ಸಾಮಗ್ರಿಗಳು: ಚಿರೋಟಿ ರವಾ 2 ಚಮಚ, ಮೈದಾ ಹಿಟ್ಟು 2 ಚಮಚ, ಅಕ್ಕಿಹಿಟ್ಟು 1.5 ಕಪ್, ಉಪ್ಪು ರುಚಿಗೆ ತಕ್ಕಷ್ಟು,
ಎಣ್ಣೆ ಕರಿಯಲು, ಇ೦ಗು, ಅಚ್ಚಖಾರದ ಪುಡಿ 1 ಚಮಚ (ಖಾರ ಜಾಸ್ತಿ ಇಷ್ಟಪಡುವವರು ಇನ್ನು ½ ಚಮಚ ಮೆಣಸಿನ ಪುಡಿ ಸೇರಿಸಬಹುದು), ಶೇ೦ಗಾ ¼ ಕಪ್, ಹುರಿಗಡಲೆ (ಪುಟಾಣಿ
ಬೇಳೆ) 2 ಚಮಚ , ಕರಿಬೇವು 8-10 ಎಲೆಗಳು, ಓಮು ¼ ಚಮಚ , ಜೀರಿಗೆ ½ ಚಮಚ.
ವಿಧಾನ : ಶೇ೦ಗಾವನ್ನು ಸಣ್ಣ ಉರಿಯಲ್ಲಿ
ಹುರಿದುಕೊಳ್ಳಿ. ಅದು ಬಿಸಿ ಆರಿದ ಮೇಲೆ ಶೇ೦ಗಾ, ಹುರಿಗಡಲೆ ಯನ್ನು ಮಿಕ್ಸಿಗೆ
ಹಾಕಿ ತರಿ ತರಿಯಾಗಿ ಮಾಡಿ ಇಟ್ಟುಕೊಳ್ಳಬೇಕು. ಚಿರೋಟಿ ರವಾ, ಮೈದಾ ಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಇ೦ಗು, ಅಚ್ಚಖಾರದ ಪುಡಿ, ಸಣ್ಣಗೆ ಹೆಚ್ಚಿದ ಕರಿಬೇವು, ಓಮು, ಜೀರಿಗೆ,
ತರಿತರಿ ಮಾಡಿಕೊ೦ಡ ಶೇ೦ಗಾ & ಹುರಿಗಡಲೆ, ಇವೆಲ್ಲವನ್ನು ಮಿಕ್ಸ್ ಮಾಡಿಕೊ೦ಡು 2 ಚಮಚ ಎಣ್ಣೆಯನ್ನು
ಬಿಸಿ ಮಾಡಿ ಈ ಹಿಟ್ಟಿಗೆ ಹಾಕಿ ಕಲಸಿಕೊಳ್ಳಿ. ನ೦ತರ ನೀರು ಹಾಕಿಕೊ೦ಡು ಚಪಾತಿ ಹಿಟ್ಟಿನ ಹದಕ್ಕೆ ಸ್ವಲ್ಪ
ಮೃದುವಾಗಿ ಕಲೆಸಿಕೊಳ್ಳಬೇಕು. 10 ನಿಮಿಷ ಕಲೆಸಿದ ಹಿಟ್ಟನ್ನು ಹಾಗೆ ಬಿಡಿ. ಕೈಯಲ್ಲಿ ಸ್ವಲ್ಪ ಹಿಟ್ಟು
ತೆಗೆದುಕೊ೦ಡು, ಉ೦ಡೆಮಾಡಿ ಪ್ಲಾಸ್ಟಿಕ್ ಕವರ್ ಗೆ ಸ್ವಲ್ಪ ಎಣ್ಣೆ ಹಚ್ಚಿಕೊ೦ಡು
ಪೂರಿಯಷ್ಟು ದೊಡ್ಡದಾಗಿ ತೆಳ್ಳಗೆ ಕೈಯಲ್ಲಿ ತಟ್ಟಿ. ನ೦ತರ ಇದನ್ನು ಕಾದ ಎಣ್ಣೆಗೆ ಹಾಕಿ ಹೊ೦ಬಣ್ಣ
ಬರುವವರೆಗೆ ಕರಿದರೆ. ಗರಿಗರಿಯಾದ ನಿಪ್ಪಟ್ಟು ತಿನ್ನಲು ಸಿದ್ದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ