ಸಾಮಗ್ರಿಗಳು :
ಸ್ವೀಟ್ ಕಾರ್ನ್ - 2 ಕಪ್,
ಕಡಲೆ ಹಿಟ್ಟು - 1 ಕಪ್,
ಅಕ್ಕಿ ಹಿಟ್ಟು - 1 ಚಮಚ,
ಕೊತ್ತಂಬರಿ ಸೊಪ್ಪು - 1 ಚಮಚ,
ಕರಿಬೇವು (ಸಣ್ಣಗೆ ಹೆಚ್ಚಿದ್ದು) - 1 ಚಮಚ,
ಶುಂಟಿ (ತುರಿದಿದ್ದು) - 1/2 ಚಮಚ,
ಒಣ ಮೆಣಸಿನ ಪುಡಿ - 2 ಚಮಚ,
ಜೀರಾ ಪುಡಿ - 1/2 ಚಮಚ,
ಉಪ್ಪು - ರುಚಿಗೆ
ಎಣ್ಣೆ - ಕರಿಯಲು
ವಿಧಾನ :
ಕಾರ್ನ್ ಅನ್ನು ಮಿಕ್ಸಿಗೆ ಹಾಕಿ ತರಿ ತರಿಯಾಗಿ ರುಬ್ಬಿ (4-5 ಸೆಕೆಂಡ್ ರುಬ್ಬಿದರೆ ಸಾಕು). ಇದನ್ನು ಒಂದು ಪಾತ್ರೆಗೆ ಹಾಕಿ ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಟಿ, ಒಣ ಮೆಣಸಿನ ಪುಡಿ, ಜೀರಾ ಪುಡಿ, (ಬೇಕಿದ್ದರೆ ಎರಡು ಚಿಟಿಕೆ ಗರಂ ಮಸಾಲ ಪುಡಿ ಹಾಕಬಹುದು), ಅಕ್ಕಿ ಹಿಟ್ಟು, ಉಪ್ಪು ಹಾಕಿ ಸ್ವಲ್ಪ ಸ್ವಲ್ಪವೇ ಕಡಲೆ ಹಿಟ್ಟು ಹಾಕುತ್ತಾ ಕಲಸಿ. ಮಿಶ್ರಣ ಕೈ ಇಂದ ಬಿಡುವಷ್ಟು ಗಟ್ಟಿ ಆದರೆ ಸಾಕು.
ಎಣ್ಣೆ ಕಾಯಲಿಟ್ಟು, ಮಿಶ್ರಣವನ್ನು ದೊಡ್ಡ ಗೋಲಿ ಗಾತ್ರದಲ್ಲಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು ತೆಗೆದರೆ, ಚುಮು ಚುಮು ಮಳೆಯಲ್ಲಿ ಬಿಸಿ ಬಿಸಿ ಮತ್ತು ಗರಿ ಗರಿಯಾದ ಕಾರ್ನ್ ಬಜೆ ಸವಿಯಲು ಸಿದ್ಧ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ