ಸಾಮಗ್ರಿಗಳು :
ಹಸಿ ಅರಿಶಿನ ಕೊಂಬು - 2 ಇಂಚು
ಒಣ ಮೆಣಸಿನ ಕಾಯಿ - 4-5
ಉದ್ದಿನ ಬೇಳೆ - 1/2 ಚಮಚ
ಬಿಳಿ ಎಳ್ಳು - 1/2 ಚಮಚ
ಎಣ್ಣೆ - 2 ಚಮಚ
ತೆಂಗಿನ ತುರಿ - 1 ಕಪ್
ಹುಣಸೆ ಹಣ್ಣು - ಸಣ್ಣ ನೆಲ್ಲಿಕಾಯಿ ಗಾತ್ರ
ಬೆಲ್ಲ - 3-4 ಚಮಚ
ಉಪ್ಪು - ರುಚಿಗೆ
ವಿಧಾನ :
ಹುಣಸೆ ಹಣ್ಣು ನೀರಿನಲ್ಲಿ ನೆನೆಸಿಡಿ. ಅರಿಶಿನ ಕೊಂಬನ್ನು ಚೆನ್ನಾಗಿ ತೊಳೆದು ತೆಳ್ಳಗೆ ಸ್ಲೈಸ್ ಮಾಡಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ ಉದ್ದಿನ ಬೇಳೆ, ಒಣ ಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿದು ಕತ್ತರಿಸಿಕೊಂಡ ಅರಿಶಿನ ಕೊಂಬನ್ನು ಹಾಕಿ ಒಂದೆರಡು ನಿಮಿಷ ಹುರಿಯಿರಿ. ಕೊನೆಯಲ್ಲಿ ಎಳ್ಳು ಹಾಕಿ ಹುರಿಯಿರಿ.
ನಂತರ ಈ ಮಿಶ್ರಣವನ್ನು ತೆಂಗಿನ ತುರಿ, ಹುಣಸೆ ಹಣ್ಣು ಹಾಕಿ ರುಬ್ಬಿ. ಬಾಣಲೆಗೆ ರುಬ್ಬಿದ ಮಿಶ್ರಣ, ಉಪ್ಪು, ಬೆಲ್ಲ, ಸ್ವಲ್ಪನೀರು ಹಾಕಿ ಕುದಿಸಿ. ಮಳೆಗಾಲದ ತಂಪಿಗೆ ಬಿಸಿ ಬಿಸಿ ಅರಿಶಿನ ಗೊಜ್ಜನ್ನು ಬಿಸಿ ಬಿಸಿ ಅನ್ನದ ಜೊತೆ, ತುಪ್ಪ ಹಾಕಿ ಕಲಸಿಕೊಂಡು ಸವಿಯಿರಿ.
ಸೂಚನೆ:
ಖಾರ, ಸಿಹಿ, ಉಪ್ಪು ಎಲ್ಲಾ ಹದವಾಗಿದ್ದರೆ ರುಚಿ ಹೆಚ್ಚು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ