ಸಾಮಗ್ರಿಗಳು :
ಮಂಡಕ್ಕಿ : 1/4 ಕೆಜಿ
ತೆಳ್ಳಗೆ ಹೆಚ್ಚಿದ ಒಣ ಕೊಬ್ಬರಿ : 1/2 ಕಪ್
ಹುರಿಗಡಲೆ : 1/2 ಕಪ್
ಶೇಂಗಾ : 1/2 ಕಪ್
ಬೆಳ್ಳುಳ್ಳಿ : 1 ಗಡ್ಡೆ (ಬೇಕಿದ್ದಲ್ಲಿ ಮಾತ್ರ)
ಉಪ್ಪು : 1/2 ಚಮಚ
ಸಕ್ಕರೆ ಪುಡಿ : 1/4 ಕಪ್ (ನಿಮ್ಮ ರುಚಿಗೆ ತಕ್ಕಷ್ಟು)
ಅಚ್ಚ ಮೆಣಸಿನ ಪುಡಿ : 2 ಚಮಚ
ಅರಿಶಿನ ಪುಡಿ : 1/2 ಚಮಚ
ಎಣ್ಣೆ : 5-6 ಚಮಚ
ಮಂಡಕ್ಕಿ : 1/4 ಕೆಜಿ
ತೆಳ್ಳಗೆ ಹೆಚ್ಚಿದ ಒಣ ಕೊಬ್ಬರಿ : 1/2 ಕಪ್
ಹುರಿಗಡಲೆ : 1/2 ಕಪ್
ಶೇಂಗಾ : 1/2 ಕಪ್
ಬೆಳ್ಳುಳ್ಳಿ : 1 ಗಡ್ಡೆ (ಬೇಕಿದ್ದಲ್ಲಿ ಮಾತ್ರ)
ಉಪ್ಪು : 1/2 ಚಮಚ
ಸಕ್ಕರೆ ಪುಡಿ : 1/4 ಕಪ್ (ನಿಮ್ಮ ರುಚಿಗೆ ತಕ್ಕಷ್ಟು)
ಅಚ್ಚ ಮೆಣಸಿನ ಪುಡಿ : 2 ಚಮಚ
ಅರಿಶಿನ ಪುಡಿ : 1/2 ಚಮಚ
ಎಣ್ಣೆ : 5-6 ಚಮಚ
ವಿಧಾನ :
ದಪ್ಪ ತಳದ ದೊಡ್ಡ ಪಾತ್ರೆಗೆ ಎಣ್ಣೆ ಹಾಕಿ ಕಾದ ಮೇಲೆ ಶೇಂಗಾ ಹಾಕಿ ಹುರಿದು, ಒಣ ಕೊಬ್ಬರಿ ಹಾಕಿ ಹುರಿಯಿರಿ. ಈಗ ಜಜ್ಜಿದ ಬೆಳ್ಳುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದು ಹುರಿಗಡಲೆ ಹಾಕಿ ಸ್ವಲ್ಪ ಹುರಿದು ಅದಕ್ಕೆ ಅರಿಶಿನ ಪುಡಿ, ಅಚ್ಚ ಮೆಣಸಿನ ಪುಡಿ ಹಾಕಿ ಉರಿ
ಆರಿಸಿ. ಒಗ್ಗರಣೆ ತಣ್ಣಗಾದ ಮೇಲೆ ಅದಕ್ಕೆ ಉಪ್ಪು, ಸಕ್ಕರೆ ಪುಡಿ ಹಾಕಿ ಕಲಸಿ, ಮಂಡಕ್ಕಿ ಹಾಕಿ ಕಲಸಿ. ಮಂಡಕ್ಕಿ ಗರಿಗರಿ ಇಲ್ಲವಾದಲ್ಲಿ ಮತ್ತೆ ಸಣ್ಣ ಉರಿಯಲ್ಲಿ ಹುರಿಯಿರಿ. ಬಿಸಿ ಆರಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ. ಗರಿಗರಿಯಾದ ಮಂಡಕ್ಕಿ ಒಗ್ಗರಣೆ ಬಿಸಿ ಬಿಸಿ ಟೀ/ಕಾಫಿ ಜೊತೆ ಒಳ್ಳೆಯ ಸಂಗಾತಿ.
ಸಲಹೆ: ಮಂಡಕ್ಕಿ ಗರಿ ಮಾಡಲು ಇನ್ನೊಂದು ಉಪಾಯವೆಂದರೆ ಶುಭ್ರವಾದ ಕಾಟನ್ ಬಟ್ಟೆ ಮೇಲೆ ಮಂಡಕ್ಕಿ ಹರವಿ ಅದರ ಮೇಲೆ ಇನ್ನೊಂದು ಕಾಟನ್ ಬಟ್ಟೆ ಮುಚ್ಚಿ 3-4 ಘಂಟೆ ಬಿಸಿಲಿನಲ್ಲಿ ಇಟ್ಟರೆ ಗರಿಗರಿಯಾಗುತ್ತದೆ.