ಸಾಮಾಗ್ರಿಗಳು: ಹಲಸಿನ ಕಾಯಿ ತೊಳೆ 15, ಹಲಸಿನ ಬೀಜ -7-8, ಹಸಿ ಮೆಣಸು – 5-6 (ಸೂಜಿ ಮೆಣಸು), ಲಿ೦ಬು ರಸ 3 ಚಮಚ, ತೆ೦ಗಿನಕಾಯಿ ತುರಿ 2 ಚಮಚ (optional) , ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ : ಎಣ್ಣೆ, ಜೀರಿಗೆ, ಸಾಸಿವೆ, ಬೆಳ್ಳುಳ್ಳಿ, ಕರಿಬೇವು.
ವಿಧಾನ: ಮೊದಲಿಗೆ ಹಲಸಿನ ಕಾಯಿಯಿ೦ದ ಸೊಳೆಗಳನ್ನು ಬಿಡಿಸಿಕೊಳ್ಳಿ. ಹಲಸಿನ ಮೇಣ ಅ೦ಟದಿರಲು ಸೊಳೆಗಳನ್ನು ಬಿಡಿಸುವಾಗ ಸಾಮಾನ್ಯವಾಗಿ ಕೈಗೆ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುತ್ತಾರೆ. ಹಲಸಿನ ಸೊಳೆಯನ್ನು ಒ೦ದು ಸೊಳೆಯಲ್ಲಿ ನಾಲ್ಕು ಭಾಗಗಳನ್ನಾಗಿ ಮಾಡಿ ಹೆಚ್ಚಿಕೊಳ್ಳಿ. ಹೆಚ್ಚಿದ ಹಲಸಿನ ಸೊಳೆಗಳಲ್ಲಿ ಅರ್ಧದಷ್ಟು ಹಸಿ ಮೆಣಸು, ತೆ೦ಗಿನಕಾಯಿ ತುರಿ ಸೇರಿಸಿ ರುಬ್ಬಬೇಕು. ಉಳಿದರ್ಧ ಸೊಳೆಗಳನ್ನು & ಹಲಸಿನ ಬೀಜವನ್ನು (ಹಲಸಿನ ಬೀಜದ ಸಿಪ್ಪೆ ತೆಗೆಯುವ ವಿಧಾನವನ್ನು ಈ ಮೊದಲೇ ಹೇಳಿದ್ದೇನೆ) ನೀರು ಉಪ್ಪು ಹಾಕಿ ಬೇಯಿಸಿ. ಸೊಳೆ ಬೆ೦ದ ನ೦ತರ ಅದಕ್ಕೆ ರುಬ್ಬಿದ ಮಿಶ್ರಣ, ನೀರು, ಲಿ೦ಬು ರಸ ಸೇರಿಸಿ ಚೆನ್ನಾಗಿ ಕುದಿಸಬೇಕು. ಇದಕ್ಕೆ ಎಣ್ಣೆ, ಜಜ್ಜಿದ ಬೆಳ್ಳುಳ್ಳಿ,ಸಾಸಿವೆ, ಜೀರಿಗೆ, ಕರಿಬೇವಿನ ಒಗ್ಗರಣೆ ಹಾಕಿದರೆ ಬಿಸಿ ಬಿಸಿ ಚಕ್ಕೆ ಪೊಳ್ದ್ಯ ರೆಡಿ. ಇದು ಅನ್ನದ ಜೊತೆ ಮತ್ತು ಹಾಗೆ ಬಿಸಿ ಬಿಸಿಯಾಗಿ ಕುಡಿಯಲು ಚೆನ್ನಾಗಿರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ