಂತಿರಬೇಕು.

(Master Chef ಸಂಜೀವ್ ಕಪೂರ್ recipe ನೋಡಿ ಮಾಡಿದ್ದು ..)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ