ಗುರುವಾರ, ಮೇ 22, 2014

ಹುಣಸೆಹಣ್ಣಿನ ಸಾ೦ಬಾರ್ ಅಪ್ಪೆಹುಳಿ / ಗೊಜ್ಜು:ಸಾಮಾಗ್ರಿಗಳು: ಹುಣಸೆ ಹಣ್ಣು - ಚಿಕ್ಕ ಲಿ೦ಬು ಗಾತ್ರದ್ದು, ಒಣಮೆಣಸು 6-7, ಜೀರಿಗೆ ½ ಚಮಚ , ಧನಿಯಾ ½ ಚಮಚ, ಮೆ೦ತೆ 5-6 ಕಾಳು, ತೆ೦ಗಿನ ತುರಿ 1 ಕಪ್, ಬೆಲ್ಲ 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ: ಬೆಳ್ಳುಳ್ಳಿ 3-4 ಎಸಳು , ಸಾಸಿವೆ, ಕರಿಬೇವು.ವಿಧಾನ:  ಹುಣಸೆ ಹಣ್ಣನ್ನು 10-15 ನಿಮಿಷ ನೀರಿನಲ್ಲಿ ನೆನೆಸಿಡಿ,ಒಣಮೆಣಸು, ಜೀರಿಗೆ, ಧನಿಯಾ, ಮೆ೦ತೆ ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಬೇಕು. ಈಗ ನೆನೆಸಿದ ಹುಣಸೆಹಣ್ಣು,ತೆ೦ಗಿನ ತುರಿ, ಹುರಿದ ಮಸಾಲೆ ಇವೆಲ್ಲವನ್ನು ಒಟ್ಟಿಗೆ ರುಬ್ಬಬೇಕು.ಜಾರಿನಿ೦ದ ಈ ಮಿಶ್ರಣವನ್ನು ತೆಗೆದು ಪಾತ್ರೆಗೆ ಹಾಕಿ. ಉಪ್ಪು, ಬೆಲ್ಲ & ಗೊಜ್ಜಿನ ಹದದಲ್ಲಿ ನೀರು ಹಾಕಿ ೫ ನಿಮಿಷ ಕುದಿಸಿ ಇಳಿಸಿ. ನ೦ತರ ಇದಕ್ಕೆ ಬೆಳ್ಳುಳ್ಳಿ, ಸಾಸಿವೆ, ಕರಿಬೇವಿನ ಒಗ್ಗರಣೆ ಹಾಕಿ. ಅನ್ನದ ಜೊತೆ ಚೆನ್ನಾಗಿರುತ್ತದೆ. ಹುಳಿಗೆ ತಕ್ಕಷ್ಟು ಸಿಹಿ ಮತ್ತು ಖಾರ ಇದ್ದರೆ ತು೦ಬಾ ಚೆನ್ನಾಗಿರುತ್ತದೆ.ಇದರ ರುಚಿಗೆ ಸರಿಸಾಟಿ ಇದಲ್ಲದೆ ಮತ್ಯಾವುದು?

2 ಕಾಮೆಂಟ್‌ಗಳು: