ಸಾಮಗ್ರಿಗಳು:
ಸಾಂಬಾರ್ ಸೊಪ್ಪು (ದೊಡ್ಡ ಪತ್ರೆ) - 10-12 ಎಲೆಗಳು
ಮೊಸರು - 1 ಕಪ್
ಈರುಳ್ಳಿ - 1 (ಸಣ್ಣದು)
ಎಣ್ಣೆ - 2 ಚಮಚ
ಉದ್ದಿನ ಬೇಳೆ - 1/2 ಚಮಚ
ಸಾಸಿವೆ - 1/4 ಚಮಚ
ಹಸಿಮೆಣಸಿನ ಕಾಯಿ - 1
ಉಪ್ಪು - ರುಚಿಗೆ
ವಿಧಾನ :
ದೊಡ್ಡ ಪತ್ರೆ ಎಲೆಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ, ಉದ್ದಿನಬೇಳೆ ಹಾಕಿ ಸ್ವಲ್ಪ ಕೆಂಪಗಾದ ಮೇಲೆ ಸಾಸಿವೆ ಹಾಕಿ ಸಿಡಿಸಿ, ಹೆಚ್ಚಿಕೊಂಡ ಹಸಿಮೆಣಸು ಹಾಕಿ. ನಂತರ ಇದಕ್ಕೆ ಹೆಚ್ಚಿಕೊಂಡ ಸೊಪ್ಪು ಹಾಕಿ ಸಣ್ಣ ಉರಿಯಲ್ಲಿ 2-3 ನಿಮಿಷ ಹುರಿಯಿರಿ. ನಂತರ ಹೆಚ್ಚಿಕೊಂಡ ಈರುಳ್ಳಿ ಹಾಕಿ ಅರ್ಧ ನಿಮಿಷ ಹುರಿದು (ಈರುಳ್ಳಿ ಪೂರ್ತಿ ಹುರಿಯದೇ ಸ್ವಲ್ಪ ಹಸಿಯಾಗೇ ಇರಲಿ), ಉರಿ ಆರಿಸಿ. ತಣ್ಣಗಾದ ಮೇಲೆ ಮೊಸರು, ಉಪ್ಪು ಹಾಕಿ ಕಲಕಿ. ಈಗ ದೊಡ್ಡ ಪತ್ರೆ ಹಶಿ / ಮೊಸರು ಬಜ್ಜಿ ಅನ್ನ ಅಥವಾ ಪಲಾವ್ ಜೊತೆ ಸವಿಯಲು ಸಿಧ್ಧ.
ಸಲಹೆ:
ಇದೇ ರೀತಿ ಮೆಂತ್ಯ ಸೊಪ್ಪನ್ನು ಸಣ್ಣಗೆ ಹೆಚ್ಚಿ ಮೇಲೆ ಹೇಳಿದಂತೆ ಒಗ್ಗರಣೆ ಮಾಡಿ ಸೊಪ್ಪು ಹಾಕಿ, ಸ್ವಲ್ಪ ಉಪ್ಪು, ಚಿಟಿಕೆ ಸಕ್ಕರೆ ಹಾಕಿ ಹುರಿದು ಹಶಿ ಮಾಡಬಹುದು. ಇದಕ್ಕೆ ಹೆಚ್ಚಿದ ಹಸಿ ಈರುಳ್ಳಿಯನ್ನು ಹಾಕಬೇಕು.