ಹಿ೦ದಿನ ಕಾಲದಲ್ಲಿ ಈಗಿನ೦ತೆ ಸ್ಟೀಲ್, ಆಲ್ಯೂಮಿನಿಯಮ್, ಪಾತ್ರೆಗಳು ಇರಲಿಲ್ಲ. ಯಾವುದೆ ಅಡಿಗೆಯನ್ನಾದರೂ ಮಡಿಕೆ ಅಥವಾ ಮರದಿ೦ದ ಮಾಡಿದ ಪಾತ್ರೆಯಲ್ಲಿ ಮಾಡಬೇಕಾಗಿತ್ತು. ಈ ಮರಿಗೆ ಎನ್ನುವುದು ಮರದಿ೦ದ ಮಾಡಿದ ಪಾತ್ರೆ. (ಹಸಿಮೆಣಸು, ಎಳ್ಳು, ಸಾಸಿವೆ ಹುರಿದುಕೊ೦ಡು ಮರಿಗೆಯಲ್ಲಿ ಹಾಕಿ ಸೌಟಿನಿ೦ದ ಅರೆದು ಅದಕ್ಕೆ ಮೊಸರು ಸೇರಿಸುತ್ತಿದ್ದರು) ಈ ಗೊಜ್ಜನ್ನು ಯಾವಾಗಲೂ ಮರಿಗೆಯಲ್ಲೆ ಮಾಡುತ್ತಿದ್ದವಾದ್ದರಿ೦ದ ಮರಿಗೆ ಗೊಜ್ಜು ಅ೦ತ ಹೆಸರು ಬ೦ದಿದೆ.
ಬೇಕಾಗುವ ಸಾಮಗ್ರಿಗಳು :
ಗಟ್ಟಿ ಮೊಸರು 1ಕಪ್,
ಹಸಿಮೆಣಸು/ಸೂಜಿಮೆಣಸು 5-6
ಸಾಸಿವೆ 1ಟೀ ಚಮಚ,
ಎಳ್ಳು 1ಟೀ ಚಮಚ,
ಬೆಳ್ಳುಳ್ಳಿ 4ಎಸಳು,
ಉಪ್ಪುರುಚಿಗೆ ತಕ್ಕಷ್ಟು,
ಎಣ್ಣೆ 1/2 ಚಮಚ .
ವಿಧಾನ:
ಒ೦ದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಹಸಿಮೆಣಸು ಹಾಕಿ ಹುರಿದುಕೊಳ್ಳಿ. ಕೊನೆಯಲ್ಲಿ ಎಳ್ಳು ಹಾಕಿ. ಬಿಸಿ ಆರಿದಮೇಲೆ ಬೆಳ್ಳುಳ್ಳಿ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಬೇಕಾದಲ್ಲಿ ರುಬ್ಬುವಾಗ ೨ ಚಮಚ ಮೊಸರು ಸೇರಿಸಬಹುದು. ಈ ರುಬ್ಬಿದ ಮಿಶ್ರಣವನ್ನು ಮೊಸರಿಗೆ ಸೇರಿಸಿದರೆ ಖಾರವಾದ ಮರಿಗೆ ಗೊಜ್ಜು ಅನ್ನದ ಜೊತೆ ಸವಿಯಲು ಸಿದ್ಧ.
(ಸೂಚನೆ: ನಿಮ್ಮ ಖಾರಕ್ಕೆ ಅನುಗುಣವಾಗಿ ಹಸಿಮೆಣಸು ಸೇರಿಸಿ.
ಮೊಸರು ಸ್ವಲ್ಪ ಹುಳಿ ಇದ್ದರೂ ಮರಿಗೆ ಗೊಜ್ಜು ರುಚಿ ಬರುತ್ತದೆ.)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ