ಸಾಮಗ್ರಿಗಳು : ಸಿಪ್ಪೆ ತೆಗೆದು ಹೆಚ್ಚಿದ ಹೀರೇಕಾಯಿ ½ ಕಪ್,
ಎಳ್ಳು -1 ಚಮಚ ,
ಖಾರ ಕಡಿಮೆ ಇರುವ ಹಸಿಮೆಣಸು
1, ತೆ೦ಗಿನ ತುರಿ ¼ ಕಪ್,
ಉಪ್ಪು ರುಚಿಗೆ ತಕ್ಕಷ್ಟು, ಮಜ್ಜಿಗೆ ½ ಲೋಟ ಅಥವಾ ಹುಣಸೆ ರಸ -1 ಚಮಚ, ಎಣ್ಣೆ - 1
ಚಮಚ, ಸಾಸಿವೆ ¼ ಚಮಚ, ಕೆ೦ಪುಮೆಣಸು 1.
ವಿಧಾನ : ಹೆಚ್ಚಿಕೊ೦ಡ ಹೀರೇಕಾಯಿ,
ಎಳ್ಳು & ಹಸಿ ಮೆಣಸನ್ನು ½ ಚಮಚ ಎಣ್ಣೆ ಹಾಕಿ 2-3 ನಿಮಿಷ ಹುರಿದುಕೊಳ್ಳಿ.
ಬಿಸಿ ಆರಿದಮೇಲೆ ತೆ೦ಗಿನತುರಿ ಜೊತೆ ಸೇರಿಸಿ ನುಣ್ಣಗೆ ರುಬ್ಬಿ ಪಾತ್ರೆಗೆ ಹಾಕಿ ಅದಕ್ಕೆ ೨ ಲೋಟ ನೀರು
ಸೇರಿಸಿ. (ಮಜ್ಜಿಗೆ ಇಷ್ಟ ಪಡದವರು ರುಬ್ಬುವಾಗ ಹುಣಸೇರಸ ಸೇರಿಸಿ) ಅದಕ್ಕೆ ಮಜ್ಜಿಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ,
ಸಾಸಿವೆ & ಕೆ೦ಪು ಮೆಣಸಿನ ಒಗ್ಗರಣೆ ಕೊಡಿ. ಇದು ಅನ್ನದ ಜೊತೆ ಹಾಗೂ ಹಾಗೆ ಕುಡಿಯಲು
ಚೆನ್ನಾಗಿರುತ್ತದೆ.
Maadi nodide..ruchiyaagide....Lizzath pappad jothe masth maza...
ಪ್ರತ್ಯುತ್ತರಅಳಿಸಿThank you :) heege namma ella recipe try maadi ruchi heli :)
ಪ್ರತ್ಯುತ್ತರಅಳಿಸಿ