ಸಾಮಗ್ರಿಗಳು:
ಮಾವಿನ ಕಾಯಿ : ೧/೨ (ಮಧ್ಯಮ ಗಾತ್ರದ್ದು)
ತೆಂಗಿನ ತುರಿ : ೧/೨ ಕಪ್,
ಒಣ ಮೆಣಸಿನ ಕಾಯಿ: ೪-೫,
ಉದ್ದಿನ ಬೇಳೆ : ೧/೪ ಚಮಚ,
ಎಣ್ಣೆ : ೧/೪ ಚಮಚ,
ಸಕ್ಕರೆ : ೧/೪ ಟೀ ಚಮಚ (ಬೇಕಿದ್ದಲ್ಲಿ ಮಾತ್ರ),
ಉಪ್ಪು ರುಚಿಗೆ
ಒಗ್ಗರಣೆಗೆ :
ಎಣ್ಣೆ : ೧ ಚಮಚ,
ಸಾಸಿವೆ : ೧/೪ ಚಮಚ,
ಕರಿಬೇವು : ೩-೪ ಎಲೆಗಳು.
ವಿಧಾನ : ಮಾವಿನಕಾಯಿ ಸಿಪ್ಪೆ ತೆಗೆದು, ಸ್ವಲ್ಪ ಸಣ್ಣಗೆ ಹೆಚ್ಚಿಕೊಳ್ಳಿ, ಉದ್ದಿನಬೇಳೆ ಮತ್ತು ಒಣ ಮೆಣಸಿನಕಾಯಿಗೆ ಎಣ್ಣೆ ಹಾಕಿ ಸ್ವಲ್ಪ ಹುರಿದುಕೊಳ್ಳಿ. ನಂತರ ಹುರಿದ ಮಿಶ್ರಣ, ಹೆಚ್ಚಿದ ಮಾವಿನಕಾಯಿ, ತೆಂಗಿನ ತುರಿ, ಉಪ್ಪು, ಸಕ್ಕರೆ ಹಾಕಿ ಸ್ವಲ್ಪವೇ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಎಣ್ಣೆ, ಸಾಸಿವೆ, ಕರಿಬೇವಿನ ಒಗ್ಗರಣೆ ಮಾಡಿ. ಹುಳಿ - ಖಾರದ ಚಟ್ನಿಯನ್ನು ಬಿಸಿ ಬಿಸಿ ಅನ್ನಕ್ಕೆ ಕಲೆಸಿ ಸವಿಯಿರಿ.
ಸೂಚನೆ:
1) ಮಾವಿನಕಾಯಿಯ ಹುಳಿಯ ಅನುಸಾರ ಪ್ರಮಾಣವನ್ನು ಬದಲಿಸಬೇಕು.
2) ಒಣ ಮೆಣಸಿನ ಕಾಯಿಯ ಬದಲು ಹಸಿಮೆಣಸಿನ ಕಾಯಿ ಉಪಯೋಗಿಸಬಹುದು.
ಚಟ್ನಿಗೆ ಧನ್ಯವಾದಗಳು.
ಪ್ರತ್ಯುತ್ತರಅಳಿಸಿಅಡುಗೆ ಮನೆ ಬಿಟ್ಟು ಹಾಲಿಗೆ ಬನ್ನಿ! ಒಳ್ಳೆಯ ಬರಹ ಕೊಡಿ.. :-D
ಹ ಹ ಹ .... ಸರ್ ಅದೇಕೋ ಅಡುಗೆ ಬಿಟ್ಟು ಜಗುಲಿಗೆ ಬರುವ ಮನಸ್ಸೇ ಆಗುತ್ತಿಲ್ಲ...!!
ಅಳಿಸಿ