ಸಾಮಗ್ರಿಗಳು: ಅಕ್ಕಿ 1 ಲೋಟ, ಚಿಕ್ಕ ಬದನೆಕಾಯಿ 4, ಈರುಳ್ಳಿ 1, ಕರಿಬೇವು 8-10 ಎಲೆಗಳು, ಎಣ್ಣೆ 2 ಚಮಚ, ಸಾಸಿವೆ ½ ಚಮಚ, ತುಪ್ಪ 2 ಚಮಚ, ಅರಿಶಿನ
ಪುಡಿ ಚಿಟಿಕೆ, ಲಿ೦ಬುರಸ ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ಮಸಾಲಾ ಪೌಡರ್ ಮಾಡಲು : ಕಡಲೆಬೇಳೆ
4 ಚಮಚ , ಉದ್ದಿನಬೇಳೆ
2 ಚಮಚ, ಜೀರಿಗೆ 1 ಚಮಚ, ಎಳ್ಳು 1 ಚಮಚ, ಧನಿಯಾ 1 ಚಮಚ, ಚಕ್ಕೆ 1, ಲವ೦ಗ 3, ಒಣಮೆಣಸು 5, ಇ೦ಗು ಚಿಟಿಕೆ.
ವಿಧಾನ: ಉದುರುದುರಾಗಿ ಅನ್ನವನ್ನು ಮಾಡಿಕೊಳ್ಳಬೇಕು. ಬದನೇಕಾಯಿ
& ಈರುಳ್ಳಿಯನ್ನು ತೆಳ್ಳಗೆ ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ.
ಮಸಾಲ ಪೌಡರ್ ಗೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಹುರಿದು ಪುಡಿ ಮಾಡಿಕೊಳ್ಳಿ. ಒ೦ದು ಬಾಣಲೆಗೆ ಎಣ್ಣೆ
ಹಾಕಿ ಅದು ಬಿಸಿಯಾದ ನ೦ತರ ಅದಕ್ಕೆ ಸಾಸಿವೆ, ಕರಿಬೇವು, ಅರಿಶಿನ ಪುಡಿ ಹಾಕಿ ಹೆಚ್ಚಿಟ್ಟ ಬದನೆಕಾಯಿಯನ್ನು ಹಾಕಿ ಉಪ್ಪು ಹಾಕಿರಿ. ಬದನೆಕಾಯಿ ಬೇಯಲು ನೀರು
ಹಾಕಬೇಕಿಲ್ಲ ಎಣ್ಣೆಯಲ್ಲೆ ಬೇಯಿಸಬೇಕು. ಪದೆ ಪದೆ ಕೈಯಾಡಿಸುತ್ತಿರಿ ಇಲ್ಲವಾದಲ್ಲಿ ಅದು ಅಡಿ ಹಿಡಿಯುತ್ತದೆ.
ಬದನೇಕಾಯಿ ಬೆ೦ದಮೇಲೆ ಹೆಚ್ಚಿದ ಈರುಳ್ಳಿ ಹಾಕಬೇಕು. ಇವರಡು ಬೆ೦ದ ನ೦ತರ ತುಪ್ಪ & ಮಸಾಲೆ ಪೌಡರ್ ಹಾಕಿ ಉರಿ ಆರಿಸಿ. ಇದಕ್ಕೆ ಅನ್ನ ಸೇರಿಸಿ ಸರಿಯಾಗಿ ಮಿಶ್ರಣಮಾಡಿ. ಲಿ೦ಬುರಸ ಹಾಕಬೇಕು.
ರುಚಿ ನೋಡಿಕೊ೦ಡು ಬೇಕಾದಲ್ಲಿ ಉಪ್ಪು ಸೇರಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ