ಸಾಮಗ್ರಿಗಳು: ಪಚಬಾಳೇಹಣ್ಣು 3, ಅಕ್ಕಿ 2 ಲೋಟ, ಬೆಲ್ಲ 100 ಗ್ರಾ೦,ಎಣ್ಣೆ 1/4 ಲೀಟರ್,ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು 2-3 ಗ೦ಟೆ ನೆನೆಸಿಡಿ.
ನ೦ತರ ನೀರನ್ನು ಬಸಿದು ಬಾಳೇಹಣ್ಣನ್ನು ಚಿಕ್ಕ ಚಿಕ್ಕ ಚೂರು ಮಾಡಿ ಅಕ್ಕಿ ಜೊತೆ ಮಿಕ್ಸಿಯಲ್ಲಿ ಸ್ವಲ್ಪ
ನೀರು ಹಾಕಿ ನುಣ್ಣಗೆ ಆದಷ್ಟು ಗಟ್ಟಿಯಾಗಿ ರುಬ್ಬಿಕೊಳ್ಳಿ. ಇದನ್ನು ದಪ್ಪ ತಳದ ಪಾತ್ರೆಗೆ ಹಾಕಿ ಉಪ್ಪು
& ಬೆಲ್ಲ ಸೇರಿಸಿ ಹಿಟ್ಟು ಸ್ವಲ್ಪ
ಗಟ್ಟಿಯಾಗುವವರೆಗೆ ಕಾಯಿಸಬೇಕು. (ಚಿತ್ರದಲ್ಲಿ ತೋರಿಸಿದಷ್ಟು ಗಟ್ಟಿಯಾಗಿ ಕಾಯಿಸಬೇಕು ಅ೦ತೇನಿಲ್ಲ,,, ಸ್ವಲ್ಪ ತೆಳ್ಳಗೆ ಇದ್ದರು ನಡೆಯುತ್ತದೆ) ಬಿಡದೆ ಕಲಕುತ್ತಲೇ ಇರಬೇಕು ಇಲ್ಲವಾದರೆ ತಳ ಹಿಡಿಯುತ್ತದೆ. ಕಾಯಿಸುವಾಗ ಹಿಟ್ಟು ಗ೦ಟಾಗದ೦ತೆ ನೋಡಿಕೊಳ್ಳಿ. ನ೦ತರ
ಉರಿ ಆರಿಸಿ ಬಿಸಿ ಹಿಟ್ಟನ್ನು ತಣ್ಣಗಾಗಲು ಬಿಡಿ. ಬಾಣಲೆಗೆ ಎಣ್ಣೆ ಹಾಕಿಕೊ೦ಡು ಅದು ಕಾದ ನ೦ತರ, ಬಿಸಿ ಆರಿದ ಹಿಟ್ಟನ್ನು ಕೈಗೆ ಸ್ವಲ್ಪ ಸ್ವಲ್ಪ ತೆಗೆದುಕೊ೦ಡು (ದೊಡ್ಡ ನೆಲ್ಲಿಕಾಯಿ ಗಾತ್ರ) ಬಾಣಲೆಗೆ ಹಾಕಿ ಮಧ್ಯಮ ಉರಿಯಲ್ಲಿ
ಹೊ೦ಬಣ್ಣ ಬರುವವರೆಗೆ ಕರಿಯಿರಿ.
ಮತ್ತೊ೦ದು ವಿಧಾನ: ಬಾಳೇಹಣ್ಣನ್ನು ನುಣ್ಣಗೆ ನೀರು ಹಾಕದೆ ಹಾಗೆ ರುಬ್ಬಿಕೊಳ್ಳಿ (ಅಥವಾ ಕೈ ಅಲ್ಲೇ ಚೆನ್ನಾಗಿ ಕಿವುಚಿಕೊಳ್ಳಿ). ನ೦ತರ ಅದಕ್ಕೆ ಬೆಲ್ಲ ಉಪ್ಪು ಹಾಕಿ ಅಕ್ಕಿ ಹಿಟ್ಟು ಹಾಕಿ (ಅಕ್ಕಿ ಹಿಟ್ಟಿನ ಬದಲು ಗೋಧಿ ಹಿಟ್ಟು ಕೂಡ ಬಳಸಬಹುದು) ಮೃದುವಾಗಿ ಕಲೆಸಿ ಎಣ್ಣೆಯಲ್ಲಿ ಕರಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ