ಬುಧವಾರ, ನವೆಂಬರ್ 5, 2014

ಎಲೆಕೋಸು - ಹೆಸರು ಕಾಳು ಪಲ್ಯ :

ಸಾಮಗ್ರಿಗಳು :
ಸಣ್ಣಗೆ ಹೆಚ್ಚಿದ ಎಲೆಕೋಸು (Cabbage) - 2 ಕಪ್,
ಮೊಳಕೆ ಹೆಸರು ಕಾಳು - 1 ಕಪ್,
ತೆಂಗಿನ ತುರಿ - 4-5 ಟೇಬಲ್ ಚಮಚ,
ಹಸಿಮೆಣಸಿನ ಕಾಯಿ - 4-5, (ನಿಮ್ಮ ಖಾರಕ್ಕೆ ಅನುಗುಣವಾಗಿ)
ಕರಿಬೇವು - 10-15 ಎಲೆಗಳು,
ಎಣ್ಣೆ - 2-3 ಟೇಬಲ್ ಚಮಚ,
ಸಾಸಿವೆ - 1/4 ಟೀ ಚಮಚ,
ಅರಿಶಿನ ಪುಡಿ - 1/4 ಟೀ ಚಮಚ,
ಸಕ್ಕರೆ - 1 ಟೇಬಲ್ ಚಮಚ,
ನಿಂಬೆ ರಸ - 2 ಟೇಬಲ್ ಚಮಚ,
ಉಪ್ಪು ರುಚಿಗೆ ತಕ್ಕಷ್ಟು

ವಿಧಾನ  : 
ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಹಾಕಿ ಸಿಡಿಸಿ. ಇದಕ್ಕೆ ಉದ್ದುದ್ದ ಸೀಳಿಕೊಂಡ ಹಸಿ ಮೆಣಸಿನ ಕಾಯಿ, ಕರಿಬೇವು, ಅರಿಶಿನ ಹಾಕಿ ಒಮ್ಮೆ ಕಲಕಿ, ಮೊಳಕೆ ಕಟ್ಟಿದ ಹೆಸರು ಕಾಳು, ಹೆಚ್ಚಿದ ಎಲೆಕೋಸು, 1/2 ಕಪ್ ನಷ್ಟು ನೀರು ಹಾಕಿ ಒಮ್ಮೆ ಕಲಕಿ. ನಂತರ ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಪ್ಲೇಟ್ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ. ಇದು 80% ಬೆಂದಾಗ ತೆಂಗಿನ ತುರಿ ಮತ್ತು ನಿಂಬೆ ರಸ ಹಾಕಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿ. ಹದವಾದ ಖಾರ, ಸಿಹಿ, ಹುಳಿ ಇರುವ ಈ ಪಲ್ಯ ಚಪಾತಿ ಜೊತೆ ಒಳ್ಳೆಯ ಕಾಂಬಿನೇಶನ್.... ಊಟ / ಅನ್ನದ ಜೊತೆಯೂ ಸವಿಯಬಹುದು.

 
   
ಸಲಹೆಗಳು : 
1) ಹೆಸರು ಕಾಳಿನ ಬದಲು ನೆನೆಸಿದ ಕಾಬೂಲ್ ಕಡಲೆ, ಅಲಸಂದೆ, ಹಸಿ ಬಟಾಣಿ ಕೂಡ ಹಾಕಬಹುದು. ಆದರೆ ನೆನೆಸಿದ ಕಡಲೆಯನ್ನು ನೀರು ಸ್ವಲ್ಪ ಉಪ್ಪು ಹಾಕಿ ಕುಕ್ಕರ್ ನಲ್ಲಿ 2 ವಿಸಲ್ ಕೂಗಿಸಿಕೊಂಡು ಕ್ಯಾಬೇಜ್ ಜೊತೆ ಮತ್ತೆ ಬೇಯಿಸಿ.
2) ಹೆಸರು ಕಾಳನ್ನು ಒಂದು ದಿನ ಮುಂಚೆ ರಾತ್ರಿ ನೆನೆ ಹಾಕಿ ಬೆಳಿಗ್ಗೆ ನೀರು ಬಸಿದು ಒಂದು ಪಾತ್ರೆಗೆ ಹಾಕಿ ತಟ್ಟೆ ಮುಚ್ಚಿ ಸ್ಟವ್ ಬಿಸಿ ತಾಗುವಲ್ಲಿಟ್ಟರೆ ಸಂಜೆಯಾಗುವಷ್ಟರಲ್ಲಿ ಮೊಳಕೆ ಬಂದಿರುತ್ತದೆ. ಅಥವಾ ನೆಂದ ಕಾಳನ್ನು ಶುಭ್ರವಾದ ತೆಳ್ಳಗಿನ ಕಾಟನ್ ಬಟ್ಟೆಯಲ್ಲಿ ಗಂಟು ಕಟ್ಟಿ ಇಟ್ಟೂ ಮೊಳಕೆ ತರಿಸಬಹುದು. 

ಅಡುಗೆ ಮನೆಗೊಂದು ಸಲಹೆ : ಸ್ಟವ್ ಮೇಲ್ಭಾಗ ಕಪ್ಪಾಗಿದ್ದರೆ ಮೇಲ್ಭಾಗದ ಮೇಲೆ ಬೇಕಿಂಗ್ ಸೋಡಾ ಉದುರಿಸಿ ಅದರ ಮೇಲೆ ಬಿಸಿ ನೀರನ್ನು ಸ್ಪ್ರೇ ಮಾಡಿ ಅರ್ಧ ಘಂಟೆ ಬಿಟ್ಟು ಬಟ್ಟೆಯಿಂದ ಉಜ್ಜಿ ಶುಚಿಗೊಳಿಸಿದರೆ ಕಲೆಗಳು ಮಾಯವಾಗುತ್ತವೆ. 

2 ಕಾಮೆಂಟ್‌ಗಳು:

  1. ಎರಡೂ ಮೂಲ ಸಾಮಗ್ರಿಗಳು ಸಹ ನನಗೆ ನೆಚ್ಚಿಗೆಯೇ. ನಾಳೆಯೇ ನಮ್ಮ ಮನೆಯಲ್ಲಿ ಚಪಾತಿ, ನಂಜಿಕೊಳ್ಳಲು ನಿಮ್ಮದೀ ಪಲ್ಯ.

    ನಾಳೆಯ ನಾಸ್ಟಕ್ಕೆ ಕಾವ್ಯಾ ಅವರು ನಮ್ಮ ಜೊತೆ!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು ಸರ್ :) ನಿಮ್ಮ ಆರೋಗ್ಯಕ್ಕೂ ಸಹಾಯಕ ಇದು.... ಅತ್ತಿಗೆಗೆ ಹೇಳಿಬಿಡಿ ನನಗಾಗಿ ಎರಡು ಚಪಾತಿ ಜಾಸ್ತಿ ಮಾಡಲು...!!

      ಅಳಿಸಿ