ಬುಧವಾರ, ಜುಲೈ 29, 2015

ಪಾಲಕ್- ಕಾರ್ನ್ ಸೂಪ್ :

ಸಾಮಗ್ರಿಗಳು :
ಪಾಲಕ್ ಸೊಪ್ಪು -1 ಕಟ್ಟು, 
ಸ್ವೀಟ್ ಕಾರ್ನ್ - 1/4 ಕಪ್, 
ಈರುಳ್ಳಿ 1 ಸಣ್ಣದು, 
ಬೆಳ್ಳುಳ್ಳಿ - 3-4 ಎಸಳು , 
ಉಪ್ಪು ರುಚಿಗೆ ತಕ್ಕಷ್ಟು, 
ಕಾಳುಮೆಣಸಿನ ಪುಡಿ 1/2 ಚಮಚ,
 ಬೆಣ್ಣೆ 1 ಚಮಚ.

ವಿಧಾನ : ಸ್ವೀಟ್ ಕಾರ್ನನನ್ನು ಕುಕ್ಕರ್ ನಲ್ಲಿ ಬೇಯಿಸಿ. 2 ಸೀಟಿ ಸಾಕು. ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದುಕೊಳ್ಳಿ.  ಒಲೆಯಮೇಲೆ ಬಾಣಲೆ ಇಟ್ಟು ಅದಕ್ಕೆ ಬೆಣ್ಣೆ ಹಾಕಿ, ಬೆಣ್ಣೆ ಕರಗಿದ ಮೇಲೆ ಪಾಲಕ್ ಸೊಪ್ಪು, ಹೆಚ್ಚಿದ ಈರುಳ್ಳಿ & ಬೆಳ್ಳುಳ್ಳಿ ಹಾಕಿ ಸಣ್ಣ ಉರಿಯಲ್ಲಿ ಬಾಡಿಸಿಕೊಳ್ಳಿ. ಇದು ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಪಾಲಕ್ ಮಿಶ್ರಣವನ್ನು ಒ೦ದು ಪಾತ್ರೆಗೆ ಹಾಕಿ 2 ಲೋಟ ನೀರು ಹಾಕಿ ಕುದಿಸಿ. ಹಾಗೆ ಕುದಿಯುತ್ತಿರುವಾಗ ಉಪ್ಪು, ಕಾಳುಮೆಣಸಿನ ಪುಡಿ, ಬೇಯಿಸಿದ ಸ್ವೀಟ್ ಕಾರ್ನ್ ಹಾಕಿದರೆ ಬಿಸಿ ಬಿಸಿ ಸೂಪ್ ಕುಡಿಯಲು ಸಿದ್ದ.

1 ಕಾಮೆಂಟ್‌: