ಶುಕ್ರವಾರ, ಜುಲೈ 31, 2015

ಮೊಸರನ್ನ (Curd Rice) :

ಸಾಮಗ್ರಿಗಳು: 
ಅಕ್ಕಿ : 1/2 ಕಪ್,
ಮೊಸರು : 1-1.5 ಕಪ್,
ತೆಂಗಿನ ತುರಿ : 2 ಚಮಚ,
ದಾಳಿಂಬೆ : 2 ಟೇಬಲ್ ಚಮಚ,
ಒಣ ದ್ರಾಕ್ಷಿ : 1 ಟೇಬಲ್ ಚಮಚ,
ಗೋಡಂಬಿ ಚೂರುಗಳು : 1 ಚಮಚ, 
ಎಣ್ಣೆ : 2 ಚಮಚ,
ಉದ್ದಿನಬೇಳೆ : 1/2 ಚಮಚ,
ಜೀರಿಗೆ : 1/4 ಚಮಚ,
ಸಾಸಿವೆ : 1/4 ಚಮಚ,
ಬಿಳಿ ಎಳ್ಳು : 1/4 ಚಮಚ,
ಹಸಿಮೆಣಸಿನ ಕಾಯಿ : 1,
ಕರಿಬೇವು : 4-5 ಎಲೆಗಳು,
ಹೆಚ್ಚಿದ ಕೊತ್ತಂಬರಿ ಸೊಪ್ಪು : 1 ಚಮಚ,
ತುರಿದ ಶುಂಟಿ : 1/4 ಚಮಚ,
ಉಪ್ಪು : ರುಚಿಗೆ 

ವಿಧಾನ : 
ಅಕ್ಕಿ ತೊಳೆದು ಸ್ವಲ್ಪವೇ ಮೆತ್ತಗೆ ಅನ್ನ ಮಾಡಿಕೊಳ್ಳಿ. ಒಂದು ಅಗಲವಾದ ಪಾತ್ರೆಯಲ್ಲಿ ಅನ್ನವನ್ನು ಹರವಿಕೊಂಡು ತಣ್ಣಗಾಗಲು ಬಿಡಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಉದ್ದಿನ ಬೇಳೆ ಹಾಕಿ ಸ್ವಲ್ಪ ಕೆಂಪಗಾದ ಮೇಲೆ, ಜೀರಿಗೆ, ಸಾಸಿವೆ ಹಾಕಿ ಸಿಡಿದ ಮೇಲೆ ಎಳ್ಳು, ಹೆಚ್ಚಿದ ಹಸಿಮೆಣಸಿನ ಕಾಯಿ, ಕರಿಬೇವು, ತುರಿದ ಶುಂಟಿ ಹಾಕಿ ಉರಿ ಆರಿಸಿ ಒಗ್ಗರಣೆಯನ್ನು ಅನ್ನಕ್ಕೆ ಹಾಕಿ ಕಲಸಿ. ನಂತರ ಇದಕ್ಕೆ ಮೊಸರು, ಉಪ್ಪು, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಹಾಕಿ ಕಲಸಿ. ಕೊನೆಯಲ್ಲಿ ದಾಳಿಂಬೆ, ಒಣ ದ್ರಾಕ್ಷಿ, ಗೋಡಂಬಿ ಹಾಕಿ ಕಲಸಿದರೆ ಸವಿ ಸವಿ ಮೊಸರನ್ನ ಸಿದ್ಧ. 



1 ಕಾಮೆಂಟ್‌: