ಊಟಕ್ಕೆಂದು ಮಾಡಿದ ಸಾಂಬಾರ್ ಹೆಚ್ಚು ಉಳಿದು ಬಿಟ್ಟರೆ ಮತ್ತೆ ಅದನ್ನೇ ಮರುದಿನ ಊಟಕ್ಕೆ ತಿನ್ನಲು ಬೇಜಾರು, ಚೆಲ್ಲಲೂ ಮನಸ್ಸು ಬಾರದು.... ಅಂಥ ಸಮಯದಲ್ಲಿ ಅದನ್ನೇ ಸ್ವಲ್ಪ ರುಚಿ ಬದಲಿಸಿ ಮರುದಿನ ಬೆಳಿಗ್ಗೆಯ ಉಪಹಾರದ ದೋಸೆ ಅಥವಾ ಚಪಾತಿ ಜೊತೆ ತಿನ್ನಬಹುದು....
ಸಾಮಗ್ರಿಗಳು:
ಉಳಿದ ಸಾಂಬಾರ್ : 2 ಕಪ್
ಈರುಳ್ಳಿ : 2
ಬೆಳ್ಳುಳ್ಳಿ : 4-5 ಎಸಳು
ತೆಂಗಿನ ತುರಿ : 2-3 ಚಮಚ
ಸಕ್ಕರೆ: 1/2 ಚಮಚ
ಹಸಿಮೆಣಸಿನ ಕಾಯಿ : 1-2
ತುಪ್ಪ : 2 ಚಮಚ
ಎಣ್ಣೆ :1 ಚಮಚ (Optional)
ಸಾಸಿವೆ : 1/2 ಚಮಚ
ವಿಧಾನ :
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಬೆಳ್ಳುಳ್ಳಿ ಸಿಪ್ಪೆ ತೆಗೆದು ಜಜ್ಜಿಕೊಳ್ಳಿ ಮತ್ತು ಹಸಿಮೆಣಸಿನ ಕಾಯಿಯನ್ನು ಉದ್ದುದ್ದ ಸೀಳಿಕೊಳ್ಳಿ. ಬಾಣಲೆಗೆ ತುಪ್ಪ ಮತ್ತು ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಸಾಸಿವೆ ಹಾಕಿ ಚಿಟಪಟಾಯಿಸಿ, ಹಸಿಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ. ಜಜ್ಜಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿದು, ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಸಾಂಬಾರ್, ಸಕ್ಕರೆ, ತೆಂಗಿನ ತುರಿ ಬೇಕಿದ್ದಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ. ಬಿಸಿ ಬಿಸಿ ಸಾಂಬಾರ್ ಭಾಜಿ ದೋಸೆಯ ಜೊತೆ ಬಲು ರುಚಿ. ಚಪಾತಿಯ ಜೊತೆಯೂ ತಿನ್ನಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ