ಗುರುವಾರ, ಮೇ 8, 2014

ಕ್ಯಾಪ್ಸಿಕಂ ಬಾತ್ :

ಸಾಮಗ್ರಿಗಳು : 
ಅಕ್ಕಿ 1 ಕಪ್, 
ದೊಡ್ಡ ಕ್ಯಾಪ್ಸಿಕಂ 1, 
ಈರುಳ್ಳಿ 1, 
ಗರಂ ಮಸಾಲಾ ಪೌಡರ್ 1 ಚಮಚ, 
ಜೀರಿಗೆ ಪುಡಿ 1 ಚಮಚ, 
ತೆಂಗಿನ ತುರಿ 2-3 ಚಮಚ (ಬೇಕಿದ್ದಲ್ಲಿ ಮಾತ್ರ), 
ಎಣ್ಣೆ 5-6 ಚಮಚ,  
ಹಸಿ ಮೆಣಸಿನ ಕಾಯಿ 3-4, 
ಉದ್ದಿನ ಬೇಳೆ 1/2 ಚಮಚ, 
ಸಾಸಿವೆ 1/4 ಚಮಚ, ಅರಿಶಿನ ಪುಡಿ 3-4 ಚಿಟಿಕೆ, 
ಕರಿಬೇವು ಸ್ವಲ್ಪ, 
ನಿಂಬೆ ರಸ / ಹುಣಸೆ ರಸ 2-3 ಚಮಚ, 
ಸಕ್ಕರೆ 3/4 ಚಮಚ, 
ಉಪ್ಪು ರುಚಿಗೆ ತಕ್ಕಷ್ಟು 

ವಿಧಾನ : ಅಕ್ಕಿಯಿಂದ ಉದುರುದುರಾದ ಅನ್ನ ಮಾಡಿಕೊಳ್ಳಿ. ಕ್ಯಾಪ್ಸಿಕಂ ಮತ್ತು ಈರುಳ್ಳಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಉದ್ದಕ್ಕೆ ಸೀಳಿಕೊಳ್ಳಿ. ಬಾಣಲೆಗೆ ಎಣ್ಣೆ, ಉದ್ದಿನ ಬೇಳೆ ಹಾಕಿ ಕೆಂಪಗಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಹಸಿ ಮೆಣಸಿನಕಾಯಿ, ಕರಿಬೇವು ಹಾಕಿ. ನಂತರ ಈರುಳ್ಳಿ ಹಾಕಿ ಒಂದೆರಡು ನಿಮಿಷ ಹುರಿದು, ಅರಿಶಿನ ಪುಡಿ ಹಾಕಿ ಕಲಕಿ, ಹೆಚ್ಚಿದ ಕ್ಯಾಪ್ಸಿಕಂ ಹಾಕಿ ಸ್ವಲ್ಪ ಉಪ್ಪು, ನಿಂಬೆರಸ / ಹುಣಸೆರಸ ಮತ್ತು ಸಕ್ಕರೆ ಹಾಕಿ ಕಲಕಿ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ. (ನೀರು ಹಾಕುವುದು ಬೇಡ) ಇದು ಚೆನ್ನಾಗಿ ಬೆಂದ ಮೇಲೆ ಗರಂ ಮಸಾಲ ಪುಡಿ ಮತ್ತು ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ತೆಂಗಿನ ತುರಿ ಹಾಕಿ ಸ್ವಲ್ಪ ಫ್ರೈ ಮಾಡಿ ಉರಿ ಆರಿಸಿ.


ಇದಕ್ಕೆ ಉಪ್ಪು ಹಾಕಿಕೊಂಡು ಅನ್ನ ಹಾಕಿ ಕಲಸಿ. ಬೇಕಿದ್ದಲ್ಲಿ ರುಚಿ ನೋಡಿಕೊಂಡು ಉಪ್ಪು-ಹುಳಿ ಹೊಂದಿಸಿಕೊಳ್ಳಬಹುದು. ಘಮ ಘಮಿಸುವ ಕ್ಯಾಪ್ಸಿಕಂ ಬಾತ್ ಅನ್ನು ರಾಯ್ತ ಜೊತೆ ಸವಿದರೂ ಸೈ... ರಾಯ್ತ ಇಲ್ಲದೆಯೂ ಜೈ...   


ಸೂಚನೆ: ಕೊನೆಯಲ್ಲಿ ಉಪ್ಪು ಹಾಕುವಾಗ ಕ್ಯಾಪ್ಸಿಕಂ ಬೇಯಿಸುವಾಗ ಸ್ವಲ್ಪ ಉಪ್ಪು ಹಾಕಿರುವುದು ನೆನಪಿರಲಿ.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ