ಮಂಗಳವಾರ, ಜುಲೈ 7, 2015

ಮಾವಿನ ಕಾಯಿ ತಂಬುಳಿ:

ಸಾಮಗ್ರಿಗಳು :
ತೋತಾಪುರಿ ಮಾವಿನಕಾಯಿ : 1/2,
ಹಸಿ ಮೆಣಸಿನಕಾಯಿ : ೧-೨,
ಸಕ್ಕರೆ : ೧/೨ ಚಮಚ,
ಉಪ್ಪು : ರುಚಿಗೆ 

ಒಗ್ಗರಣೆಗೆ :
ಎಣ್ಣೆ : ೨ ಚಮಚ, 
ಸಾಸಿವೆ: ೧/೨ ಚಮಚ,
ಕರಿಬೇವು : ೫-೬ ಎಲೆಗಳು

ವಿಧಾನ :
ಮಾವಿನಕಾಯಿ ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ. ಅದನ್ನು ಮಿಕ್ಸಿಗೆ ಹಾಕಿ ಹಸಿ ಮೆಣಸು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಎರಡು ಕಪ್ ನಷ್ಟು ನೀರು ಹಾಕಿ ಸಕ್ಕರೆ, ಉಪ್ಪು ಹಾಕಿ ಕಲಕಿ. ರುಚಿ ನೋಡಿಕೊಂಡು ಉಪ್ಪು ಸಿಹಿ ಸರಿಪಡಿಸಿ. ಹುಳಿ ಜಾಸ್ತಿ ಇದ್ದರೆ ಸ್ವಲ್ಪ ನೀರು ಸೇರಿಸಿ. ನಂತರ ಎಣ್ಣೆ, ಸಾಸಿವೆ ಒಗ್ಗರಣೆ ಮಾಡಿ ಅದಕ್ಕೆ ಕೊನೆಯಲ್ಲಿ ಕರಿಬೇವು ಹಾಕಿ ತಂಬುಳಿಗೆ ಒಗ್ಗರಣೆ ಹಾಕಿ, ತಕ್ಷಣ ಕರಿಬೇವನ್ನು ಕೈಯಲ್ಲಿ ಅರೆಯಿರಿ. (ಒಗ್ಗರಣೆಗೆ ಸ್ವಲ್ಪ ಇಂಗು ಬೇಕಾದರೂ ಸೇರಿಸಿಕೊಳ್ಳಬಹುದು). ಈಗ ತಂಬುಳಿ / ಹಸಿ ಮಾವಿನಕಾಯಿ ಅಪ್ಪೆಹುಳಿ ಸ್ವಲ್ಪ ಮೆತ್ತಗಿನ ಅನ್ನದ ಜೊತೆ ಸವಿಯಲು ಸಿದ್ಧ. 


ಸೂಚನೆ:
ಹುಳಿ, ಖಾರ, ಉಪ್ಪು ಎಲ್ಲಾ ಹದವಾಗಿದ್ದರೆ ರುಚಿಯಾಗಿರುತ್ತದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ