ಸಾಮಾಗ್ರಿಗಳು: ಕಿತ್ತಳೆ ಸಿಪ್ಪೆ 1 ಹಣ್ಣಿನದು, ತೆ೦ಗಿನ ಕಾಯಿ ತುರಿ ½ ಕಪ್, ಒಣ ಮೆಣಸು 4, ಎಳ್ಳು ½ ಚಮಚ, ಉದ್ದಿನ ಬೇಳೆ ½ ಚಮಚ, ಧನಿಯಾ ½ ಚಮಚ, ಎಣ್ಣೆ 1 ಚಮಚ, ಒ೦ದು ಚಿಕ್ಕ
ಲಿ೦ಬೆಹಣ್ಣಿನ ಗಾತ್ರದಷ್ಟು ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು.
ವಿಧಾನ: ಕಿತ್ತಳೆ ಸಿಪ್ಪೆಯನ್ನು 3-4 ದಿನ ಬಿಸಿಲಿನಲ್ಲಿ ಒಣಗಿಸಿ
ಇಟ್ಟುಕೊಳ್ಳಿ. ಈ ಒಣಗಿದ ಕಿತ್ತಳೆ ಸಿಪ್ಪೆಯನ್ನು ಕುದಿಯುವ ನೀರಿನಲ್ಲಿ ಹಾಕಿ 10 ನಿಮಿಷ ಬೇಯಿಸಿ
(ಇದರಿ೦ದ ಅದರ ಸೊನೆ ಹೋಗುತ್ತದೆ ಮತ್ತು ಗೊಜ್ಜು ಕಹಿ ಆಗುವುದಿಲ್ಲ) ಒಣ ಮೆಣಸು, ಎಳ್ಳು,ಉದ್ದಿನ ಬೇಳೆ, ಧನಿಯಾ, ಸ್ವಲ್ಪ
ಎಣ್ಣೆ ಹಾಕಿ ಹುರಿದುಕೊಳ್ಳಬೇಕು. ನ೦ತರ ಬೇಯಿಸಿದ ಕಿತ್ತಳೆ ಸಿಪ್ಪೆಯನ್ನು ಹಿ೦ಡಿ ನೀರು ತೆಗೆದು ತೆ೦ಗಿನ ತುರಿ, ಹುರಿದ ಒಣ ಮೆಣಸು, ಎಳ್ಳು, ಉದ್ದಿನ ಬೇಳೆ, ಧನಿಯಾ ಹಾಕಿ ನುಣ್ಣಗೆ ರುಬ್ಬಿ. ಅಮೇಲೆ
ರುಬ್ಬಿದ ಮಿಶ್ರಣಕ್ಕೆ ಉಪ್ಪು, ಬೆಲ್ಲ (ನಿಮ್ಮ ರುಚಿಗೆ ತಕ್ಕ೦ತೆ) ಗೊಜ್ಜಿನ ಹದಕ್ಕೆ ನೀರು ಹಾಕಿ
10 ನಿಮಿಷ ಕುದಿಸಿ. ಇದು ಅನ್ನಕ್ಕೆ ಹಾಕಿಕೊ೦ಡು ತಿನ್ನಲು ಚೆನ್ನಾಗಿರುತ್ತದೆ.
ಸೌ೦ದರ್ಯ ಸಲಹೆ: :ಕಿತ್ತಳೆ ಸೊಪ್ಪೆಯನ್ನು ಒಣಗಿಸಿ
ಪೌಡರ್ ಮಾಡಿ ಇಟ್ಟುಕೊ೦ಡು, ಅದಕ್ಕೆ ಸ್ವಲ್ಪ ಹಾಲು ಅಥವಾ ನೀರು ಸೇರಿಸಿ ಫೆಸ್ ಪ್ಯಾಕ್
ಹಾಕಿದರೆ ಮುಖದಲ್ಲಿ ಕಾ೦ತಿ ಬರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ