ನನ್ನ ಅಜ್ಜಿ ಈ ದೋಸೆಯನ್ನು ಒಪ್ಪತ್ತು (ವ್ರತ), ಹಬ್ಬ-ಹರಿದಿನಗಳ ಬೆಳಿಗ್ಗೆ ತಿಂಡಿಗೆ ಮಾಡುತ್ತಿದ್ದರು. ಅಕ್ಕಿ ಉಪಯೋಗಿಸದ ಇದು ಮುಸರೆಯಲ್ಲ ಎಂಬ ಕಾರಣಕ್ಕೆ..! ಅವಲಕ್ಕಿ ಮಾಡಿದರೆ ನಾವೆಲ್ಲಾ ತಿನ್ನುತ್ತಿರಲಿಲ್ಲವಲ್ಲ..... :) ಜೊತೆಗೆ ಸುಲಭದ ತಿಂಡಿ ಆದ್ದರಿಂದ ಅಡುಗೆ ಕಲಿಯುತ್ತಿರುವವರು / ಬ್ರಹ್ಮಚಾರಿ ಹುಡುಗರು ಮಾಡಿಕೊಳ್ಳಬಹುದು. :)
ಸಾಮಗ್ರಿಗಳು:
ಸಾಮಗ್ರಿಗಳು:
ಗೋಧಿ ರವೆ (ಉಪ್ಪಿಟ್ಟಿನ ರವೆ) : 1 1/4 ಕಪ್,
ಉದ್ದಿನ ಬೇಳೆ : 1/2 ಕಪ್,
ಉಪ್ಪು : ರುಚಿಗೆ
ವಿಧಾನ :
ಉದ್ದಿನ ಬೇಳೆಯನ್ನು ತೊಳೆದು 3-4 ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ ಅಥವಾ ಬೆಳಿಗ್ಗೆ ನೆನೆಸಿಡಿ. ರಾತ್ರಿ ಇದನ್ನು ನುಣ್ಣಗೆ ರುಬ್ಬಿ ಮುಚ್ಚಿಡಿ. ಬೆಳಿಗ್ಗೆ ಎನ್ನುವಷ್ಟರಲ್ಲಿ ಸ್ವಲ್ಪ ಹುದುಗು ಬಂದಿರುತ್ತದೆ. ಬೆಳಿಗ್ಗೆ ರವೆ ಮುಳುಗುವಷ್ಟು ನೀರು ಹಾಕಿ ಅರ್ಧ ಗಂಟೆಗಳ ಕಾಲ ನೆನೆಸಿಡಿ. ನಂತರ ರುಬ್ಬಿದ ಉದ್ದಿನ ಬೇಳೆಗೆ ನೆಂದ ರವೆ ಸೇರಿಸಿ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ 15-20 ನಿಮಿಷ ಬಿಟ್ಟು ಕಾದ ತವಾ ಮೇಲೆ ದೋಸೆ ಎರೆದು ಎರಡೂ ಕಡೆ ಚೆನ್ನಾಗಿ ಬೇಯಿಸಿ.
ಬಿಸಿ ಬಿಸಿ ದೋಸೆಯನ್ನು ತುಪ್ಪ ಮತ್ತು ಚಟ್ನಿಯ ಜೊತೆ ಸವಿಯಿರಿ.
ಬಿಸಿ ಬಿಸಿ ದೋಸೆಯನ್ನು ತುಪ್ಪ ಮತ್ತು ಚಟ್ನಿಯ ಜೊತೆ ಸವಿಯಿರಿ.
ಸೂಚನೆ :
೧) ರವೆ ನೆಂದ ಮೇಲೆ ನೀರು ಜಾಸ್ತಿ ಇದ್ದಲ್ಲಿ ಬಸಿದುಕೊಳ್ಳಿ.
೨) ಈ ಮಿಶ್ರಣ ಉಳಿದ ದೋಸೆ ಹಿಟ್ಟಿನ ಮಿಶ್ರಣಕ್ಕಿಂತ ಗಟ್ಟಿ ಇರಲಿ. ಇಡ್ಲಿ ಹಿಟ್ಟಿನಕಿಂತ ಸ್ವಲ್ಪ ತೆಳ್ಳಗಿರಲಿ.
ಚಟ್ನಿ :
ಸಾಮಗ್ರಿಗಳು :
ತೆಂಗಿನ ತುರಿ : 1 ಕಪ್,
ಒಣ ಮೆಣಸಿನ ಕಾಯಿ : 4-5,
ಉದ್ದಿನ ಬೇಳೆ : 1/2 ಚಮಚ,
ಬಿಳಿ ಎಳ್ಳು: 1/4 ಚಮಚ,
ಹುಣಸೆಹಣ್ಣು : ಸಣ್ಣ ಚೂರು, (ನೀರಿನಲ್ಲಿ ನೆನೆಸಿಕೊಳ್ಳಿ)
ಬೆಲ್ಲ : 1.5 ಚಮಚ,
ಎಣ್ಣೆ : 1/4 ಚಮಚ,
ಉಪ್ಪು : ರುಚಿಗೆ
ವಿಧಾನ :
ಉದ್ದಿನ ಬೇಳೆ, ಒಣ ಮೆಣಸಿನ ಕಾಯಿಗೆ ಎಣ್ಣೆ ಹಾಕಿ ಹುರಿದು ಕೊನೆಯಲ್ಲಿ ಎಳ್ಳು ಹಾಕಿ ಹುರಿದುಕೊಳ್ಳಿ. ಮಿಕ್ಸಿ ಜಾರ್ ಗೆ ಹುರಿದ ಮಿಶ್ರಣದ ಜೊತೆ ಉಳಿದೆಲ್ಲಾ ಸಾಮಗ್ರಿ ಸೇರಿಸಿ ರುಬ್ಬಿದರೆ ಚಟ್ನಿ ಸಿದ್ಧ.
Tindu gottittu.. inmele try madati..
ಪ್ರತ್ಯುತ್ತರಅಳಿಸಿ