ಓದುಗರಿಗೆ ಶರನ್ನವರಾತ್ರಿ ಶುಭಾಶಯಗಳು. ನವರಾತ್ರಿಯಲ್ಲಿ ದೇವಿಗೆ ನೈವೇದ್ಯ ಮಾಡಲು ಒಂದು ಪಾಯಸ ನಿಮಗಾಗಿ... ಸಣ್ಣಕ್ಕಿ ಎಂದರೆ ಮಲೆನಾಡಿನ ಕಡೆ ಸಿಗುವ ಸುವಾಸನೆಯುಕ್ತ, ಗಾತ್ರದಲ್ಲಿ ಬೇರೆ ಅಕ್ಕಿಗಿಂತ ಸಣ್ಣದಾದ ಅಕ್ಕಿ. ಬೆಂಗಳೂರಿನಲ್ಲಿ ಸಿಗುವ ಜೀರಿಗೆ ಅಕ್ಕಿ ಇದನ್ನು ಹೋಲುತ್ತದೆ ಆದರೆ ಸಣ್ಣಕ್ಕಿಯಂತೆ ಸುವಾಸನೆಯಿರುವುದೇ ಎಂಬುದನ್ನು ನಾನು ತಂದು ನೋಡಿಲ್ಲ... !
ಸಾಮಗ್ರಿಗಳು :
ಸಣ್ಣಕ್ಕಿ : 1/2 ಕಪ್
ಹಾಲು: 3/4 - 1 ಲೀಟರ್
ಸಕ್ಕರೆ : 1.5 -2 ಕಪ್
ಕೇಸರಿ ದಳ : 1 ಚಿಟಿಕೆ
ಉಪ್ಪು : 2 ಚಿಟಿಕೆ
ವಿಧಾನ :
2 ಚಮಚ ಹಾಲಿನಲ್ಲಿ ಕೇಸರಿ ದಳಗಳನ್ನು ನೆನೆಸಿಡಿ. ಅಕ್ಕಿಯನ್ನು ತೊಳೆದು ಅರ್ಧ ಲೀಟರ್ ಹಾಲು ಬೇಕಿದ್ದಲ್ಲಿ ಒಂದು ಕಪ್ ನೀರು ಹಾಕಿ ಬೇಯಲು ಇಡಿ. ಆಗಾಗ ಕಲಕುತ್ತಿರಿ. ಹಾಲು ಕಮ್ಮಿಯಾದಂತೆ ಹಾಕುತ್ತಿರಿ. ಅಕ್ಕಿ ಚೆನ್ನಾಗಿ ಅರಳುವಷ್ಟು ಬೇಯಬೇಕು. ಅಂದರೆ ಪೂರ್ತಿ ಮೆತ್ತಗೆ ಬೇಯಬೇಕು. ಚೆನ್ನಾಗಿ ಬೆಂದು, ಅನ್ನ ಅರಳಿದ ಮೇಲೆ ಸಕ್ಕರೆ, ನೆನಸಿಟ್ಟ ಕೇಸರಿ ಹಾಲು ಹಾಕಿ ಕಲಕಿ. ಎಷ್ಟು ದಪ್ಪ ಬೇಕು ನೋಡಿಕೊಂಡು ಮತ್ತೆ ಹಾಲು ಬೇಕಿದ್ದಲ್ಲಿ ಹಾಕಿ, ಉಪ್ಪು ಹಾಕಿ ಕುದಿಸಿ. ದೇವಿಗೆ ನೈವೇದ್ಯ ಮಾಡಿಕೊಂಡು ಬಿಸಿ ಬಿಸಿ ಪಾಯಸಕ್ಕೆ ತುಪ್ಪ ಹಾಕಿಕೊಂಡು ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ