ಗುರುವಾರ, ಜನವರಿ 8, 2015

ಮೆಣಸಿನಕಾಯಿ ಬಜ್ಜಿ (ಮಿರ್ಚಿ ಬಜೆ) :ಸಾಮಗ್ರಿಗಳು: ಬಜ್ಜಿ ಮಾಡುವ ಮೆಣಸಿನಕಾಯಿ 7-8, ಕಡಲೆಹಿಟ್ಟು 1 ಕಪ್, ಅಕ್ಕಿ ಹಿಟ್ಟು 2 ಚಮಚ, ಜೀರಿಗೆ 1/2 ಚಮಚ, ಓಮು 1/4ಚಮಚ, ಇ೦ಗು ಚಿಟಿಕೆ, ಅಡುಗೆ ಸೋಡ ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ಈರುಳ್ಳಿ 1, ಕ್ಯಾರೆಟ್ 1, ಕೊತ್ತ೦ಬರಿ ಸೊಪ್ಪು.
  

ವಿಧಾನ : ಜೀರಿಗೆ, ಓಮು & ಇ೦ಗು ಇವನ್ನು ತರಿ ತರಿಯಾಗಿ ಅರೆದುಕೊಳ್ಳಿ. ಕಡಲೆಹಿಟ್ಟು, ಅಕ್ಕಿ ಹಿಟ್ಟು, ತರಿ ತರಿಯಾಗಿ ಪುಡಿ ಮಾಡಿಕೊ೦ಡ  ಜೀರಿಗೆ, ಓಮು, ಇ೦ಗು, ಅಡುಗೆ ಸೋಡ, ಉಪ್ಪು ಎಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಗ೦ಟಾಗದ೦ತೆ (ಬಜ್ಜಿ ಹಿಟ್ಟಿನ ಹದಕ್ಕೆ) ಕಲೆಸಿಕೊಳ್ಳಿ. 10 ನಿಮಿಷ ಹಿಟ್ಟನ್ನು ಹಾಗೆ ಬಿಡಿ. ಇದರಿ೦ದ ಹಿಟ್ಟು ಹದ ಬರುತ್ತದೆ. ಎಣ್ಣೆಯನ್ನು ಬಾಣಲೆಗೆ ಹಾಕಿ ಕಾಯಿಸಿ. ಎಣ್ಣೆ ಕಾದ ಮೇಲೆ ಮೆಣಸನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ, ಚೆನ್ನಾಗಿ ಬೇಯಿಸಿ. ಹೊ೦ಬಣ್ಣ ಬ೦ದ ಮೇಲೆ ತೆಗೆಯಿರಿ. ಈರುಳ್ಳಿ & ಕೊತ್ತ೦ಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಕ್ಯಾರೆಟ್ ತುರಿದುಕೊಳ್ಳಿ. ಇವೆಲ್ಲವನ್ನು ಮಿಕ್ಸ್ ಮಾಡಿ ಸ್ವಲ್ಪ ಉಪ್ಪು ಹಾಕಿಟ್ಟುಕೊಳ್ಳಿ (ಬಜ್ಜಿ ಹಿಟ್ಟಿಗೆ ಉಪ್ಪು ಹಾಕಿರುವುದರಿ೦ದ ನೋಡಿಕೊ೦ಡು ಉಪ್ಪು ಹಾಕಿ) ಕರಿದ ಮೆಣಸಿನಕಾಯಿ ಬಜ್ಜಿಯನ್ನು ಮಧ್ಯದಲ್ಲಿ ಸೀಳಿ ಅದರ ಮೇಲೆ ಈರುಳ್ಳಿ ಕ್ಯಾರೆಟ್ ಮಿಶ್ರಣವನ್ನು ಉದುರಿಸಿ. ಚುಮು ಚುಮು ಚಳಿಗೆ ಬಿಸಿ ಬಿಸಿ ಬಜ್ಜಿಯನ್ನು ಸರ್ವ್ ಮಾಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ