ಗುರುವಾರ, ಜೂನ್ 26, 2014

ಖರ್ಜೂರ ಪಾಯಸ :

ಸಾಮಗ್ರಿಗಳು:
ಖರ್ಜೂರ 1/4 ಕಿ ಗ್ರಾಂ 
ಹಾಲು 1/2 - 3/4 ಲೀಟರ್ 
ಸಕ್ಕರೆ 1/4 ಕಪ್ 
ತುಪ್ಪ ೨ ಚಮಚ
ಗೋಡಂಬಿ 8-10
ದ್ರಾಕ್ಷಿ 10-15
ಉಪ್ಪು 2-3 ಚಿಟಿಕೆ 

ವಿಧಾನ
4-5 ಖರ್ಜೂರವನ್ನು ಬಿಟ್ಟು ಉಳಿದವನ್ನು ಅದು ಮುಳುಗುವಷ್ಟು ಹಾಲು ಹಾಕಿ 2 ಘಂಟೆ ನೆನೆಸಿಡಿ. ಅದು ರುಬ್ಬಲು ಆಗುವಷ್ಟು ನೆನೆಯಬೇಕು. ನೆಂದ ನಂತರ ಅದೇ ಹಾಲು ಹಾಕುತ್ತ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಇದನ್ನು ದಪ್ಪ ತಳದ ಪಾತ್ರೆಗೆ ಹಾಕಿ ಉಳಿದ ಹಾಲು, ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಕಲಕಿ ಕುದಿಯಲು ಇಡಿ. ಆಗಾಗ ಕಲಕುತ್ತಿರಿ. ಇಲ್ಲವಾದಲ್ಲಿ ತಳ ಹಿಡಿಯುತ್ತದೆ. ಗೋಡಂಬಿ, ದ್ರಾಕ್ಷಿ ಹುರಿದು ಹಾಕಲು ಇಷ್ಟವಿಲ್ಲದವರು ಕುದಿಯುವಾಗಲೇ ಹಾಕಿಕೊಳ್ಳಬಹುದು. ಸಕ್ಕರೆ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಂಡು ಸರಿಪಡಿಸಿಕೊಳ್ಳಬಹುದು. ಖರ್ಜೂರ ಸಿಹಿ ಇರುವುದರಿಂದ ಸಕ್ಕರೆ ಸ್ವಲ್ಪವೇ ಸಾಕಾಗುತ್ತದೆ. ಕುದಿಯುತ್ತಿರುವಂತೆ ಸ್ವಲ್ಪ ಗಟ್ಟಿ ಎನಿಸಿದರೆ ಇನ್ನು ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಕುದಿಸಿ ಉರಿ ಆರಿಸಿ. ಮೊದಲು ತೆಗೆದಿಟ್ಟ 4-5 ಖರ್ಜೂರವನ್ನು ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಗೋಡಂಬಿ, ದ್ರಾಕ್ಷಿ, ಖರ್ಜೂರದ ಹೋಳುಗಳನ್ನು ತುಪ್ಪದಲ್ಲಿ ಹುರಿದು ಪಾಯಸಕ್ಕೆ ಹಾಕಿದರೆ ಬಿಸಿ ಬಿಸಿ ಖರ್ಜೂರ ಪಾಯಸ ಸವಿಯಲು ಸಿದ್ಧ. 


2 ಕಾಮೆಂಟ್‌ಗಳು:

  1. ಉತ್ತಮ ಪೌಷ್ಟಿಕಾಂಶದ ಖರ್ಜೂರದ ಪಾಯಸಕ್ಕಾಗಿ ಸಲಾಂ...

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಮ್ಮ ಅಡುಗೆಯನ್ನು ತಪ್ಪದೇ ನೋಡುತ್ತಾ (ತಿನ್ನುತ್ತಾ..!) ಪ್ರೋತ್ಸಾಹಿಸುತ್ತಿರುವ ನಿಮಗೂ ಸಲಾಂ ಸರ್.... :)

      ಅಳಿಸಿ