ಸಾಮಗ್ರಿಗಳು:
ಹೆಸರು ಬೇಳೆ : 1/2 ಕಪ್,
ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು : 1/2 ಕಪ್,
ಸಣ್ಣಗೆ ಹೆಚ್ಚಿದ ಈರುಳ್ಳಿ : 1/2 ಕಪ್,
ಹಸಿಮೆಣಸಿನ ಕಾಯಿ : 2-3,
ಬೆಳ್ಳುಳ್ಳಿ : 6-7 ಎಸಳು,
ಶುಂಟಿ : 1 ಇಂಚು,
ಅರಿಶಿನ ಪುಡಿ : 1/4 ಚಮಚ,
ಎಣ್ಣೆ : 4-5 ಚಮಚ,
ಸಾಸಿವೆ: 1/2 ಚಮಚ,
ಕರಿಬೇವು : 7-8 ಎಲೆಗಳು,
ನಿಂಬೆ ಹಣ್ಣು : 1,
ಉಪ್ಪು : ರುಚಿಗೆ.
ವಿಧಾನ:
ಹೆಸರುಬೇಳೆಯನ್ನು ತೊಳೆದು ಅರಿಶಿನ ಪುಡಿ, 1/4 ಚಮಚ ಎಣ್ಣೆ ಮತ್ತು ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ಬೆಳ್ಳುಳ್ಳಿ ಮತ್ತು ಶುಂಟಿ ಜಜ್ಜಿಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಉದ್ದುದ್ದ ಸೀಳಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಹಾಕಿ ಸಿಡಿದ ಮೇಲೆ ಹಸಿಮೆಣಸಿನ ಕಾಯಿ, ಕರಿಬೇವು ಹಾಕಿ ಒಮ್ಮೆ ಹುರಿದು, ಜಜ್ಜಿದ ಶುಂಟಿ ಮತ್ತು ಬೆಳ್ಳುಳ್ಳಿ ಹಾಕಿ ಹುರಿಯಿರಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಅರ್ಧ ನಿಮಿಷ ಹುರಿದು ಹೆಚ್ಚಿದ ಪಾಲಕ್ ಸೊಪ್ಪು ಹಾಕಿ, ಸ್ವಲ್ಪ ನೀರು ಹಾಕಿ ಬೇಯಿಸಿ. ಸೊಪ್ಪು ಬೆಂದ ಮೇಲೆ ಮೊದಲೇ ಬೇಯಿಸಿಕೊಂಡ ಬೇಳೆ ಹಾಕಿ ಬೇಕಿದ್ದರೆ ಸ್ವಲ್ಪ ನೀರು ಹಾಕಿ, ಉಪ್ಪು ಹಾಕಿ ಕುದಿಸಿ. ಕೊನೆಯಲ್ಲಿ ನಿಂಬೆ ರಸ ಸೇರಿಸಿ ಉರಿ ಆರಿಸಿ. ಈಗ ಬಿಸಿ ಬಿಸಿ ಪಾಲಕ್ ದಾಲ್ ಅನ್ನು ಅನ್ನದ ಜೊತೆ ಸವಿಯಿರಿ.
ಸೂಚನೆ:
1) ಹೆಸರುಬೇಳೆ ಬೇಯಿಸಿದ ಮೇಲೆ ಅದನ್ನು ಅರೆಯಬಾರದು (smash). ಅರೆದರೆ ಮಾಡಿದ ಪದಾರ್ಥ ಸ್ವಲ್ಪ ಲೋಳೆ ಎನಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ