ಸಾಮಗ್ರಿಗಳು :
ಸಣ್ಣಗೆ ಹೆಚ್ಚಿದ ನವಿಲು ಕೋಸು : 2 (ಮಧ್ಯಮ ಗಾತ್ರ),
ಸಣ್ಣಗೆ / ಉದ್ದುದ್ದ ಹೆಚ್ಚಿದ ಈರುಳ್ಳಿ : 1 (ದೊಡ್ಡದು)
ಕರಿಬೇವು : ಸ್ವಲ್ಪ,
ಎಣ್ಣೆ : 1 ಟೇಬಲ್ ಚಮಚ,
ಸಾಸಿವೆ : 1 ಟೀ ಚಮಚ,
ಅರಿಶಿನ ಪುಡಿ : 1/2 ಟೀ ಚಮಚ,
ಸಕ್ಕರೆ : 1 ಟೀ ಚಮಚ,
ಉಪ್ಪು : ರುಚಿಗೆ
ಮಸಾಲೆಗೆ ಸಾಮಗ್ರಿಗಳು :
ತೆಂಗಿನ ತುರಿ : 1/2 ಕಪ್,
ಒಣ ಮೆಣಸಿನ ಕಾಯಿ : 4-5,
ಕೊತ್ತಂಬರಿ : 1 ಟೇಬಲ್ ಚಮಚ,
ಕಡಲೆ ಬೇಳೆ : 1/2 ಟೇಬಲ್ ಚಮಚ,
ಜೀರಿಗೆ : 1 ಟೀ ಚಮಚ,
ಬಿಳಿ ಎಳ್ಳು : 1 ಟೀ ಚಮಚ,
ನೆನೆಸಿದ ಹುಣಸೆ ಹಣ್ಣು : ನೆಲ್ಲಿಕಾಯಿ ಗಾತ್ರ / ಒಂದು ಎಸಳು,
ಎಣ್ಣೆ : 1/4 ಟೀ ಚಮಚ
ವಿಧಾನ : ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಹಾಕಿ ಸಿಡಿದ ನಂತರ ಕರಿಬೇವು, ಹೆಚ್ಚಿದ ಈರುಳ್ಳಿ ಹಾಕಿ 1 ನಿಮಿಷ ಹುರಿಯಿರಿ. ನಂತರ ಹೆಚ್ಚಿದ ನವಿಲುಕೋಸು ಹಾಕಿ ಒಂದೆರಡು ಕಪ್ ನೀರು, ಸ್ವಲ್ಪ ಉಪ್ಪು- ಸಕ್ಕರೆ ಹಾಕಿ ಬೇಯಿಸಿ. ತೆಂಗಿನ ತುರಿ, ಹುಣಸೆಹಣ್ಣು ಬಿಟ್ಟು ಉಳಿದ ಮಸಾಲೆ ಸಾಮಗ್ರಿಗೆ ಎಣ್ಣೆ ಹಾಕಿ ಹದವಾಗಿ ಹುರಿಯಿರಿ. ನಂತರ ಈ ಮಿಶ್ರಣವನ್ನು ಹುಣಸೆ ಹಣ್ಣು, ತೆಂಗಿನ ತುರಿ ಸೇರಿಸಿ ಸ್ವಲ್ಪವೇ ತರಿ ತರಿಯಾಗಿ ರುಬ್ಬಿ. ಇದನ್ನು ನವಿಲುಕೋಸು ಬೆಂದ ಮೇಲೆ ಅದಕ್ಕೆ ಹಾಕಿ ಉಪ್ಪು ಹಾಕಿ (ಬೇಯಿಸಲು ಉಪ್ಪು ಹಾಕಿರುವುದರಿಂದ ನೋಡಿಕೊಂಡು ಹಾಕಿ), ನೀರು ಆರುವ ತನಕ ಬೇಯಿಸಿ. ಬಿಸಿ ಬಿಸಿ ನವಿಲುಕೋಸು ಪಲ್ಯವನ್ನು ಅನ್ನ ಮತ್ತು ಚಪಾತಿ ಜೊತೆ ಸವಿಯಿರಿ.
1) ಹುಣಸೆ ಹಣ್ಣಿನ ಬದಲು 1 ಚಮಚದಷ್ಟು ವಾಟೆ ಪುಡಿ / ಅಮ್ಚೂರ್ ಪುಡಿಯನ್ನು ನವಿಲು ಕೋಸನ್ನು ಬೇಯಿಸುವಾಗ ಹಾಕಬಹುದು.
2) ಮತ್ತೊಂದು ಸರಳ ವಿಧಾನ: ಎಣ್ಣೆ, ಉದ್ದಿನ ಬೇಳೆ, ಸಾಸಿವೆ, ಕರಿಬೇವು, ಅರಿಶಿನ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನ ಒಗ್ಗರಣೆ ಮಾಡಿ ಸಣ್ಣಗೆ ಹೆಚ್ಚಿದ ನವಿಲು ಕೋಸು, ಉಪ್ಪು, ಹುಳಿ ಮತ್ತು ನೀರು ಹಾಕಿ ಬೇಯಿಸಿ ತೆಂಗಿನ ತುರಿ ಉದುರಿಸಿ ಪಲ್ಯ ಮಾಡಬಹುದು.
ಸೂಪರ್ ಮತ್ತು ಥ್ಯಾಂಕ್ಸ್ ರೀ...
ಪ್ರತ್ಯುತ್ತರಅಳಿಸಿನಿಮ್ಮ ಪ್ರತಿ ಪ್ರತಿಕ್ರಿಯೆಗೂ ನನ್ನ ನಮನ :)
ಅಳಿಸಿ