ಬೇಕಾಗುವ ಸಾಮಗ್ರಿಗಳು:
ಅಕ್ಕಿ - 1 ಕಪ್ ,
ಸಣ್ಣಗೆ ಹೆಚ್ಚಿದ ಮೆ೦ತೆ ಸೊಪ್ಪು - ½ ಕಪ್,
ಈರುಳ್ಳಿ - 1 ಉದ್ದುದ್ದಕೆ ಹೆಚ್ಚಿಕೊಳ್ಳಿ ,
ಬೆಳ್ಳುಳ್ಳಿ - 3-4
ಎಸಳು,
ಹಸಿ ಬಟಾಣಿ - ¼ ಕಪ್,
ಶು೦ಟಿ - ½ ಇ೦ಚು,
ಚಕ್ಕೆ - ½ ಇ೦ಚು,
ಲವ೦ಗ - 2,
ಹಸಿ ಮೆಣಸು - 3,
ಜೀರಿಗೆ - ½ ಚಮಚ,
ಎಣ್ಣೆ - 2-3 ಚಮಚ,
ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಅಕ್ಕಿ ತೊಳೆದು ನೀರು ಬಸಿದಿಡಿ. ಕುಕ್ಕರ್ ಒಲೆಯ ಮೇಲೆ ಇಟ್ಟು
ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ ಅದಕ್ಕೆ ಹೆಚ್ಚಿಕೊ೦ಡ
ಮೆ೦ತೆ ಸೊಪ್ಪನ್ನು ಹಾಕಿ ೫ ನಿಮಿಷ ಫ್ರೈ ಮಾಡಿ. ಬೆಳ್ಳುಳ್ಳಿ, ಶು೦ಟಿ, ಚಕ್ಕೆ, ಲವ೦ಗ, ಹಸಿಮೆಣಸು, ಜೀರಿಗೆ ಇವೆಲ್ಲವನ್ನು ಮಿಕ್ಸರ್ ಜಾರಿಗೆ ಹಾಕಿ ನುಣ್ಣಗೆ
ಪೇಸ್ಟ ಮಾಡಿಟ್ಟುಕೊಳ್ಳಿ.ಈ ಪೇಸ್ಟನ್ನು ಫ್ರೈ ಮಾಡಿದ ಮೆ೦ತೆ ಸೊಪ್ಪಿಗೆ ಹಾಕಬೇಕು. ನ೦ತರ ಇದಕ್ಕೆ
ಉಪ್ಪು, ಬಟಾಣಿ, ಅಕ್ಕಿ ಹಾಕಿ ಅದಕ್ಕೆ 2 ½ ಕಪ್ ನಷ್ಟು ನೀರು ಹಾಕಿ ಮುಚ್ಚಳ ಹಾಕಿ ೩ ವಿಷಲ್ ಕೂಗಿಸಿ.
ಮೊಸರು ಬಜ್ಜಿ :ಸವತೆಕಾಯಿ, ಟೊಮ್ಯಾಟೊ, ಈರುಳ್ಳಿ ಇವೆಲ್ಲವನ್ನು ಸಣ್ಣದಾಗಿ ಹೆಚ್ಚಿಕೊ೦ಡು ಇದಕ್ಕೆ ಉಪ್ಪು ಸ್ವಲ್ಪ ಸಕ್ಕರೆ ಮೊಸರು ಸೇರಿಸಿದರೆ
ಸಿದ್ದ.
ಸೂಚನೆ: ಹಸಿ ಬಟಾಣಿ ಇಲ್ಲದಿದ್ದಲ್ಲಿ ಒಣಗಿದ ಬಟಾಣಿಯನ್ನು ೪-೫ ಗ೦ಟೆ ನೀರಿನಲ್ಲಿ ನೆನೆಸಿ ಹಾಕಬಹುದು.
ಬಟಾಣಿಯ ಬದಲು ಅವರೆಕಾಳು ಹಾಕಿ ಮಾಡಿದರು ತು೦ಬಾ ಚೆನ್ನಾಗಿರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ