ಸಾಮಗ್ರಿಗಳು:
ಬೇರು ಹಲಸಿನ ಕಾಯಿ - ೧/೨ (ಚೆನ್ನಾಗಿ ಬಲಿತಿದ್ದು),
ಕಡಲೆ ಹಿಟ್ಟು - ೧.೫ ಕಪ್,
ಅಕ್ಕಿ ಹಿಟ್ಟು - ೧ ಚಮಚ,
ಒಣ ಮೆಣಸಿನ ಪುಡಿ - ೨ ಚಮಚ,
ಅಡುಗೆ ಸೋಡಾ - ಚಿಟಿಕೆ,
ಜೀರಿಗೆ ಪುಡಿ - ೧/೨ ಚಮಚ,
ಉಪ್ಪು - ರುಚಿಗೆ,
ಎಣ್ಣೆ - ಕರಿಯಲು
ವಿಧಾನ :
ಬೇರುಹಲಸಿನ ಸಿಪ್ಪೆ ತೆಗೆದು, ಮಧ್ಯದ ಗಟ್ಟಿ ಭಾಗ (ಮೂಗು) ತೆಗೆದು ಕೆಳಗೆ ಚಿತ್ರದಲ್ಲಿ ತೋರಿಸಿದಂತೆ ತೆಳುವಾಗಿ ಹೆಚ್ಚಿಕೊಳ್ಳಿ.
ಒಂದು ಪಾತ್ರೆಗೆ ಎಣ್ಣೆ ಬಿಟ್ಟು ಉಳಿದೆಲ್ಲಾ ಸಾಮಗ್ರಿ ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹೆಚ್ಚಿದ ಬೇರುಹಲಸನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಸಂಜೆಯ ಟೀ / ಕಾಫಿ ಜೊತೆ ಬಿಸಿ ಬಿಸಿ ಬಜೆ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ