ದೀಪಾವಳಿ ಮತ್ತು ಯುಗಾದಿ ಹಬ್ಬಕ್ಕೆ ನಮ್ಮ ಊರಿನಲ್ಲಿ ಹೋಳಿಗೆ ಕಡ್ಡಾಯ...! ನೀವು ಮಾಡಿ ನೋಡಿ ಸಿಹಿ ಸವಿ ಹೋಳಿಗೆ ....
ಸಾಮಗ್ರಿಗಳು :
ಸಾಮಗ್ರಿಗಳು :
ಹೂರಣಕ್ಕೆ ಬೇಕಾಗುವ ಸಾಮಗ್ರಿಗಳು :
ಕಡಲೆ ಬೇಳೆ : 3 ಕಪ್,
ಉಂಡೆ ಬೆಲ್ಲ : 1 1/2,
ಆಲೂಗಡ್ಡೆ : ಒಂದು (ಮಧ್ಯಮ ಗಾತ್ರ)
ಕಣಕಕ್ಕೆ ಬೇಕಾಗುವ ಸಾಮಗ್ರಿಗಳು:
ಚಿರೋಟಿ ರವೆ : 3 ಕಪ್,
ಅರಿಶಿನ ಪುಡಿ : 1/2 ಟೀ ಚಮಚ,
ಎಣ್ಣೆ : 8-10 ಚಮಚ
ಉಪ್ಪು : ರುಚಿಗೆ
ಲಟ್ಟಿಸಲು ಎಣ್ಣೆ - 1 ಕಪ್ ಮತ್ತು ಖಾಲಿಯಾದ ಎಣ್ಣೆ ಕವರ್.
ವಿಧಾನ: ಕುಕ್ಕರ್ ಗೆ ಕಡಲೆ ಬೇಳೆ, ನೀರು ಹಾಕಿ (ಬೇಳೆ ಮುಳುಗಿ ಒಂದು ಒಂದೂವರೆ ಇಂಚು ಮೇಲೆ ಬರುವಷ್ಟು ನೀರು ಹಾಕಿ), ಅದಕ್ಕೆ ತೊಳೆದು ಮಧ್ಯ ಕತ್ತರಿಸಿದ ಆಲೂಗಡ್ಡೆ ಹಾಕಿ ಒಲೆಯ ಮೇಲಿಡಿ. ಅದು 3 ವಿಷಲ್ ಕೂಗುವಷ್ಟರಲ್ಲಿ ಕಣಕ ತಯಾರಿಸಬಹುದು. ಒಂದು ಅಗಲವಾದ ಪಾತ್ರೆಗೆ ಚಿರೋಟಿ ರವೆ, ರುಚಿಗೆ ತಕ್ಕಷ್ಟು ಉಪ್ಪು (ಒಂದು ಟೀ ಚಮಚದಷ್ಟು), ಅರಿಶಿನ ಪುಡಿ, 5-6 ಚಮಚ ಎಣ್ಣೆ ಹಾಕಿ, ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಚೆನ್ನಾಗಿ ಕಲಸಿ. ಚಪಾತಿ ಹಿಟ್ಟಿನಕಿಂತ ಸ್ವಲ್ಪ ಮೆತ್ತಗಿರಲಿ. ತಯಾರಾದ ಕಣಕವನ್ನು ಅರ್ಧ - ಮುಕ್ಕಾಲು ಘಂಟೆ ನೀರಿನಲ್ಲಿ ನೆನೆಸಿ. ಅಂದರೆ ಕಣಕ ಮುಳುಗುವಷ್ಟು ನೀರು ಹಾಕಿ ಹಾಗೆಯೇ ಇಡಿ. ಈಗ ಹೂರಣ ತಯಾರಿಸೋಣ. ಕುಕ್ಕರ್ ನಲ್ಲಿ ಬೆಂದ ಬೇಳೆಯ ನೀರನ್ನು ಸಂಪೂರ್ಣವಾಗಿ ಒಂದು ಪಾತ್ರೆಗೆ ಬಸಿದಿಟ್ಟುಕೊಳ್ಳಿ. ಬೇಳೆಯ ಜೊತೆ ಇರುವ ಆಲೂಗಡ್ಡೆಯ ಸಿಪ್ಪೆ ಸುಲಿದು ಬೇಳೆಗೆ ಹಾಕಿ. ಇದನ್ನು ಮಿಕ್ಸಿಗೆ ಹಾಕಿ ಆದಷ್ಟು ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಿ. ಗಟ್ಟಿಯಾಗಲು ಜಾಸ್ತಿ ಹೊತ್ತು ಕಾಯಿಸಬೇಕು. ನಂತರ ಇದಕ್ಕೆ ಬೆಲ್ಲ, (ಉಂಡೆ ಬೆಲ್ಲವನ್ನು ಪುಡಿ ಮಾಡಿ ಹಾಕಿ) ಸ್ವಲ್ಪ (1/4 ಟೀ ಚಮಚ) ಉಪ್ಪು ಹಾಕಿ ಮೊದಲು ಮಧ್ಯಮ ಉರಿಯಲ್ಲಿ ಕಲಕುತ್ತಿರಿ, ಸ್ವಲ್ಪ ಗಟ್ಟಿಯಾದ ಮೇಲೆ ಸಣ್ಣ ಉರಿಯಲ್ಲಿ ಕಾಯಿಸಬೇಕು. ಬಿಡದೇ ಕಲಕುತ್ತಲೇ ಇರಬೇಕು ಇಲ್ಲವಾದರೆ ತಳ ಹಿಡಿಯುತ್ತದೆ. ಉಂಡೆ ಮಾಡುವಷ್ಟು ಗಟ್ಟಿಯಾಗುವವರೆಗೆ ಕಾಯಿಸಿ ಇಳಿಸಿ.
ಇದು ತಣ್ಣಗಾಗುವಷ್ಟರಲ್ಲಿ ಕಣಕದ ನೀರನ್ನು ಬಸಿದು 1-2 ಚಮಚ ಎಣ್ಣೆ ಬೇಕಾದರೆ ಹಾಕಿ ಚೆನ್ನಾಗಿ ನಾದಿಕೊಳ್ಳಿ.
ನಂತರ ಕೈಗೆ ಸ್ವಲ್ಪ ನೀರು ಮುಟ್ಟಿಕೊಳ್ಳುತ್ತಾ ಕಣಕದ ಲಿಂಬೆ ಗಾತ್ರದ ಉಂಡೆ ಮಾಡಿಕೊಳ್ಳಿ. ಇತ್ತ ತಣ್ಣಗಾದ ಹೂರಣದಿಂದ ಕಣಕಕ್ಕಿಂತ ಸ್ವಲ್ಪ ದೊಡ್ಡ ಉಂಡೆಗಳನ್ನು ಮಾಡಿಟ್ಟುಕೊಳ್ಳಿ.
ನಂತರ ಕೈಗೆ ಎಣ್ಣೆ ಸವರಿಕೊಂಡು ಕಣಕವನ್ನು ಕೈ ಅಲ್ಲೇ ಸ್ವಲ್ಪ ಹರವಿಕೊಂಡು ಹೂರಣವನ್ನು ತುಂಬಿ ಸರಿಯಾಗಿ ಮುಚ್ಚಿ.
ಪ್ಲಾಸ್ಟಿಕ್ ಮತ್ತು ಲಟ್ಟಣಿಗೆಗೆ ಎಣ್ಣೆ ಸವರಿಕೊಂಡು ತುಂಬಿದ ಉಂಡೆ ಇಟ್ಟು ಲಟ್ಟಿಸಿ.
ಲಟ್ಟಿಸಿದ ಹೋಳಿಗೆಯನ್ನು ಬಿಡಿಸಿ ಕೈಗೆ ಹಾಕಿಕೊಂಡು ಕಾದ ಕಾವಲಿಯ ಮೇಲೆ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿದರೆ ಹೋಳಿಗೆ ಸಿದ್ಧ.
ಇದು ತಣ್ಣಗಾಗುವಷ್ಟರಲ್ಲಿ ಕಣಕದ ನೀರನ್ನು ಬಸಿದು 1-2 ಚಮಚ ಎಣ್ಣೆ ಬೇಕಾದರೆ ಹಾಕಿ ಚೆನ್ನಾಗಿ ನಾದಿಕೊಳ್ಳಿ.
ನಂತರ ಕೈಗೆ ಸ್ವಲ್ಪ ನೀರು ಮುಟ್ಟಿಕೊಳ್ಳುತ್ತಾ ಕಣಕದ ಲಿಂಬೆ ಗಾತ್ರದ ಉಂಡೆ ಮಾಡಿಕೊಳ್ಳಿ. ಇತ್ತ ತಣ್ಣಗಾದ ಹೂರಣದಿಂದ ಕಣಕಕ್ಕಿಂತ ಸ್ವಲ್ಪ ದೊಡ್ಡ ಉಂಡೆಗಳನ್ನು ಮಾಡಿಟ್ಟುಕೊಳ್ಳಿ.
ನಂತರ ಕೈಗೆ ಎಣ್ಣೆ ಸವರಿಕೊಂಡು ಕಣಕವನ್ನು ಕೈ ಅಲ್ಲೇ ಸ್ವಲ್ಪ ಹರವಿಕೊಂಡು ಹೂರಣವನ್ನು ತುಂಬಿ ಸರಿಯಾಗಿ ಮುಚ್ಚಿ.
ಪ್ಲಾಸ್ಟಿಕ್ ಮತ್ತು ಲಟ್ಟಣಿಗೆಗೆ ಎಣ್ಣೆ ಸವರಿಕೊಂಡು ತುಂಬಿದ ಉಂಡೆ ಇಟ್ಟು ಲಟ್ಟಿಸಿ.
ಲಟ್ಟಿಸಿದ ಹೋಳಿಗೆಯನ್ನು ಬಿಡಿಸಿ ಕೈಗೆ ಹಾಕಿಕೊಂಡು ಕಾದ ಕಾವಲಿಯ ಮೇಲೆ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿದರೆ ಹೋಳಿಗೆ ಸಿದ್ಧ.
ಬಸಿದಿಟ್ಟುಕೊಂಡ ನೀರಿನಿಂದ (ಕಡಲೆ ಬೇಳೆ ಬೇಯಿಸಿದ ನೀರು) ಕಡಲೆ ಕಟ್ಟಿನ ಸಾರು ಮಾಡುವುದನ್ನು ತಿಳಿಯಲು ಇಲ್ಲಿ ನೋಡಿ: http://gelatiyarapakashale.blogspot.in/2014/10/blog-post_9.html
ಸಲಹೆಗಳು:
1) ಲಟ್ಟಿಸಲು ಖಾಲಿಯಾದ ಎಣ್ಣೆ ಕವರ್ ಒಳ್ಳೆಯದು. ಅಥವಾ ಬಾಳೆ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿಕೊಂಡು ಲಟ್ಟಿಸಿದರೆ ಇನ್ನೂ ಚೆನ್ನಾಗಿ ಬರುತ್ತದೆ.
2) ಬೆಂದ ಕಡ್ಲೆ ಬೇಳೆಗೆ ಹಾಗೆಯೇ ಬೆಲ್ಲ, ಉಪ್ಪು ಹಾಕಿ ಕಾಯಿಸಿ ಗಟ್ಟಿ ಮಾಡಿಕೊಂಡು ಒರಳಲ್ಲಿ ಅಥವಾ ಗ್ರೈಂಡರ್ ನಲ್ಲಿ ನೀರು ಹಾಕದೆ ಗಟ್ಟಿಯಾಗಿಯೇ ರುಬ್ಬಿ ಉಂಡೆ ಮಾಡಿಕೊಳ್ಳಬಹುದು. ಮಿಕ್ಸಿಗೆ ಗಟ್ಟಿ ಹೂರಣವನ್ನು ಹಾಕಿ ರುಬ್ಬಲು ಬರುವುದಿಲ್ಲವಾದ್ದರಿಂದ ಮೇಲಿನ ವಿಧಾನ ತಿಳಿಸಿದ್ದೇನೆ. ಹೂರಣ ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿ ಆಗಿ ಉಂಡೆ ಮಾಡಲು ಬರುತ್ತದೆ.
3) ಆಲೂಗಡ್ಡೆ ಹಾಕುವುದರಿಂದ ಹೋಳಿಗೆ ಲಟ್ಟಿಸುವಾಗ ಹರಿಯದೆ ನಯವಾಗಿ ಲಟ್ಟಿಸಲು ಬರುತ್ತದೆ.
4) ಹೋಳಿಗೆಯ ಜೊತೆ ತುಪ್ಪ ಹಾಕಿಕೊಂಡು ತಿನ್ನುವುದು ನಿಮಗೆ ಗೊತ್ತು. ಅದರ ಜೊತೆ ಸಕ್ಕರೆ ಪಾಕವನ್ನೂ ಹಾಕಿಕೊಂಡು ಸವಿದು ನೋಡಿ....!
ಬಸಿದಿಟ್ಟುಕೊಂಡ ನೀರಿನಿಂದ (ಕಡಲೆ ಬೇಳೆ ಬೇಯಿಸಿದ ನೀರು) ಕಡಲೆ ಕಟ್ಟಿನ ಸಾರು ಮಾಡುವುದರ ಬದಲು ಬಿಸ್ನೀರು ಮಾಡಬಹುದೇ ಕಾವ್ಯಾ?
ಪ್ರತ್ಯುತ್ತರಅಳಿಸಿಹಾ ಹಾ ಹ್ಹಾ... ಬಿಸ್ನೀರ್ ಎಲ್ಲ ಮಾಡಲಾಗ್ತಿಲ್ಲೇ ಗಂಗಣ್ಯ.... :D ನಿಂಗೆ ಬೇಕಾರೆ ಪೆಶಲ್ ಬೆಟ್ಟೆಟ್ ಬಿಸ್ನೀರ್ ಮದ್ಕೊಡ್ತಿ ನೋಡ್ಕ್ಯ ... :P
ಅಳಿಸಿಧನ್ಯವಾದಗಳು ಮೇಡಂ. :)
ಪ್ರತ್ಯುತ್ತರಅಳಿಸಿ:) :)
ಅಳಿಸಿ