ಸಾಮಗ್ರಿಗಳು :
ಚಕ್ಕುಲಿ : 12-15
ತೆಂಗಿನತುರಿ : 1 ಕಪ್
ಹಾಲು : 1 ಕಪ್
ಬೆಲ್ಲ : 3/4 - 1 ಕಪ್
ಏಲಕ್ಕಿ ಪುಡಿ : 1/4 ಚಮಚ
ವಿಧಾನ :
ಒಂದು ಪಾತ್ರೆಯಲ್ಲಿ 3-4 ಕಪ್ ನೀರನ್ನು ಕುದಿಯಲು ಇಡಿ. ಈಗ ಚಕ್ಕುಲಿಯನ್ನು ಸಣ್ಣ ಸಣ್ಣ ತುಂಡು ಮಾಡಿಕೊಂಡು ಕುದಿಯುತ್ತಿರುವ ನೀರಿಗೆ ಹಾಕಿ ಉರಿ ಆರಿಸಿ ಅರ್ಧ ನಿಮಿಷ ಬಿಡಿ. ನಂತರ ಇದರಿಂದ ಪೂರ್ತಿಯಾಗಿ ನೀರನ್ನು ಬಸಿದುಕೊಳ್ಳಿ.
ತೆಂಗಿನತುರಿಗೆ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ರುಬ್ಬಿದ ತೆಂಗಿನತುರಿ, ಬೆಲ್ಲ ಮತ್ತು ಏಲಕ್ಕಿ ಪುಡಿ ಹಾಕಿ ಕುದಿಯಲು ಇಡಿ. ಕುದಿ ಬಂದ ಮೇಲೆ ಇದಕ್ಕೆ ಬಿಸಿ ಹಾಲು ಹಾಕಿ ಒಂದು ಕುದಿ ಬಂದ ಮೇಲೆ ರೆಡಿ ಮಾಡಿಟ್ಟುಕೊಂಡ ಚಕ್ಕುಲಿ ಹಾಕಿ ತಕ್ಷಣ ಸರ್ವ್ ಮಾಡಿ.
ಸೂಚನೆಗಳು :
1) ಚಕ್ಕುಲಿ ಮಾಡುವ ವಿಧಾನಕ್ಕೆ: http://gelatiyarapakashale.blogspot.in/2014/09/blog-post.html
ಇಲ್ಲಿ ನೋಡಿ. ಮತ್ತು ಮಾಡುವಾಗ ಮೆಣಸಿನ ಪುಡಿ ಹಾಕಬೇಡಿ.
2) ಚಕ್ಕುಲಿ ಹಾಕಿ ತುಂಬಾ ಹೊತ್ತು ಬಿಟ್ಟರೆ ಪೂರ್ತಿ ಮೆತ್ತಗಾಗಿ ಕರಗಿಹೋಗುತ್ತದೆ. ಉಳಿದೆಲ್ಲವನ್ನೂ ರೆಡಿ ಮಾಡಿಟ್ಟುಕೊಂಡು ಬಡಿಸುವ ಸಮಯದಲ್ಲಿ ಚಕ್ಕುಲಿ ಕುದಿಯುವ ನೀರಿಗೆ ಹಾಕಿ ತೆಗೆದು ಪಾಯಸಕ್ಕೆ ಹಾಕಬೇಕು.
3) ಅರ್ಧ ಬೆಲ್ಲ ಮತ್ತು ಅರ್ಧದಷ್ಟು ಸಕ್ಕರೆ ಕೂಡ ಹಾಕಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ