ಗುರುವಾರ, ಆಗಸ್ಟ್ 13, 2015

ಸಿಹಿ ಕು೦ಬಳಹಲ್ವ:

ಸಾಮಗ್ರಿಗಳು :ಸಿಹಿ ಕು೦ಬಳ ಕಾಯಿ 1 ಚಿಕ್ಕದು, ಸಕ್ಕರೆ ¾ ಕಪ್,ಗೋಡ೦ಬಿ 10-12, ತುಪ್ಪ ¼ ಕಪ್. (ಪ್ರಮಾಣ : 1 ಕಪ್ ಸಿಹಿಕು೦ಬಳದ ತುರಿಗೆ ¾ ಕಪ್ ಸಕ್ಕರೆ)ವಿಧಾನ : ಸಿಹಿಕು೦ಬಳದ ಸಿಪ್ಪೆ & ಬೀಜ ತೆಗೆದು ತುರಿದುಕೊಳ್ಳಿ. ದೊಡ್ಡ ಬೌಲ್ ಸಿಹಿಗು೦ಬಳದ ತುರಿಗೆ 3/4 ಬೌಲ್ ಸಕ್ಕರೆ ಬೇಕು. ದಪ್ಪ ತಳದ ಬಾಣಲೆಗೆ ತುಪ್ಪ,ತುರಿದ ಸಿಹಿ ಕು೦ಬಳ, ಸಕ್ಕರೆ ಹಾಕಿ 10 ನಿಮಿಷ ಸ್ವಲ್ಪ ದೊಡ್ಡ ಉರಿಯಲ್ಲಿ ಬೇಯಿಸಿ ನ೦ತರ ಉರಿ ಕಡಿಮೆ ಮಾಡಿ ಆಗಾಗ ಕೈ ಆಡಿಸಬೇಕು. ಇಲ್ಲವಾದಲ್ಲಿ ಸೀದುಹೋಗುತ್ತದೆ.ಗಟ್ಟಿಯಾಗುವವರೆಗೂ ತೊಳೆಸುತ್ತಿರಬೇಕು. ಗಟ್ಟಿಯಾದ ಮೇಲೆ ತುಪ್ಪದಲ್ಲಿ ಹುರಿದ ಗೋಡ೦ಬಿ ಹಾಕಿ ಮಿಕ್ಸ್ ಮಾಡಿ. ಬಿಸಿ ಬಿಸಿ ಸಿಹಿ ಕು೦ಬಳ ಹಲ್ವ ಸರ್ವ ಮಾಡಿ.

ಸಿಹಿ ಕು೦ಬಳದ ಬರ್ಫಿ: ಹಲ್ವವನ್ನು ಪೂರ್ತಿ ಗಟ್ಟಿಮಾಡಿ ಒ೦ದು ಪ್ಲೇಟ್ ಗೆ ತುಪ್ಪ ಸವರಿ ಗಟ್ಟಿಯಾದ ಕು೦ಬಳಹಾಯಿ ಹಲ್ವವನ್ನು ಸಮ ಪ್ರಮಾಣದಲ್ಲಿ ಹರಡಿ, ಅದು ತಣ್ಣಗಾದ ಮೇಲೆ ಚೌಕಾಕಾರದಲ್ಲಿ ಕತ್ತರಿಸಿ.

ಸೂಚನೆ: ನಾನಿಲ್ಲಿ ಏಲಕ್ಕಿ ಬಳಸಿಲ್ಲ. ಏಕೆ೦ದರೆ ಏಲಕ್ಕಿ ಹಾಕಿದರೆ ಸಿಹಿ ಕು೦ಬಳದ ಸುವಾಸನೆಯ ಬದಲು ಏಲಕ್ಕಿ ಸುವಾಸನೆ ಬರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ