ಶುಕ್ರವಾರ, ಮೇ 29, 2015

ಬಿಸಿಬೇಳೆ ಬಾತ್ :ಸಾಮಗ್ರಿಗಳು:ಅಕ್ಕಿ 1 ಕಪ್, ತೊಗರಿಬೇಳೆ 1 ಕಪ್, ಬೀನ್ಸ್ ½ ಕಪ್, ಆಲೂಗಡ್ಡೆ 1 , ಕ್ಯಾರೆಟ್ ¼ ಕಪ್, ಈರುಳ್ಳಿ 2, ಕರಿಬೇವು, ಗೋಡ೦ಬಿ, ತುಪ್ಪ.


ಮಸಾಲೆಗೆ : ಕಡಲೇಬೇಳೆ 4 ಚಮಚ, ಉದ್ದಿನ ಬೇಳೆ 2 ಚಮಚ, ಜೀರಿಗೆ 1 ಚಮಚ, ಧನಿಯಾ 1 ಚಮಚ, ಇ೦ಗು, ಚಕ್ಕೆ 1 ಇ೦ಚು, ಲವ೦ಗ 3,  ತೆ೦ಗಿನ ತುರಿ ½ ಕಪ್.ವಿಧಾನ : ತೊಗರಿಬೇಳೆಯನ್ನು ½ ಗ೦ಟೆ ನೀರಿನಲ್ಲಿ ನೆನೆಸಿಡಿ. ಅಕ್ಕಿ & ತೊಗರಿಬೇಳೆಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಅಕ್ಕಿ ಬೇರೆ ಪಾತ್ರೆಯಲ್ಲಿ ಮತ್ತು ಬೇಳೆ, ಬೀನ್ಸ್, ಅಲೂಗಡ್ಡೆ, ಕ್ಯಾರೇಟ್ ಇವನ್ನು ಮತ್ತೊ೦ದು ಪಾತ್ರೆಗೆ ಹಾಕಿ ಕುಕ್ಕರ್ ನಲ್ಲಿ 3 ವಿಷಲ್ ಕೂಗಿಸಿ ಉರಿ ಆರಿಸಿ. ಬಾಣಲೆಗೆ ಎಣ್ಣೆ ಹಾಕಿಕೊ೦ಡು  ಬಿಸಿಯಾದ ಮೇಲೆ ಸಾಸಿವೆ, ಕರಿಬೇವು ಹಾಕಿ ಅದು ಚಿಟಪಟಿಸಿದ ಮೇಲೆ ಹೆಚ್ಚಿದ ಈರುಳ್ಳಿ & ಟೊಮೆಟೊ ಹಾಕಿ ಬಾಡಿಸಿ. ಮೇಲೆ ಹೇಳಿದ ಮಸಾಲೆ ಪದಾರ್ಥಗಳನ್ನು ಹುರಿದುಕೊ೦ಡು ತೆ೦ಗಿನ ತುರಿ ಜೊತೆ ಹಾಕಿ ನೀರು ಸೇರಿಸಿ ರುಬ್ಬಿಕೊಳ್ಳಿ. ಈಗ ಮಸಾಲೆಯನ್ನು ಬಾಣಲೆಗೆ ಹಾಕಿ ನಿಮಿಷ ಕುದಿಸಿ, ಅದಕ್ಕೆ ಬೇಯಿಸಿದ ಬೇಳೆ & ತರಕಾರಿಗಳನ್ನು ಸೇರಿಸಿ ಕೊನೆಯಲ್ಲಿ ಎಷ್ಟು ಬೇಕೋ ಅಷ್ಟು ಅನ್ನ ಸೇರಿಸಿ ಮಿಕ್ಸ್ ಮಾಡಿ. ಅದರ ಮೇಲೆ ತುಪ್ಪ ಹಾಕಿದರೆ ಘಮಘಮಿಸುವ ಬಿಸಿಬೇಳೆಭಾತ್ ತಿನ್ನಲು ಸಿದ್ಧ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ