ಸಾಮಗ್ರಿಗಳು :
ಸಣ್ಣಗೆ ಹೆಚ್ಚಿದ ಮಿಶ್ರ ತರಕಾರಿಗಳು : 1.5 ಕಪ್ (ಕ್ಯಾಬೇಜ್, ಬೀನ್ಸ್, ಕ್ಯಾರಟ್ ಇತ್ಯಾದಿ)
ಕಾರ್ನ್ ಫ್ಲೋರ್ : 1.5 ಟೇಬಲ್ ಚಮಚ
ಹಾಲು : 1 ಕಪ್ (optional)
ಕರಿ ಮೆಣಸಿನ ಪುಡಿ (ಪೆಪ್ಪರ್ ಪೌಡರ್): 1/2 - 1 ಟೀ ಚಮಚ
ಉಪ್ಪು : ರುಚಿಗೆ
ಲಿಂಬು ರಸ : 1 ಟೇಬಲ್ ಚಮಚ (optional)
ಬೆಣ್ಣೆ : 1 ಟೇಬಲ್ ಚಮಚ
ವಿಧಾನ :
ದಪ್ಪ ತಳದ ಪಾತ್ರೆಯನ್ನು ಒಲೆಯ ಮೇಲಿಟ್ಟು ಬೆಣ್ಣೆ ಹಾಕಿ, ಕರಗಿದ ಮೇಲೆ ಹೆಚ್ಚಿಟ್ಟುಕೊಂಡ ಮಿಶ್ರ ತರಕಾರಿ ಹಾಕಿ 1-2 ನಿಮಿಷ ಫ್ರೈ ಮಾಡಿ. ನಂತರ ತರಕಾರಿ ಮುಳುಗುವಷ್ಟು ನೀರು, ಸ್ವಲ್ಪ ಉಪ್ಪು ಹಾಕಿ 5-10 ನಿಮಿಷ ಬೇಯಿಸಿ. ಕಾರ್ನ್ ಫ್ಲೋರ್ ಅನ್ನು ಒಂದು ಕಪ್ ನೀರು ಅಥವಾ ಹಾಲಿನಲ್ಲಿ ಗಂಟಾಗದಂತೆ ಕಲಕಿಕೊಳ್ಳಿ. ಇದನ್ನು ಬೆಂದ ತರಕಾರಿಗೆ ಹಾಕಿ, 1.5 - 2 ಕಪ್ ನೀರು ಹಾಕಿ ಸಣ್ಣ ಉರಿಯಲ್ಲಿ ಕಲಕುತ್ತಿರಿ. ಸ್ವಲ್ಪ ದಪ್ಪವಾಗುತ್ತಾ ಬಂದಂತೆ ಉಪ್ಪು, ಪೆಪ್ಪರ್ ಪುಡಿ, ಲಿಂಬುರಸ ಹಾಕಿ ಕಲಕಿ ಉರಿ ಆರಿಸಿ.
ಬಿಸಿ ಬಿಸಿ ಸೂಪ್ ಅನ್ನು ಸರ್ವ್ ಮಾಡಿ.
ಸಲಹೆಗಳು :
1) ತರಕಾರಿಗಳ ಜೊತೆ ಈರುಳ್ಳಿ ಕೂಡ ಬಳಸಬಹುದು. ಬೆಣ್ಣೆ ಹಾಕಿದ ನಂತರ ಮೊದಲು ಈರುಳ್ಳಿಯನ್ನು ಹಾಕಿ ಅರ್ಧ ನಿಮಿಷ ಫ್ರೈ ಮಾಡಿ ನಂತರ ಉಳಿದ ತರಕಾರಿ ಹಾಕಿ ಫ್ರೈ ಮಾಡಿ.
ಸಲಹೆಗಳು :
1) ತರಕಾರಿಗಳ ಜೊತೆ ಈರುಳ್ಳಿ ಕೂಡ ಬಳಸಬಹುದು. ಬೆಣ್ಣೆ ಹಾಕಿದ ನಂತರ ಮೊದಲು ಈರುಳ್ಳಿಯನ್ನು ಹಾಕಿ ಅರ್ಧ ನಿಮಿಷ ಫ್ರೈ ಮಾಡಿ ನಂತರ ಉಳಿದ ತರಕಾರಿ ಹಾಕಿ ಫ್ರೈ ಮಾಡಿ.
ಈವತ್ತೇ ಟ್ರೈ ಮಾಡ್ತೀವ್ರೀ..
ಪ್ರತ್ಯುತ್ತರಅಳಿಸಿಮಾಡ್ ನೋಡ್ರಲಾ ಮತ್ತ :) :)
ಅಳಿಸಿ