ಶುಕ್ರವಾರ, ಮಾರ್ಚ್ 25, 2016

ಮಸಾಲಾ ಮೊಸರು:

ಸಾಮಗ್ರಿಗಳು:ಮೊಸರು - 1 ಕಪ್, ಈರುಳ್ಳಿ - 1ಚಿಕ್ಕದು, ಕೊತ್ತ೦ಬರಿ ಸೊಪ್ಪು, ಹಸಿಮೆಣಸು - 2, ತೆ೦ಗಿನತುರಿ - 3 ಟೇ.ಚಮಚ, ಉಪ್ಪು ರುಚಿಗೆ ತಕ್ಕಷ್ಟು.


ವಿಧಾನ: ಕೊತ್ತ೦ಬರಿ ಸೊಪ್ಪು, ಹಸಿಮೆಣಸು, ತೆ೦ಗಿನತುರಿ ಇವೆಲ್ಲವನ್ನು ನುಣ್ಣಗೆ ರುಬ್ಬಿಕೊ೦ಡು ಮೊಸರಿಗೆ ಹಾಕಿ ಉಪ್ಪು ಸೇರಿಸಿ. ಕೊನೆಯಲ್ಲಿ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಹಾಕಿದರೆ ಮಸಾಲ ಮೊಸರು ಸಿದ್ಧ. ಇದನ್ನು ನೀರ್ ದೋಸೆ, ಚಪಾತಿ, ಹಾಗೆ ಅನ್ನಕ್ಕು ಕಲೆಸಿಕೊ೦ಡು ತಿನ್ನಬಹುದು.

ಶುಕ್ರವಾರ, ಮಾರ್ಚ್ 18, 2016

ಸ್ವೀಟ್ ಕಾರ್ನ್ ಬಜೆ (ಬಜ್ಜಿ):

ಸಾಮಗ್ರಿಗಳು :
ಸ್ವೀಟ್ ಕಾರ್ನ್ - 2 ಕಪ್, 
ಕಡಲೆ ಹಿಟ್ಟು - 1 ಕಪ್,
ಅಕ್ಕಿ ಹಿಟ್ಟು - 1 ಚಮಚ,
ಕೊತ್ತಂಬರಿ ಸೊಪ್ಪು - 1 ಚಮಚ, 
ಕರಿಬೇವು (ಸಣ್ಣಗೆ ಹೆಚ್ಚಿದ್ದು) - 1 ಚಮಚ,
ಶುಂಟಿ (ತುರಿದಿದ್ದು) - 1/2 ಚಮಚ,
ಒಣ ಮೆಣಸಿನ ಪುಡಿ - 2 ಚಮಚ,
ಜೀರಾ ಪುಡಿ - 1/2 ಚಮಚ,
ಉಪ್ಪು - ರುಚಿಗೆ 
ಎಣ್ಣೆ - ಕರಿಯಲು 

ವಿಧಾನ :
ಕಾರ್ನ್ ಅನ್ನು ಮಿಕ್ಸಿಗೆ ಹಾಕಿ ತರಿ ತರಿಯಾಗಿ ರುಬ್ಬಿ (4-5 ಸೆಕೆಂಡ್  ರುಬ್ಬಿದರೆ ಸಾಕು). ಇದನ್ನು ಒಂದು ಪಾತ್ರೆಗೆ ಹಾಕಿ ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಟಿ, ಒಣ ಮೆಣಸಿನ ಪುಡಿ, ಜೀರಾ ಪುಡಿ, (ಬೇಕಿದ್ದರೆ ಎರಡು ಚಿಟಿಕೆ ಗರಂ ಮಸಾಲ ಪುಡಿ ಹಾಕಬಹುದು), ಅಕ್ಕಿ ಹಿಟ್ಟು, ಉಪ್ಪು ಹಾಕಿ ಸ್ವಲ್ಪ ಸ್ವಲ್ಪವೇ ಕಡಲೆ ಹಿಟ್ಟು ಹಾಕುತ್ತಾ ಕಲಸಿ. ಮಿಶ್ರಣ ಕೈ ಇಂದ ಬಿಡುವಷ್ಟು ಗಟ್ಟಿ ಆದರೆ ಸಾಕು. 

ಎಣ್ಣೆ ಕಾಯಲಿಟ್ಟು, ಮಿಶ್ರಣವನ್ನು ದೊಡ್ಡ ಗೋಲಿ ಗಾತ್ರದಲ್ಲಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು ತೆಗೆದರೆ, ಚುಮು ಚುಮು ಮಳೆಯಲ್ಲಿ ಬಿಸಿ ಬಿಸಿ ಮತ್ತು ಗರಿ ಗರಿಯಾದ ಕಾರ್ನ್ ಬಜೆ ಸವಿಯಲು ಸಿದ್ಧ. 


ಶುಕ್ರವಾರ, ಮಾರ್ಚ್ 11, 2016

ಮಸಾಲ ಮಜ್ಜಿಗೆ:

ಸಾಮಗ್ರಿಗಳು : ಮಜ್ಜಿಗೆ 2ಲೋಟ, ಜೀರಿಗೆ - 1/2 ಚಮಚ, ಹಸಿಮೆಣಸು 1, ಶು೦ಟಿ 1/4 ಇ೦ಚು, ಕೊತ್ತ೦ಬರಿ ಸೊಪ್ಪು - 4-5 ಎಲೆ, ಉಪ್ಪು ನಿಮ್ಮ ರುಚಿಗೆ.
ಒಗ್ಗರಣೆ (Optional) : ಎಣ್ಣೆ - 1 ಚಮಚ, ಕರಿಬೇವು - 4-5ಎಲೆ.



ವಿಧಾನ : ಜೀರಿಗೆ, ಹಸಿಮೆಣಸು, ಶು೦ಟಿ, ಕೊತ್ತ೦ಬರಿ ಸೊಪ್ಪು, ಉಪ್ಪು ಇವೆಲ್ಲವನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊ೦ಡು ಮಜ್ಜಿಗೆಗೆ ಹಾಕಿ. ರುಚಿ ನೋಡಿಕೊ೦ಡು ಉಪ್ಪು ಸೇರಿಸಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಅದು ಕಾದ ಮೇಲೆ ಕರಿಬೇವನ್ನು ಕೈಯಲ್ಲೆ ಸಣ್ಣ ತು೦ಡು ಮಾಡಿ ಹಾಕಿ ಹಾಗೆ ಅದನ್ನು ಮಸಾಲಾ ಮಜ್ಜಿಗೆಗೆ ಸೇರಿಸಿ.

ಗುರುವಾರ, ಮಾರ್ಚ್ 3, 2016

ಅಂಬೊಡೆ:

ಸಾಮಗ್ರಿಗಳು:
ಕಡ್ಲೆ ಬೇಳೆ - ೧ ಕಪ್,
ಈರುಳ್ಳಿ - ೧ (ಮಧ್ಯಮ ಗಾತ್ರದ್ದು - ಸಣ್ಣಗೆ ಹೆಚ್ಚಿಕೊಳ್ಳಿ),
ಶುಂಟಿ (ತುರಿದಿದ್ದು) - ೧ ಚಮಚ,
ಹೆಚ್ಚಿದ ಕೊತ್ತಂಬರಿ ಸೊಪ್ಪು - ೨ ಚಮಚ,
ಸಣ್ಣಗೆ ಹೆಚ್ಚಿದ ಕರಿ ಬೇವು - ೨ ಚಮಚ, 
ಹಸಿಮೆಣಸಿನ ಕಾಯಿ - ೨-೩ (ಸಣ್ಣಗೆ ಹೆಚ್ಚಿಕೊಳ್ಳಿ),
ಉಪ್ಪು - ರುಚಿಗೆ,
ಎಣ್ಣೆ - ಕರಿಯಲು 

ವಿಧಾನ :
ಕಡ್ಲೆ ಬೇಳೆಯನ್ನು ೨-೩ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು, ನಂತರ ನೀರು ಬಸಿದು ತರಿ ತರಿಯಾಗಿ ರುಬ್ಬಿಕೊಳ್ಳಿ (ನೀರು ಹಾಕದೆ ಸ್ವಲ್ಪ ಬೇಳೆ ಹಾಗೆ ಇರುವಂತೆ ರುಬ್ಬಿ). ನಂತರ ಇದಕ್ಕೆ ಎಣ್ಣೆಯನ್ನು ಹೊರತು ಪಡಿಸಿ ಉಳಿದೆಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲಸಿ. 


ಇದರಿಂದ ಲಿಂಬೆ ಗಾತ್ರದ ಉಂಡೆ ಮಾಡಿಕೊಂಡು ಕೈಯಲ್ಲಿ ಸ್ವಲ್ಪ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. 

ಬಿಸಿ ಬಿಸಿ ಅಂಬೊಡೆಯನ್ನು ಟೀ / ಕಾಫೀ ಜೊತೆ ಸವಿಯಿರಿ.