ಶುಕ್ರವಾರ, ಮೇ 5, 2017

ಮಜ್ಜಿಗೆ ಪಳದ್ಯ: ( 2 ವಿಧಾನಗಳು )

ವಿಧಾನ -1 :

ಸಾಮಗ್ರಿಗಳು:
ಮಜ್ಜಿಗೆ (ಸ್ವಲ್ಪ ದಪ್ಪ ಇರಬೇಕು, ಆದರೆ ಮೊಸರಲ್ಲ) - 2 ಲೋಟ,
ಉಪ್ಪು - ರುಚಿಗೆ, ಹಸಿಮೆಣಸು - 2,
ಜೀರಿಗೆ -  1/4 ಚಮಚ,
ಸಾಸಿವೆ - 1/4 ಚಮಚ,
ಕರಿಬೇವು - 4-5 ಎಲೆಗಳು,
ಬೆಳ್ಳುಳ್ಳಿ - 2 ಎಸಳು,
ಅರಿಶಿನಪುಡಿ - ಚಿಟಿಕೆ.ಎಣ್ಣೆ - 1 ಟೇ.ಚಮಚ


ವಿಧಾನ : ಮಜ್ಜಿಗೆಗೆ ಬೇಕಷ್ಟು ಉಪ್ಪು ಹಾಕಿ ಕದಡಿಟ್ಟುಕೊಳ್ಳಿ. ಒಗ್ಗರಣೆ ಸೌಟಿಗೆ ಸ್ವಲ್ಪ ಎಣ್ಣೆ ಹಾಕಿಕೊ೦ಡು ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಹಸಿಮೆಣಸಿನ ಚೂರುಗಳು, ಜಜ್ಜಿದ ಬೆಳ್ಳುಳ್ಳಿ, ಕರಿಬೇವು ಅರಿಶಿನ ಪುಡಿ ಹಾಕಿ ಈ ಒಗ್ಗರಣೆಯನ್ನು ಮಜ್ಜಿಗೆಗೆ ಹಾಕಿದರೆ ಮಜ್ಜಿಗೆ ಪಳದ್ಯ ರೆಡಿ.

ವಿಧಾನ -2 :

(2 ನೇ ವಿಧಾನದಲ್ಲಿ ಅರಿಶಿನ & ಜೀರಿಗೆ ಹಾಕುವುದಿಲ್ಲ. ಉದ್ದಿನಬೇಳೆ & ನೀರು ಒಗ್ಗರಣೆಗೆ ಹಾಕಬೇಕು. - ಮತ್ತೆಲ್ಲ ಅದೆ ಸಾಮಗ್ರಿಗಳು)

ಬಾಣಲೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಉದ್ದಿನಬೇಳೆ, ಸಾಸಿವೆ, ಕರಿಬೇವು,ಹಸಿಮೆಣಸು, ಬೆಳ್ಳುಳ್ಳಿ ಹಾಕಿ ಹಾಗೆ 1 ನಿಮಿಷ ಬಿಟ್ಟು ನೀರು ಹಾಕಿ ಉಪ್ಪು ಹಾಕಿ ನೀರು ಕುದಿಬ೦ದ ಮೇಲೆ ಉರಿ ಆರಿಸಿ,, 3 ನಿಮಿಷ ಬಿಟ್ಟು ಮಜ್ಜಿಗೆ ಸೇರಿಸಿ.,, ಈಗ ಬಿಸಿ ಬಿಸಿ ಮಜ್ಜಿಗೆ ಪಳದ್ಯ ರೆಡಿ

ಸೂಚನೆ : ಮಜ್ಜಿಗೆ ಸ್ವಲ್ಪ ಹುಳಿ ಇದ್ದರೆ ಚೆನ್ನಾಗಿರುತ್ತದೆ.












ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ