ಸಾಮಾಗ್ರಿಗಳು: ಅಕ್ಕಿ 2 ಕಪ್, ಉದ್ದಿನ ಬೇಳೆ ½ ಕಪ್, ಕಡಲೆ ಬೇಳೆ 3 ಚಮಚ , ಮೆ೦ತೆ – ½ ಚಮಚ, ಜೀರಿಗೆ 1 ½ ಚಮಚ, ಒಣಮೆಣಸು 5-6, ಧನಿಯ 1 ½ ಚಮಚ, ಈರುಳ್ಳಿ 2 ದೊಡ್ಡದು, ಕೊತ್ತ೦ಬರಿ ಸೊಪ್ಪು ಸ್ವಲ್ಪ, ಹಸಿ ಮೆಣಸು 2-3, ಕರಿಬೇವು
ಮಾಡುವ ವಿಧಾನ:ಅಕ್ಕಿ,ಉದ್ದಿನ ಬೇಳೆ, ಕಡಲೆ ಬೇಳೆ, ಮೆ೦ತೆ ಇವನ್ನು
6-7 ಗ೦ಟೆಗಳ ಕಾಲ ನೀರಿನಲ್ಲಿ ನೆನೆಸಿಡಿ (ಬೆಳಿಗ್ಗೆ ನೆನೆಸಿ ರಾತ್ರಿ ರುಬ್ಬಿ) ರುಬ್ಬುವಾಗ ಇವೆಲ್ಲದರ
ಜೊತೆಗೆ ಧನಿಯಾ, ಜೀರಿಗೆ, ಚಿಟಿಕೆ ಅರಿಶಿನ ಹಾಕಿ ನುಣ್ಣಗೆ ರುಬ್ಬಿ ಇಡಿ. ರಾತ್ರಿ ರುಬ್ಬಿ ಇಡುವುದರಿ೦ದ
ಬೆಳಿಗ್ಗೆ ಹೊತ್ತಿಗೆ ಹಿಟ್ಟು ಚೆನ್ನಾಗಿ ಹದ ಬ೦ದಿರುತ್ತದೆ. ದೋಸೆ ಹಿಟ್ಟಿಗೆ ಈರುಳ್ಳಿ, ಕೊತ್ತ೦ಬರಿ ಸೊಪ್ಪು ಮತ್ತು
ಹಸಿಮೆಣಸನ್ನು ಸಣ್ಣಗೆ ಹೆಚ್ಚಿ ಹಾಕಿ. (ಕರಿಬೇವನ್ನು ಅಕ್ಕಿಯ ಜೊತೆಗೆ ರುಬ್ಬಲು ಹಾಕಬಹುದು ಅಥವಾ ಕೊತ್ತ೦ಬರಿ ಸೊಪ್ಪಿನ ಹಾಗೆ ಸಣ್ಣಗೆ ಹೆಚ್ಚಿ ದೋಸೆ ಹಿಟ್ಟಿಗೆ ಸೇರಿಸ ಬಹುದು) ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲ ಚಿಕ್ಕ ಚಮಚದಲ್ಲಿ
ಅರ್ಧ ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. (ಚಳಿಗಾಲದ ಸಮಯದಲ್ಲಿ ಅಕ್ಕಿಯನ್ನು ಹಿ೦ದಿನ ದಿನ ಮಧ್ಯಾಹ್ನವೇ
ರುಬ್ಬಿಕೊ೦ಡರೆ ಮರುದಿನ ಬೆಳಿಗ್ಗೆಯ ಹೊತ್ತಿಗೆ ಹಿಟ್ಟಿನ ಸರಿಯಾಗಿ ಹದ ಬ೦ದಿರುತ್ತದೆ)
ಕಾವಲಿಗೆ ಎಣ್ಣೆ ಹಚ್ಚಿಕೊ೦ಡು ದೋಸೆ ಮಾಡುವಾಗ ಅದರ ಮೇಲೆ ಸ್ವಲ್ಪ ಎಣ್ಣೆ
ಹಾಕಿ.
ಈ ದೋಸೆಯನ್ನು ತುಪ್ಪ ಬೆಲ್ಲ ಅಥವಾ ಚಟ್ನಿ ಜೊತೆ ತಿನ್ನಬಹುದು. ಇದಕ್ಕೆ ಹುರಿಗಡಲೆ ಚಟ್ನಿ
/ ಶೇ೦ಗಾ ಚಟ್ನಿ
ಚೆನ್ನಾಗಿರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ