ಸಾಮಗ್ರಿಗಳು :
ತೋತಾಪುರಿ ಮಾವಿನಕಾಯಿ 1/2
ಈರುಳ್ಳಿ 1 (ಸಣ್ಣಗೆ ಹೆಚ್ಚಿದ್ದು)
ಅಕ್ಕಿ 1 ಕಪ್
ಎಣ್ಣೆ 3-4 ಟೇಬಲ್ ಚಮಚ
ಶೇಂಗಾ 1-2 ಚಮಚ
ಉದ್ದಿನ ಬೇಳೆ 1/2 ಚಮಚ
ಕಡ್ಲೆ ಬೇಳೆ 1/2 ಚಮಚ
ಸಾಸಿವೆ 1/4 ಚಮಚ
ಕರಿಬೇವು 8-10 ಎಲೆಗಳು
ಅರಿಶಿನ ಪುಡಿ 1/4 ಚಮಚ
ಸಕ್ಕರೆ 1/2 ಚಮಚ
ತೆಂಗಿನ ತುರಿ 2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ವಿಧಾನ :
ಅಕ್ಕಿಯಿಂದ ಉದುರುದುರಾಗಿ ಅಣ್ಣ ಮಾಡಿಕೊಳ್ಳಿ. ಮಾವಿನಕಾಯಿ ಸಿಪ್ಪೆ ತೆಗೆದು ತುರಿದುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಶೇಂಗಾ, ಕಡ್ಲೆ ಬೇಳೆ, ಉದ್ದಿನ ಬೇಳೆ ಹಾಕಿ ಸ್ವಲ್ಪ ಕೆಂಪಗಾದ ಮೇಲೆ ಸಾಸಿವೆ ಹಾಕಿ ಸಿಡಿಸಿ. ನಂತರ ಕರಿಬೇವು, ಹೆಚ್ಚಿದ ಈರುಳ್ಳಿ, ಅರಿಶಿನ ಪುಡಿ ಹಾಕಿ ಹುರಿಯಿರಿ. ಈಗ ತುರಿದ ಮಾವಿನ ಕಾಯಿ, ಉಪ್ಪು, ಸಕ್ಕರೆ ಹಾಕಿ ಒಂದು ನಿಮಿಷ ಹುರಿಯಿರಿ. ಮಾವಿನ ಕಾಯಿ ಮೆತ್ತಗಾದ ಮೇಲೆ ತೆಂಗಿನ ತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಉರಿ ಆರಿಸಿ. ಇದಕ್ಕೆ ಅನ್ನ ಹಾಕಿ ಕಲಸಿದರೆ ಮಾವಿನಕಾಯಿ ಚಿತ್ರಾನ್ನ ಸವಿಯಲು ಸಿದ್ಧ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ