ಸಾಮಗ್ರಿಗಳು :
ಚಿರೋಟಿ ರವೆ ಒಂದು ಸಣ್ಣ ಕಪ್,
ಗೋಡಂಬಿ ಒಂದು ದೊಡ್ಡ ಮುಷ್ಠಿ,
ಗಸಗಸೆ 1/2 ಕಪ್,
ಸಕ್ಕರೆ 4-5 ಕಪ್,
ಹಾಲು 1/2 ಲೀಟರ್,
ತುಪ್ಪ 1/4 ಚಮಚ,
ಉಪ್ಪು ಒಂದು ಚಿಟಿಕೆ,
ಕೇಸರಿ ಎಸಳು 1-2 ಚಿಟಿಕೆ (optional)
(ಇದರಲ್ಲಿ 5-6 ಜನಕ್ಕೆ serve ಮಾಡಬಹುದು).
ವಿಧಾನ : ಗೋಡಂಬಿ ಮತ್ತು ಗಸಗಸೆಯನ್ನು ನೀರಿನಲ್ಲಿ ಬೇರೆ ಬೇರೆಯಾಗಿ ನೆನೆಸಿಕೊಳ್ಳಿ. ಇದು ಸುಮಾರು ಒಂದು ಘಂಟೆ ನೆನೆಯಬೇಕು. ಒಂದು ಬಾಣಲೆಗೆ ತುಪ್ಪ ಮತ್ತು ರವೆ ಹಾಕಿ ಹುರಿಯಿರಿ. ಸ್ವಲ್ಪ ಕೆಂಪಗಾಗುವಷ್ಟು (ಉಪ್ಪಿಟ್ಟಿಗೆ ಹುರಿಯುವಷ್ಟು) ಹುರಿಯಬೇಕು. ಕೇಸರಿ ಹಾಕುತ್ತೀರಾದರೆ ಸ್ವಲ್ಪ ಹಾಲಿನಲ್ಲಿ ಅದನ್ನು ನೆನೆಸಿಟ್ಟುಕೊಳ್ಳಿ. ನೆನೆಸಿಟ್ಟ ಗೋಡಂಬಿ ಮತ್ತು ಗಸಗಸೆಯನ್ನು ಒಟ್ಟಾಗಿ ನುಣ್ಣಗೆ ರುಬ್ಬಿಕೊಳ್ಳಿ. ದಪ್ಪ ತಳದ ಪಾತ್ರೆಗೆ ಹುರಿದ ರವೆ, ಒಂದು ಕಪ್ ಹಾಲು ಮತ್ತು 1-2 ಕಪ್ ನೀರು ಹಾಕಿ ಬೇಯಿಸಿ. ಅದು ದಪ್ಪಗಾದಂತೆ ನೀರು ಅಥವಾ ಹಾಲು ಸೇರಿಸಿ ಕಲಕುತ್ತಿರಿ. ರವೆ ಪೂರ್ತಿಯಾಗಿ ಬೆಂದ ಮೇಲೆ ರುಬ್ಬಿದ ಗಸಗಸೆ-ಗೋಡಂಬಿ ಮಿಶ್ರಣವನ್ನು ಹಾಕಿ ಉಳಿದ ಹಾಲು, ಸಕ್ಕರೆ ಮತ್ತು ಚಿಟಿಕೆ ಉಪ್ಪು ಹಾಕಿ. ಪಾಯಸದಷ್ಟು ದಪ್ಪ ಬೇಡ ಚಿತ್ರದಲ್ಲಿ ತೋರಿಸಿದಷ್ಟು ತೆಳ್ಳಗಿರಲಿ.
ನೆನೆಸಿಟ್ಟ ಕೇಸರಿಯನ್ನು ಬೆರಳುಗಳಿಂದ ಸ್ವಲ್ಪ ಅರೆದು ಇದಕ್ಕೆ ಸೇರಿಸಿ. ಸಣ್ಣ ಉರಿಯಲ್ಲಿ ಕಲಕುತ್ತಲೇ ಇರಬೇಕು ಇಲ್ಲವಾದಲ್ಲಿ ಬಹು ಬೇಗ ತಳ ಹಿಡಿಯುತ್ತದೆ / ಸೀದುತ್ತದೆ. ಚೆನ್ನಾಗಿ ಕುದಿಸಿ. (taste ನೋಡಿಕೊಂಡು ಸಕ್ಕರೆ ಬೇಕಿದ್ದರೆ ಹಾಕಿಕೊಳ್ಳಿ). ಚಳಿಗಾಲದಲ್ಲಿ ಬಿಸಿ ಬಿಸಿ ಖೀರನ್ನು ಸವಿಯಬಹುದು. ಸೆಖೆಗಾಲದಲ್ಲಿ ಇದನ್ನು ಬಿಸಿ ಆರಿದ ಮೇಲೆ ಒಂದೆರಡು ಘಂಟೆ fridge ನಲ್ಲಿ ಇಟ್ಟು cold ಖೀರು ಸವಿದರೆ ಆಹಾ....!
ಸಲಹೆಗಳು:
1) ಬಿಸಿ ಆರಿದ ಮೇಲೆ ಸ್ವಲ್ಪ ದಪ್ಪಗಾಗುವುದರಿಂದ ಕುದಿಸುವಾಗ ಸ್ವಲ್ಪ ನೀರಾಗಿಯೇ ಇರಲಿ.
2) ಚಿರೋಟಿ ರವೆಯ ಬದಲು ಒಂದು ಮುಷ್ಠಿಯಷ್ಟು ಶ್ಯಾವಿಗೆಯನ್ನು ಹುರಿದು ಹಾಕಬಹುದು ಅಥವಾ ಅರ್ಧದಷ್ಟು ಶ್ಯಾವಿಗೆ, ಅರ್ಧದಷ್ಟು ರವೆಯನ್ನು ಬೇರೆ ಬೇರೆ ಹುರಿದು ಸೇರಿಸಿಕೊಳ್ಳಬಹುದು. ಬರೀ ಶ್ಯಾವಿಗೆ ಹಾಕಿದರೆ ರುಚಿ ಕಮ್ಮಿ...!!
ಬಾಯಿ ಕೆಟ್ಟಿತ್ತು ಒಳ್ಳೆಯ ಖೀರಿಗಾಗಿ ಧನ್ಯವಾದಗಳು.
ಪ್ರತ್ಯುತ್ತರಅಳಿಸಿಫುಲ್ ಕುಡಿದು ಫುಲ್ ನಿದ್ರೆ ಮಾಡಿ ಸರ್ (ನಿದ್ರೆ ಬೇಡ ಅಂದ್ರೂ ಬರುತ್ತೆ ) .... :)
ಅಳಿಸಿ