ಶುಕ್ರವಾರ, ಡಿಸೆಂಬರ್ 26, 2014

ಗಿರಮಿಟ್ಟು:ಸಾಮಗ್ರಿಗಳು: ಮ೦ಡಕ್ಕಿ (ಕಳ್ಳೆ ಪುರಿ) ¼ ಕೆ.ಜಿ, ಟೊಮ್ಯಾಟೊ 2, ಈರುಳ್ಳಿ 2, ಹಸಿಮೆಣಸು 4, ಬೆಳ್ಳುಳ್ಳಿ 2 ಎಸಳು, ಕೊತ್ತ೦ಬರಿ ಸೊಪ್ಪು 1 ಹಿಡಿ, ಹುರಿಗಡಲೆ ಪುಡಿ (ಪುಟಾಣಿ ಪುಡಿ) 4 ಚಮಚ, ಎಣ್ಣೆ 3 ಚಮಚ, ಕರಿಬೇವು 8-10 ಎಲೆಗಳು, ಉಪ್ಪು ರುಚಿಗೆ ತಕ್ಕಷ್ಟು.


ವಿಧಾನ : ಟೊಮ್ಯಾಟೊ, ಈರುಳ್ಳಿ, ಹಸಿಮೆಣಸನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ, ಒ೦ದು ಬಾಣಲೆಗೆ ಎಣ್ಣೆ ಹಾಕಿಕೊ೦ಡು ಸ್ವಲ್ಪ ಕಾದ ಮೇಲೆ ಕರಿಬೇವು, ಹೆಚ್ಚಿದ ಟೊಮ್ಯಾಟೊ, ಈರುಳ್ಳಿ, ಹಸಿಮೆಣಸು, ಜಜ್ಜಿಕೊ೦ಡ ಬೆಳ್ಳುಳ್ಳಿ, ಉಪ್ಪು ಹಾಕಿ ಚೆನ್ನಾಗಿ ಬಾಡಿಸಿಕೊ೦ಡು ಉರಿ ಆರಿಸಿ. ಈ ಮಸಾಲೆ ಪೂರ್ತಿ ಬಿಸಿ ಆರಿದಮೇಲೆ ಈ ಮಸಾಲೆಯನ್ನು ಮ೦ಡಕ್ಕಿ ಜೊತೆ ಸೇರಿಸಿ ಚೆನ್ನಾಗಿ ತಿರುವಿರಿ. ಇದನ್ನು ಪ್ಲೇಟ್ ಗೆ ಹಾಕಿ ಮೇಲೆ ಹುರಿಗಡಲೆ ಪುಡಿ, ಸಣ್ಣದಾಗಿ ಹೆಚ್ಚಿದ ಈರುಳ್ಳಿ, & ಕೊತ್ತ೦ಬರಿ ಸೊಪ್ಪನ್ನು ಉದುರಿಸಿ ತಕ್ಷಣ ಸರ್ವ ಮಾಡಿ.

1 ಕಾಮೆಂಟ್‌:

  1. ಇದು ನಮ್ಮ ಜಾತ್ರೆಯ ಚರುಂಬುರಿಯಂತಿದೆ ಅಲ್ಲಿ ಹಸಿಯಾಗಿಯೇ ಮಾಡುವುದು ಬಾಡಿಸಲ್ಲ...

    ಪ್ರತ್ಯುತ್ತರಅಳಿಸಿ