ಬುಧವಾರ, ಏಪ್ರಿಲ್ 1, 2015

ಕೋಡುಬಳೆ:ಸಾಮಗ್ರಿಗಳು: ಚಿರೋಟಿ ರವಾ 2 ಚಮಚ, ಮೈದಾ ಹಿಟ್ಟು 2 ಚಮಚ, ಅಕ್ಕಿಹಿಟ್ಟು 1 ½ ಕಪ್, ಓಮು ½ ಚಮಚ, ಜೀರಿಗೆ 1 ಚಮಚ , ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು, ಇ೦ಗು ಚಿಟಿಕೆ, ಅಚ್ಚಖಾರದ ಪುಡಿ 2 ಚಮಚ.

ವಿಧಾನ : ಚಿರೋಟಿ ರವಾ, ಮೈದಾ ಹಿಟ್ಟು, ಅಕ್ಕಿಹಿಟ್ಟು, ಓಮು, ಜೀರಿಗೆ, ಉಪ್ಪು, ಇ೦ಗು, ಅಚ್ಚಖಾರದ ಪುಡಿ ಇವೆಲ್ಲವನ್ನು ಸೇರಿಸಿ 2 ಚಮಚ ಬಿಸಿ ಎಣ್ಣೆಯನ್ನು ಇದಕ್ಕೆ ಹಾಕಿ. ನ೦ತರ ಕೈಯಲ್ಲಿ ಸರಿಯಾಗಿ ಮಿಕ್ಸ್ ಮಾಡಿ. ಈಗ ಈ ಮಿಶ್ರಣಕ್ಕೆ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಸ್ವಲ್ಪ ಮೃದುವಾಗಿ ಕಲೆಸಿಕೊಳ್ಳಿ. 20 ನಿಮಿಷ ಹಾಗೆ ಬಿಡಿ. ನ೦ತರ ಗೋಲಿಯಾಕಾರದಷ್ಟು ದೊಡ್ಡ ಉ೦ಡೆಯನ್ನು ತೆಗೆದುಕೊ೦ಡು ಉದ್ದುದ್ದಕ್ಕೆ ಹೊಸೆದು ಅದರ ಎರಡು ತುದಿಗಳನ್ನು ಗೋಲಾಕಾರ ಬರುವ೦ತೆ ಸೇರಿಸಿ. ಒಲೆಯಮೇಲೆ ಬಾಣಲಿ ಇಟ್ಟು ಎಣ್ಣೆ ಹಾಕಿ ಅದು ಕಾದ ನ೦ತರ ಗೋಲಾಕಾರವಾಗಿ ಹೊಸೆದಿಟ್ಟ ಹಿಟ್ಟನ್ನು ಕಡಿಮೆ ಉರಿಯಲ್ಲಿ ಹೊ೦ಬಣ್ಣಕ್ಕೆ ಬರುವಷ್ಟು ಕರಿದರೆ, ರುಚಿಯಾದ ಬಿಸಿ ಬಿಸಿ ಕೋಡುಬಳೆ ತಿನ್ನಲು ಸಿದ್ದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ