ಸಾಮಗ್ರಿಗಳು:
ಕಡ್ಲೆ ಬೇಳೆ - ೧ ಕಪ್,
ಈರುಳ್ಳಿ - ೧ (ಮಧ್ಯಮ ಗಾತ್ರದ್ದು - ಸಣ್ಣಗೆ ಹೆಚ್ಚಿಕೊಳ್ಳಿ),
ಶುಂಟಿ (ತುರಿದಿದ್ದು) - ೧ ಚಮಚ,
ಹೆಚ್ಚಿದ ಕೊತ್ತಂಬರಿ ಸೊಪ್ಪು - ೨ ಚಮಚ,
ಸಣ್ಣಗೆ ಹೆಚ್ಚಿದ ಕರಿ ಬೇವು - ೨ ಚಮಚ,
ಹಸಿಮೆಣಸಿನ ಕಾಯಿ - ೨-೩ (ಸಣ್ಣಗೆ ಹೆಚ್ಚಿಕೊಳ್ಳಿ),
ಉಪ್ಪು - ರುಚಿಗೆ,
ಎಣ್ಣೆ - ಕರಿಯಲು
ವಿಧಾನ :
ಕಡ್ಲೆ ಬೇಳೆಯನ್ನು ೨-೩ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು, ನಂತರ ನೀರು ಬಸಿದು ತರಿ ತರಿಯಾಗಿ ರುಬ್ಬಿಕೊಳ್ಳಿ (ನೀರು ಹಾಕದೆ ಸ್ವಲ್ಪ ಬೇಳೆ ಹಾಗೆ ಇರುವಂತೆ ರುಬ್ಬಿ). ನಂತರ ಇದಕ್ಕೆ ಎಣ್ಣೆಯನ್ನು ಹೊರತು ಪಡಿಸಿ ಉಳಿದೆಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲಸಿ.
ಇದರಿಂದ ಲಿಂಬೆ ಗಾತ್ರದ ಉಂಡೆ ಮಾಡಿಕೊಂಡು ಕೈಯಲ್ಲಿ ಸ್ವಲ್ಪ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ.
ಬಿಸಿ ಬಿಸಿ ಅಂಬೊಡೆಯನ್ನು ಟೀ / ಕಾಫೀ ಜೊತೆ ಸವಿಯಿರಿ.
ಇದರಿಂದ ಲಿಂಬೆ ಗಾತ್ರದ ಉಂಡೆ ಮಾಡಿಕೊಂಡು ಕೈಯಲ್ಲಿ ಸ್ವಲ್ಪ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ.
ಬಿಸಿ ಬಿಸಿ ಅಂಬೊಡೆಯನ್ನು ಟೀ / ಕಾಫೀ ಜೊತೆ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ