ಶುಕ್ರವಾರ, ಫೆಬ್ರವರಿ 12, 2016

ಬೀಟ್ರೂಟ್ ಚಟ್ನಿ :

ಸಾಮಗ್ರಿಗಳು : 
ಬೀಟ್ರೂಟ್ - 1
ತೆ೦ಗಿನತುರಿ  - ಟೇ. ಚಮಚ
ಒಣ ಮೆಣಸು - 3
ಜೀರಿಗೆ - 1/2 ಟೀ. ಚಮಚ
ಧನಿಯಾ - 1/2 ಟೀ. ಚಮಚ
ಉದ್ದಿನಬೇಳೆ - 1/2 ಟೀ. ಚಮಚ
ಉಪ್ಪು ರುಚಿಗೆ ತಕ್ಕಷ್ಟು, 
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಇ೦ಗು, ಕರಿಬೇವು.



ವಿಧಾನ : ಬೀಟ್ರೂಟ್ ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ. ಒ೦ದು ಪಾತ್ರೆಗೆ ಹೆಚ್ಚಿದ ಬೀಟ್ರೂಟ್,ಒಣಮೆಣಸು, ಧನಿಯಾ, ಜೀರಿಗೆ, ಉದ್ದಿನಬೇಳೆ ಉಪ್ಪು & ಬೀಟ್ರೂಟ್ ಬೇಯುವಷ್ಟು ನೀರು ಹಾಕಿ ಒಲೆಯ ಮೇಲೆ ಇಟ್ಟು ಬೇಯಿಸಿ. ಬೇಯಿಸಿದ ಬೀಟ್ರೂಟ್ ಬಿಸಿ ಆರಿದಮೇಲೆ ಅದಕ್ಕೆ ತೆ೦ಗಿನ ತುರಿ ಸೇರಿಸಿ ರುಬ್ಬಿಕೊಳ್ಳಿ. ಬೇಯಿಸಿದ ನೀರು ಸ್ವಲ್ಪ ಉಳಿದಲ್ಲಿ ರುಬ್ಬುವಾಗ ಹಾಕಬಹುದು. ರುಬ್ಬಿದ ಮಿಶ್ರಣವನ್ನು ಒ೦ದು ಪಾತ್ರೆಗೆ ಹಾಕಿ. ಈಗ ಒಗ್ಗರಣೆ ಸೌಟಿಗೆ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ಮೇಲೆ ಸಾಸಿವೆ, ಕರಿಬೇವು ಇ೦ಗು ಹಾಕಿ ಸಾಸಿವೆ ಚಿಟಪಟ ಆದ ಕೂಡಲೆ ಈ ಒಗ್ಗರಣೆಯನ್ನು ಚಟ್ನಿಗೆ ಹಾಕಿ. ಈ ಚಟ್ನಿಯು ಅನ್ನದ  ಜೊತೆ ಅಷ್ಟೆ ಅಲ್ಲದೆ ಚಪಾತಿಯ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ