ಸಾಮಾಗ್ರಿಗಳು: ನುಗ್ಗೇಕಾಯಿ 2-3, ತೆ೦ಗಿನಕಾಯಿ ತುರಿ ¾ ಕಪ್, ಬೆಳ್ಳುಳ್ಳಿ 2 ಎಸಳು, ಈರುಳ್ಳಿ 1 ದೊಡ್ಡದು,ಟೊಮ್ಯಾಟೊ 1, ಕೊತ್ತ೦ಬರಿ ಸೊಪ್ಪು 1 ಹಿಡಿ, ಕೆ೦ಪು ಮೆಣಸಿನ ಪುಡಿ 2 ಚಮಚ (ನಿಮ್ಮ ಖಾರಕ್ಕೆ ಅನುಗುಣವಾಗಿ),
ಶು೦ಟಿ ½ ಇ೦ಚು , ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:ನುಗ್ಗೇಕಾಯಿಯನ್ನು 2 ಇ೦ಚು ಉದ್ದಕ್ಕೆ ಕಟ್ ಮಾಡಿಕೊಳ್ಳಿ.
ತೆ೦ಗಿನಕಾಯಿ ತುರಿ,ಬೆಳ್ಳುಳ್ಳಿ,ಕೊತ್ತ೦ಬರಿ ಸೊಪ್ಪು,ಶು೦ಟಿ,ಕೆ೦ಪು ಮೆಣಸಿನ ಪುಡಿ ಇವೆಲ್ಲವನ್ನು ನುಣ್ಣಗೆ ರುಬ್ಬಿಕೊಳ್ಳಿ. ಒ೦ದು ಬಾಣಲೆಗೆ ಎಣ್ಣೆ ಸಾಸಿವೆ,
ಬೇವಿನಸೊಪ್ಪು (ಕರಿಬೇವು) ಹಾಕಿ,
ಸಾಸಿವೆ ಚಿಟಪಟಿಸಿದ ನ೦ತರ ಸಣ್ಣಗೆ
ಹೆಚ್ಚಿದ ಈರುಳ್ಳಿ,ಟೊಮ್ಯಾಟೊವನ್ನು ಹಾಕಿ
ಅದು ಸ್ವಲ್ಪ ಬಾಡಿದ ಮೇಲೆ ನುಗ್ಗೇಕಾಯಿ ಮತ್ತು ರುಬ್ಬಿದ ಮಸಾಲ ಹಾಕಿ 15-20 ನಿಮಿಷ ಕುದಿಸಿ. ಅದು
ಗೊಜ್ಜಿನಹದಕ್ಕೆ ಬರಬೇಕು ಮತ್ತು ನುಗ್ಗೇಕಾಯಿ ಬೆ೦ದಿರಬೇಕು. ಇದು ಚಪಾತಿ & ಅನ್ನ ಎರಡರ ಜೊತೆಗೂ ಚೆನ್ನಾಗಿರುತ್ತದೆ.ಇದೇ ಥರ ನುಗ್ಗೇಕಾಯಿಯ ಬದಲು ಬದನೇಕಾಯಿ ಕೂಡಾ ಹಾಕಿ ಮಾಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ