ಸಾಮಗ್ರಿಗಳು :
ಚೆನ್ನಾಗಿ ಕಳಿತ ಬಾಳೇಹಣ್ಣು 4 (ಪಚಬಾಳೆ),
ಗೋಧಿಹಿಟ್ಟು 2.5 ಕಪ್
ಬೆಲ್ಲ/ಸಕ್ಕರೆ 5-6 ಚಮಚ
ಉಪ್ಪು ರುಚಿಗೆ ತಕ್ಕಷ್ಟು.
ಚೆನ್ನಾಗಿ ಕಳಿತ ಬಾಳೇಹಣ್ಣು 4 (ಪಚಬಾಳೆ),
ಗೋಧಿಹಿಟ್ಟು 2.5 ಕಪ್
ಬೆಲ್ಲ/ಸಕ್ಕರೆ 5-6 ಚಮಚ
ಉಪ್ಪು ರುಚಿಗೆ ತಕ್ಕಷ್ಟು.
ವಿಧಾನ : ಬಾಳೇಹಣ್ಣು,ಬೆಲ್ಲ/ಸಕ್ಕರೆ, ಉಪ್ಪು ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ (ನೀರು
ಹಾಕಬಾರದು) ರುಬ್ಬಿಕೊಳ್ಳಿ. ಈ ರಸವನ್ನು ಒ೦ದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಗೋಧಿಹಿಟ್ಟು ಹಾಕಿ ಚಪಾತಿ
ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. 10 ನಿಮಿಷ ಆ ಹಿಟ್ಟನ್ನು ಹಾಗೆ ಬಿಡಿ. ನ೦ತರ ರೊಟ್ಟಿ ಲಟ್ಟಿಸಿ ಕಾವಲಿಯ
ಮೇಲೆ ಚೆನ್ನಾಗಿ ಬೇಯಿಸಿದರೆ, ಬಾಳೇಹಣ್ಣಿನ ರೊಟ್ಟಿ
ಸವಿಯಲು ಸಿದ್ದ. ಈ ರೊಟ್ಟಿಯ ಜೊತೆ ತುಪ್ಪ/ಬೆಣ್ಣೆ, ಚಟ್ನಿಪುಡಿ ಇದ್ದರೆ ತಿನ್ನಲು ತು೦ಬಾ ಚೆನ್ನಾಗಿರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ