ಹಸಿಯಾಗಿ ತಿನ್ನಲೆಂದು ತಂದಿಟ್ಟ ಸೌತೆಕಾಯಿ ಇಟ್ಟಲ್ಲೇ ಸ್ವಲ್ಪ ಒಣಗಿದ ಮೇಲೆ ನೋಡುತ್ತೀರಾ..! ಆಗ ತಿನ್ನಲು ಚೆನ್ನಾಗಿರುವುದಿಲ್ಲ. ಅಂಥ ಸಮಯದಲ್ಲಿ ಈ ಸರಳ ಪಲ್ಯ ಟ್ರೈ ಮಾಡಬಹುದು......
ಸಾಮಗ್ರಿಗಳು :
ಸೌತೆಕಾಯಿ :2,
ಈರುಳ್ಳಿ : 1(ಮಧ್ಯಮ ಗಾತ್ರದ್ದು- Optional),
ಹಸಿ ಮೆಣಸಿನ ಕಾಯಿ : 2-3,
ಕರಿಬೇವು : 6-8 ಎಲೆಗಳು,
ಎಣ್ಣೆ : 2 ಚಮಚ,
ಉದ್ದಿನ ಬೇಳೆ: 1/2 ಚಮಚ,
ಸಾಸಿವೆ: 1/4 ಚಮಚ,
ಸಕ್ಕರೆ : 1/2 ಚಮಚ,
ಅರಿಶಿನ ಪುಡಿ: 2-3 ಚಿಟಿಕೆ,
ವಾಟೆ ಪುಡಿ / ಲಿಂಬು ರಸ: 1/2 ಚಮಚ,
ತೆಂಗಿನ ತುರಿ: 2-3 ಟೇಬಲ್ ಚಮಚ,
ಉಪ್ಪು: ರುಚಿಗೆ.
ಸೌತೆಕಾಯಿ ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸನ್ನು ಸೀಳಿಕೊಳ್ಳಿ. ಬಾಣಲೆಗೆ ಎಣ್ಣೆ, ಉದ್ದಿನ ಬೇಳೆ ಹಾಕಿ ಸ್ವಲ್ಪ ಕೆಂಪಗಾದಾಗ ಸಾಸಿವೆ ಹಾಕಿ ಸಿಡಿಸಿ. ನಂತರ ಹಸಿಮೆಣಸಿನ ಕಾಯಿ, ಕರಿಬೇವು ಹಾಕಿ ಕಲಕಿ, ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ. ಈಗ ಅರಿಶಿನ ಪುಡಿ, ಹೆಚ್ಚಿದ ಸೌತೆಕಾಯಿ, ಉಪ್ಪು, ವಾಟೆ ಪುಡಿ/ ಲಿಂಬುರಸ, ಸಕ್ಕರೆ ಮತ್ತು ಸ್ವಲ್ಪ ನೀರು ಹಾಕಿ ಬೇಯಿಸಿ. ನೀರು ಆರುತ್ತಿರುವಾಗ ತೆಂಗಿನ ತುರಿ ಹಾಕಿ ಕಲಕಿ ಪೂರ್ತಿ ನೀರು ಆರಿದ ಮೇಲೆ ಉರಿ ಆರಿಸಿ. ಬಿಸಿ ಬಿಸಿ ಅನ್ನದ ಜೊತೆ ಸೌತೆಕಾಯಿ ಕಾಯಿ ಪಲ್ಯ ಸವಿಯಿರಿ. ಇದಲ್ಲದೇ ಪೂರಿ, ಚಪಾತಿಯ ಜೊತೆ ಕೂಡ ಚೆನ್ನಾಗಿರುತ್ತದೆ.
ಸೂಚನೆ:
1) ಸೌತೆಕಾಯಿ ಸಿಪ್ಪೆ ಕೂಡ ಆರೋಗ್ಯಕ್ಕೆ ಒಳ್ಳೆಯದಾದ್ದರಿಂದ, ಸೌತೆಕಾಯಿ ಎಳೆಯದಿದ್ದರೆ ಸಿಪ್ಪೆ ತೆಗೆಯುವುದು ಬೇಡ.
2) ಬೀಜ ಬಲಿತಿದ್ದರೆ ಬೀಜ ತೆಗೆದು ಮಾಡಬಹುದು.
2) ಬೀಜ ಬಲಿತಿದ್ದರೆ ಬೀಜ ತೆಗೆದು ಮಾಡಬಹುದು.
Super
ಪ್ರತ್ಯುತ್ತರಅಳಿಸಿThank you :D
ಅಳಿಸಿಧನ್ಯವಾದಗಳು.
ಪ್ರತ್ಯುತ್ತರಅಳಿಸಿ:) :)
ಅಳಿಸಿ