ಶುಕ್ರವಾರ, ಜುಲೈ 31, 2015

ಮೊಸರನ್ನ (Curd Rice) :

ಸಾಮಗ್ರಿಗಳು: 
ಅಕ್ಕಿ : 1/2 ಕಪ್,
ಮೊಸರು : 1-1.5 ಕಪ್,
ತೆಂಗಿನ ತುರಿ : 2 ಚಮಚ,
ದಾಳಿಂಬೆ : 2 ಟೇಬಲ್ ಚಮಚ,
ಒಣ ದ್ರಾಕ್ಷಿ : 1 ಟೇಬಲ್ ಚಮಚ,
ಗೋಡಂಬಿ ಚೂರುಗಳು : 1 ಚಮಚ, 
ಎಣ್ಣೆ : 2 ಚಮಚ,
ಉದ್ದಿನಬೇಳೆ : 1/2 ಚಮಚ,
ಜೀರಿಗೆ : 1/4 ಚಮಚ,
ಸಾಸಿವೆ : 1/4 ಚಮಚ,
ಬಿಳಿ ಎಳ್ಳು : 1/4 ಚಮಚ,
ಹಸಿಮೆಣಸಿನ ಕಾಯಿ : 1,
ಕರಿಬೇವು : 4-5 ಎಲೆಗಳು,
ಹೆಚ್ಚಿದ ಕೊತ್ತಂಬರಿ ಸೊಪ್ಪು : 1 ಚಮಚ,
ತುರಿದ ಶುಂಟಿ : 1/4 ಚಮಚ,
ಉಪ್ಪು : ರುಚಿಗೆ 

ವಿಧಾನ : 
ಅಕ್ಕಿ ತೊಳೆದು ಸ್ವಲ್ಪವೇ ಮೆತ್ತಗೆ ಅನ್ನ ಮಾಡಿಕೊಳ್ಳಿ. ಒಂದು ಅಗಲವಾದ ಪಾತ್ರೆಯಲ್ಲಿ ಅನ್ನವನ್ನು ಹರವಿಕೊಂಡು ತಣ್ಣಗಾಗಲು ಬಿಡಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಉದ್ದಿನ ಬೇಳೆ ಹಾಕಿ ಸ್ವಲ್ಪ ಕೆಂಪಗಾದ ಮೇಲೆ, ಜೀರಿಗೆ, ಸಾಸಿವೆ ಹಾಕಿ ಸಿಡಿದ ಮೇಲೆ ಎಳ್ಳು, ಹೆಚ್ಚಿದ ಹಸಿಮೆಣಸಿನ ಕಾಯಿ, ಕರಿಬೇವು, ತುರಿದ ಶುಂಟಿ ಹಾಕಿ ಉರಿ ಆರಿಸಿ ಒಗ್ಗರಣೆಯನ್ನು ಅನ್ನಕ್ಕೆ ಹಾಕಿ ಕಲಸಿ. ನಂತರ ಇದಕ್ಕೆ ಮೊಸರು, ಉಪ್ಪು, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಹಾಕಿ ಕಲಸಿ. ಕೊನೆಯಲ್ಲಿ ದಾಳಿಂಬೆ, ಒಣ ದ್ರಾಕ್ಷಿ, ಗೋಡಂಬಿ ಹಾಕಿ ಕಲಸಿದರೆ ಸವಿ ಸವಿ ಮೊಸರನ್ನ ಸಿದ್ಧ. 



ಬುಧವಾರ, ಜುಲೈ 29, 2015

ಪಾಲಕ್- ಕಾರ್ನ್ ಸೂಪ್ :

ಸಾಮಗ್ರಿಗಳು :
ಪಾಲಕ್ ಸೊಪ್ಪು -1 ಕಟ್ಟು, 
ಸ್ವೀಟ್ ಕಾರ್ನ್ - 1/4 ಕಪ್, 
ಈರುಳ್ಳಿ 1 ಸಣ್ಣದು, 
ಬೆಳ್ಳುಳ್ಳಿ - 3-4 ಎಸಳು , 
ಉಪ್ಪು ರುಚಿಗೆ ತಕ್ಕಷ್ಟು, 
ಕಾಳುಮೆಣಸಿನ ಪುಡಿ 1/2 ಚಮಚ,
 ಬೆಣ್ಣೆ 1 ಚಮಚ.

ವಿಧಾನ : ಸ್ವೀಟ್ ಕಾರ್ನನನ್ನು ಕುಕ್ಕರ್ ನಲ್ಲಿ ಬೇಯಿಸಿ. 2 ಸೀಟಿ ಸಾಕು. ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದುಕೊಳ್ಳಿ.  ಒಲೆಯಮೇಲೆ ಬಾಣಲೆ ಇಟ್ಟು ಅದಕ್ಕೆ ಬೆಣ್ಣೆ ಹಾಕಿ, ಬೆಣ್ಣೆ ಕರಗಿದ ಮೇಲೆ ಪಾಲಕ್ ಸೊಪ್ಪು, ಹೆಚ್ಚಿದ ಈರುಳ್ಳಿ & ಬೆಳ್ಳುಳ್ಳಿ ಹಾಕಿ ಸಣ್ಣ ಉರಿಯಲ್ಲಿ ಬಾಡಿಸಿಕೊಳ್ಳಿ. ಇದು ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಪಾಲಕ್ ಮಿಶ್ರಣವನ್ನು ಒ೦ದು ಪಾತ್ರೆಗೆ ಹಾಕಿ 2 ಲೋಟ ನೀರು ಹಾಕಿ ಕುದಿಸಿ. ಹಾಗೆ ಕುದಿಯುತ್ತಿರುವಾಗ ಉಪ್ಪು, ಕಾಳುಮೆಣಸಿನ ಪುಡಿ, ಬೇಯಿಸಿದ ಸ್ವೀಟ್ ಕಾರ್ನ್ ಹಾಕಿದರೆ ಬಿಸಿ ಬಿಸಿ ಸೂಪ್ ಕುಡಿಯಲು ಸಿದ್ದ.

ಮಂಗಳವಾರ, ಜುಲೈ 14, 2015

ಮಾವಿನಹಣ್ಣಿನ ರಸಾಯನ :


ಸಾಮಗ್ರಿಗಳು : ಮಾವಿನಹಣ್ಣು -4, ಸಕ್ಕರೆ  - 5 ಟೀ ಚಮಚ, ಏಲಕ್ಕಿ ಚಿಟಿಕೆ, ತೆ೦ಗಿನಕಾಯಿತುರಿ 1/2 ಕಪ್, ಹಾಲು 1 ಲೋಟ, ಉಪ್ಪು ಚಿಟಿಕೆ.


ವಿಧಾನ : ಮಾವಿನಹಣ್ಣನ್ನು ಸಣ್ಣದಾಗಿ ಹೆಚ್ಚಿಕೊ೦ಡು, ಅದಕ್ಕೆ ಸಕ್ಕರೆ ಏಲಕ್ಕಿ ಪುಡಿ ತೆ೦ಗಿನಕಾಯಿತುರಿಯನ್ನು ನುಣ್ಣಗೆ ರುಬ್ಬಿಕೊ೦ಡು ಅದನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಹಾಲು ಉಪ್ಪು ಹಾಕಿದರೆ ಮಾವಿನಹಣ್ಣಿನ ರಸಾಯನ ಸವಿಯಲು ಸಿದ್ದ. (ಸಕ್ಕರೆಯ ಬದಲು ಬೆಲ್ಲ ಕೂಡಾ ಹಾಕಬಹುದು ಅಥವ ಎರಡನ್ನು ಮಿಕ್ಸ್ ಮಾಡಿ ಹಾಕಬಹುದು.)

ಇದನ್ನು ಹಾಗೆ ತಿನ್ನಬಹುದು ಅಥವಾ ಪೂರಿ/ತೆಳ್ಳಗಿನ ಗರಿ ಗರಿ ದೋಸೆ ಜೊತೆ ತಿನ್ನಬಹುದು.

ಸೂಚನೆ : ಮಾವಿನ ಹಣ್ಣಿನ ರುಚಿಗೆ ತಕ್ಕಹಾಗೆ ಸಕ್ಕರೆ/ಬೆಲ್ಲ ಬಳಸಿ. ಮಾವಿನ ಹಣ್ಣು ತು೦ಬಾ ಸಿಹಿಯಾಗಿದ್ದರೆ ಸಕ್ಕರೆ/ಬೆಲ್ಲ ಸ್ವಲ್ಪ ಸಾಕು. ಹುಳಿ  ಜಾಸ್ತಿ ಇದ್ದರೆ ಸಕ್ಕರೆ/ಬೆಲ್ಲ ಹಾಕಿ.

ಮಂಗಳವಾರ, ಜುಲೈ 7, 2015

ಮಾವಿನ ಕಾಯಿ ತಂಬುಳಿ:

ಸಾಮಗ್ರಿಗಳು :
ತೋತಾಪುರಿ ಮಾವಿನಕಾಯಿ : 1/2,
ಹಸಿ ಮೆಣಸಿನಕಾಯಿ : ೧-೨,
ಸಕ್ಕರೆ : ೧/೨ ಚಮಚ,
ಉಪ್ಪು : ರುಚಿಗೆ 

ಒಗ್ಗರಣೆಗೆ :
ಎಣ್ಣೆ : ೨ ಚಮಚ, 
ಸಾಸಿವೆ: ೧/೨ ಚಮಚ,
ಕರಿಬೇವು : ೫-೬ ಎಲೆಗಳು

ವಿಧಾನ :
ಮಾವಿನಕಾಯಿ ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ. ಅದನ್ನು ಮಿಕ್ಸಿಗೆ ಹಾಕಿ ಹಸಿ ಮೆಣಸು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಎರಡು ಕಪ್ ನಷ್ಟು ನೀರು ಹಾಕಿ ಸಕ್ಕರೆ, ಉಪ್ಪು ಹಾಕಿ ಕಲಕಿ. ರುಚಿ ನೋಡಿಕೊಂಡು ಉಪ್ಪು ಸಿಹಿ ಸರಿಪಡಿಸಿ. ಹುಳಿ ಜಾಸ್ತಿ ಇದ್ದರೆ ಸ್ವಲ್ಪ ನೀರು ಸೇರಿಸಿ. ನಂತರ ಎಣ್ಣೆ, ಸಾಸಿವೆ ಒಗ್ಗರಣೆ ಮಾಡಿ ಅದಕ್ಕೆ ಕೊನೆಯಲ್ಲಿ ಕರಿಬೇವು ಹಾಕಿ ತಂಬುಳಿಗೆ ಒಗ್ಗರಣೆ ಹಾಕಿ, ತಕ್ಷಣ ಕರಿಬೇವನ್ನು ಕೈಯಲ್ಲಿ ಅರೆಯಿರಿ. (ಒಗ್ಗರಣೆಗೆ ಸ್ವಲ್ಪ ಇಂಗು ಬೇಕಾದರೂ ಸೇರಿಸಿಕೊಳ್ಳಬಹುದು). ಈಗ ತಂಬುಳಿ / ಹಸಿ ಮಾವಿನಕಾಯಿ ಅಪ್ಪೆಹುಳಿ ಸ್ವಲ್ಪ ಮೆತ್ತಗಿನ ಅನ್ನದ ಜೊತೆ ಸವಿಯಲು ಸಿದ್ಧ. 


ಸೂಚನೆ:
ಹುಳಿ, ಖಾರ, ಉಪ್ಪು ಎಲ್ಲಾ ಹದವಾಗಿದ್ದರೆ ರುಚಿಯಾಗಿರುತ್ತದೆ. 

ಗುರುವಾರ, ಜುಲೈ 2, 2015

ಬಾಳೇಹಣ್ಣಿನ ಪಾಯಸ (ರಸಾಯನ) :

ಸಾಮಗ್ರಿಗಳು : 
ಚೆನ್ನಾಗಿ ಕಳಿತ ಬಾಳೇಹಣ್ಣು 5, 
ಸಕ್ಕರೆ 4 ಟೇಬಲ್ ಚಮಚ,
 ಏಲಕ್ಕಿ 2,
ತೆ೦ಗಿನಕಾಯಿತುರಿ 1/4 ಕಪ್
ಹಾಲು 1/4  ಕಪ್
ಉಪ್ಪು ಚಿಟಿಕೆ

ವಿಧಾನ : ಬಾಳೇಹಣ್ಣನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಮತ್ತು  ನುಣ್ಣಗೆ ರುಬ್ಬಿಕೊ೦ಡ ತೆ೦ಗಿನಕಾಯಿತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಹಾಲು ಚಿಟಿಕೆ ಉಪ್ಪು ಹಾಕಿದರೆ ಬಾಳೇಹಣ್ಣಿನ ಪಾಯಸ ಸವಿಯಲು ಸಿದ್ದ.



ಸೂಚನೆ: ಸಕ್ಕರೆಯ ಬದಲು ಬೆಲ್ಲ ಕೂಡ ಹಾಕಿ ಮಾಡಬಹುದು.